ಬರಲಿದೆ ನೋಕಿಯಾ ಸ್ಮಾರ್ಟ್‌ ಎಚ್‌.ಡಿ. ಟಿ.ವಿ.

ಸ್ಪರ್ಧಾತ್ಮಕ ಬೆಲೆಯೊಂದಿಗೆ ದೇಶದ ಮಾರುಕಟ್ಟೆಗೆ ಲಗ್ಗೆ

Team Udayavani, Nov 10, 2019, 8:01 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ನೋಕಿಯಾ ಹೆಸರು ಎಲ್ಲರಿಗೂ ಗೊತ್ತು. ಒಂದಾನೊಂದು ಕಾಲದಲ್ಲಿ ಮಿರಮಿರನೆ ಮಿಂಚುತ್ತಿದ್ದ ನೋಕಿಯಾ ಫೀಚರ್‌ ಫೋನ್‌ಗಳನ್ನು ಎಲ್ಲರೂ ಕೈಯಲ್ಲಿ ಹಿಡಿದುಕೊಂಡವರೇ. ಅದೀಗ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೂ ಪ್ರವೇಶಿಸಿದೆ. ಮುಂದುವರಿದ ಭಾಗವಾಗಿ ಈಗ ನೋಕಿಯಾ ಟಿ.ವಿ. ಕೂಡ ಬರಲಿದೆ.

ನೋಕಿಯಾ ಶೀಘ್ರದಲ್ಲಿ ಭಾರತದಲ್ಲಿ ಸ್ಮಾರ್ಟ್‌ ಟಿ.ವಿ.ಗಳನ್ನು ಪರಿಚಯಿಸಲಿದೆ. 24 ಇಂಚಿನಿಂದ 65 ಇಂಚಿನ ವರೆಗೆ ಅಲ್ಟ್ರಾ ಎಚ್‌ಡಿ ಪರದೆಯನ್ನು ಈ ಟಿ.ವಿ.ಗಳು ಹೊಂದಿರಲಿವೆ. ಅಷ್ಟೇ ಅಲ್ಲ ಬೆಲೆಯೂ ಅತ್ಯಂತ ಸ್ಪರ್ಧಾತ್ಮಕವಾಗಿ ಇರಲಿದೆ. ಮೂಲಗಳ ಪ್ರಕಾರ ಸ್ಮಾರ್ಟ್‌ ಟಿ.ವಿ.ಗಳಿಗೆ ಸಡ್ಡು ಹೊಡೆಯುವಂತೆ 6999 ರೂ.ಗಳಿಂದ 64999 ರೂ.ಗಳವರೆಗೆ ದರ ಇರಲಿದೆ. ನೋಕಿಯಾ ಸ್ಮಾರ್ಟ್‌ ಟಿ.ವಿ.ಗಳು ಜೆ.ಬಿ.ಎಲ್‌. ಸೌಂಡ್‌ ವ್ಯವಸ್ಥೆಯನ್ನು ಹೊಂದಿರಲಿದ್ದು, ಸ್ಮಾರ್ಟ್‌ ಟಿ.ವಿ. ಮಾದರಿಗಳಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲಿದೆ.

ಇನ್ನೊಂದು ಪ್ರಸಿದ್ಧ ಮೊಬೈಲ್‌ ತಯಾರಿಕೆ ಕಂಪೆನಿ ಮೊಟೊರೊಲಾ ಕೂಡ ಭಾರತೀಯ ಟಿ.ವಿ. ಮಾರುಕಟ್ಟೆಗೆ ಸ್ಮಾರ್ಟ್‌ ಟಿ.ವಿ.ಗಳನ್ನು ಪರಿಚಯಿಸುವುದಾಗಿ ಹೇಳಿತ್ತು. 32 ಇಂಚಿನಿಂದ 65 ಇಂಚಿನವರೆಗೆ ಈ ಟಿ.ವಿ.ಗಳು ಇರಲಿದ್ದು, ಬೆಲೆ 13999 ರೂ.ಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿತ್ತು.

ಅಂದಹಾಗೆ ನೋಕಿಯಾ ತನ್ನ ಸ್ಮಾರ್ಟ್‌ ಟಿ.ವಿ.ಗಳ ಮಾರಾಟವನ್ನು ಪ್ರಸಿದ್ಧ ಮಾರಾಟ ಜಾಲತಾಣ ಫ್ಲಿಪ್‌ಕಾರ್ಟ್‌ ಮೂಲಕ ಮಾಡಲಿದೆ. ಮಾರ್ಕ್‌ ಕ್ಯೂ ಹೆಸರಿನಲ್ಲಿ ಈ ಟಿ.ವಿ.ಗಳು ಇರಲಿವೆ. ದೇಶದಲ್ಲಿ ಅತಿ ಹೆಚ್ಚು ಟಿ.ವಿ.ಗಳನ್ನು ಮಾರಾಟ ಮಾಡುವ ತಾಣಗಳಲ್ಲಿ ಫ್ಲಿಪ್‌ಕಾರ್ಟ್‌ ಕೂಡ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ನೋಕಿಯಾ ಮತ್ತು ಫ್ಲಿಪ್‌ಕಾರ್ಟ್‌ ಈ ಬಗ್ಗೆ ಒಪ್ಪಂದಕ್ಕೆ ಬಂದಿವೆ ಎಂದು ಹೇಳಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ