ನಾಲ್ಕು ಕ್ಯಾಮರಾಗಳ Oppo F15 ಭಾರತದಲ್ಲಿ ಬಿಡುಗಡೆ: ಇದರ ವೈಶಿಷ್ಟ್ಯಗಳೇನು ಗೊತ್ತಾ ?

Team Udayavani, Jan 17, 2020, 8:17 AM IST

ನವದೆಹಲಿ:  ಭಾರೀ ಕುತೂಹಲ ಕೆರಳಿಸಿದ್ದ  ಒಪ್ಪೋ F15  ಸ್ಮಾರ್ಟ್ ಫೋನ್ ಗುರುವಾರ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಜನವರಿ 24 ರಿಂದ ಆನ್ ಲೈನ್ ಮತ್ತು ಆಫ್ ಲೈನ್ ಗಳಲ್ಲಿ ಗ್ರಾಹಕರ ಕೈ ಸೇರಲಿದೆ ಎಂದ ಒಪ್ಪೋ ಕಂಪೆನಿ ತಿಳಿಸಿದೆ.

ಆಕರ್ಷಕವೆಂದರೇ ಆಫ್ ಲೈನ್ ಸ್ಟೋರ್ ಗಳಲ್ಲಿ ಈ ಹೊಸ ಸ್ಮಾರ್ಟ್ ಫೋನ್ ಕೊಂಡರೇ ಹಲವು ಕೊಡುಗೆಗಳು ಲಭ್ಯವಾಗಲಿದ್ದು ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ 5% ಕ್ಯಾಶ್ ಬ್ಯಾಕ್ ಮತ್ತು ಲೋನ್ ಗಳು ದೊರಕಲಿವೆ. ಮಾತ್ರವಲ್ಲದೆ ಐಸಿಐಸಿಐ ಮತ್ತು ಯೆಸ್ ಬ್ಯಾಂಕ್ ನಲ್ಲೂ 5% ಕ್ಯಾಶ್ ಬ್ಯಾಕ್ ಜೊತೆಗೆ ಕ್ರೆಡಿಟ್ ಕಾರ್ಡ್ ಇಎಂಐ ಸಿಗಲಿದೆ.

ಒಪ್ಪೋ F15  ವಿಶೇಷತೆಗಳು ಮತ್ತು ಫೀಚರ್ ಗಳು :

ಈ ಸ್ಮಾರ್ಟ್ ಫೋನ್ 6.6 ಇಂಚಿನ ಫುಲ್ HD+ AMOlED  ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಮಿಡಿಯಾ ಟೆಕ್ P70  ಪ್ರೊಸೇಸರ್ ಅನ್ನು 8ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೊರೇಜ್ ನೊಂದಿಗೆ ಒಳಗೊಂಡಿದೆ. ಮಾತ್ರವಲ್ಲದೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 ಜಿಬಿ ವರೆಗೂ ಸ್ಟೋರೇಜ್ ಅನ್ನು ವಿಸ್ತರಿಸಬಹುದಾದ ಸೌಲಭ್ಯವನ್ನು ಹೊಂದಿದೆ.

ಒಪ್ಪೋ F15   ಕ್ಯಾಡ್ ರಿಯರ್ ಕ್ಯಾಮರಾ ಸೆಟಪ್ ಹೊಂದಿದ್ದು ಪ್ರಾಥಮಿಕ ಕ್ಯಾಮರ ಸಾಮಾರ್ಥ್ಯ 48 ಮೆಗಾಫಿಕ್ಸೆಲ್ (F1.7), 8 ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ಮೈಕ್ರೋ ಲೆನ್ಸ್ (119 ಡಿಗ್ರಿ) =. 2 ಎಂಪಿ ಮೋನೋ ಲೆನ್ಸ್ ಮತ್ತು 2 ಎಂಪಿ ಪೋರ್ಟ್ರೇಟ್ ಲೆನ್ಸ್ ಅನ್ನು ಒಳಗೊಂಡಿದೆ. ಮಾತ್ರವಲ್ಲದೆ 16 ಎಂಪಿ ಸೆಲ್ಫಿ ಕ್ಯಾಮಾರವನ್ನು ಹೊಂದಿದೆ.

ಈ ಸ್ಮಾರ್ಟ್ ಪೋನಿನ ಬ್ಯಾಟರಿ ಸಾಮಾರ್ಥ್ಯ 4,000 mAh ಜೊತೆಗೆ 20W Voooc 3,0 ಫ್ಲ್ಯಾಶ್ ಚಾರ್ಜ್ ಅನ್ನು ಹೊಂದಿದೆ. ಇತರ ಫೀಚರ್ ಗಳೆಂದರೇ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್, ಯುಎಸ್ ಬಿ, 3 ಕಾರ್ಡ್ ಸ್ಲಾಟ್ , ಮುಂತಾದವನ್ನು ಒಳಗೊಂಡಿದೆ.

ಈ ಸ್ಮಾರ್ಟ್ ಫೋನ್ ಲೈಟ್ನಿಂಗ್ ಬ್ಲ್ಯಾಕ್ ಮತ್ತು ಯೂನಿಕಾರ್ನ್ ವೈಟ್ ಕಲರ್ಸ್ ನಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 19,990 ರೂ ಗಳು .

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ