ಮಾರುಕಟ್ಟೆಗೆ ಬಂದಿದೆ ರಿಯಲ್ ಮಿ 5, ರಿಯಲ್ ಮಿ 5 ಪ್ರೊ; ಇದರ ವಿಶೇಷತೆ ಏನು ಗೊತ್ತಾ ?

Team Udayavani, Aug 21, 2019, 12:14 PM IST

ಸೆಲ್ಫಿ ಕ್ಯಾಮಾರಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ ಚೀನಾ ಮೂಲದ ರಿಯಲ್‌ಮಿ ಸ್ಮಾರ್ಟ್ ಫೋನ್ ಕಂಪೆನಿಯು ತನ್ನ ಬಹುನಿರೀಕ್ಷಿತ ರಿಯಲ್‌ಮಿ 5 ಮತ್ತು ರಿಯಲ್‌ಮಿ 5 ಪ್ರೊ ಬಿಡುಗಡೆ ಮಾಡಿದ್ದುಸ್ಮಾರ್ಟ್ ಫೋನ್ ಮಾರುಕಟ್ಟೆ ವಲಯದಲ್ಲಿ ಸಂಚಲನ ಮೂಡಿಸಿದೆ.

ರಿಯಲ್‌ಮಿ 5 ಸರಣಿಯ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು 48 ಮೆಗಾಫಿಕ್ಸೆಲ್ ಸಾಮರ್ಥ್ಯದ ನಾಲ್ಕು ಸೆನ್ಸರ್‌ಗಳಿರುವ ಕ್ಯಾಮೆರಾ ಈ ಫೋನ್‌ನ ವಿಶೇಷತೆಗಳಲ್ಲಿ ಒಂದಾಗಿದೆ. ಈ ಎರಡು ಸ್ಮಾರ್ಟ್ ಫೋನ್ ಗಳು ಮೂರು ವೇರಿಯಂಟ್‌ಗಳನ್ನು ಹೊಂದಿದ್ದು, ಇದೇ ಅಗಸ್ಟ್ 27 ರಂದು ರಿಯಲ್ ಮಿ 5 ಸ್ಮಾರ್ಟ್ ಫೋನ್ ನ ಮೊದಲ ಮಾರಾಟ ಅರಂಭವಾಗಲಿದೆ. ಹಾಗೆಯೇ ಸೆಪ್ಟೆಂಬರ್ 4 ರಂದು ರಿಯಲ್‌ಮಿ 5 ಪ್ರೊ ಸ್ಮಾರ್ಟ್ ಫೋನ್ ನ ಮೊದಲ ಮಾರಾಟ ನಡೆಯಲಿದೆ.

ರಿಯಲ್‌ಮಿ 5  ಪ್ರೊ, ಸೋನಿ ಐಎಮ್‌ಎಕ್ಸ್ 585  48ಎಂಪಿ ಸೆನ್ಸರ್ ಇರುವ ಮಧ್ಯಮ ಶ್ರೇಣಿ ಫೋನ್ ಆಗಿದೆ. ಇದು ಹಿಂದಿನ ರಿಯಲ್‌ಮಿ 3  ಪ್ರೊವನ್ನೆ ಬಹುತೇಕ ಹೋಲುತ್ತಿದ್ದು. ಕೆಲವೊಂದು ಸೂಕ್ಷ್ಮ ಬದಲಾವಣೆಗಳು ಮಾತ್ರ ಇವೆ.

ರಿಯಲ್‌ಮಿ 5 ಪ್ರೊ ವಿಶೇಷತೆಗಳು:
ರಿಯಲ್‌ಮಿ 5 ಪ್ರೊ ಸ್ಮಾರ್ಟ್ ಫೋನ್ 2340 x 1080 ಫಿಕ್ಸೆಲ್ ರೆಶಲ್ಯೂಷನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಪ್ರಮಾಣದ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಯನ್ನು ಹೊಂದಿದೆ. ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ನೀಡಲಾಗಿದ್ದು ಹೆಚ್ಚು ಪ್ರಖರವಾಗಿರುವ ಈ ಡಿಸ್‌ಪ್ಲೆಯು 450 ನಿಟ್ಸ್ ಬ್ರೈಟ್ ನೆಸ್ ಸಾಮರ್ಥ್ಯ ಪಡೆದಿದೆ. ಓಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್ ಪವರ್ ಪಡೆದಿದ್ದು ಅದರ ವೇಗ 2.3  GHz .
RAM/ROM : 4GB /64GB
ಹಿಂಬದಿ ಕ್ಯಾಮೆರಾ: 4 ಸೆನ್ಸರ್, 48 ಮೆಗಾಫಿಕ್ಸೆಲ್. ಸೋನಿ ಪ್ರಧಾನ ಸೆನ್ಸರ್, 119 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್, ಸೂಪರ್ ಮ್ಯಾಕ್ರೋ ಲೆನ್ಸ್ ಮತ್ತು ಡೆಪ್ತ್ ಸೆನ್ಸರ್ ಸಹಿತ.
ಸೆಲ್ಫಿ ಕ್ಯಾಮೆರಾ: 16 ಮೆಗಾಫಿಕ್ಸೆಲ್
• 6.3 ಇಂಚು FHD ಸ್ಕ್ರೀನ್, ಡ್ಯೂಡ್ರಾಪ್ ಡಿಸ್ ಪ್ಲೇ
• Vooc ಫ್ಲಾಶ್ ಚಾರ್ಜ್, 3.0 ವೇಗದ ಚಾರ್ಜಿಂಗ್ ವ್ಯವಸ್ಥೆ
• ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್
ಎರಡು ಬಣ್ಣಗಳಲ್ಲಿ ಲಭ್ಯ – ಕ್ರಿಸ್ಟಲ್ ಗ್ರೀನ್ ಮತ್ತು ಸ್ಪಾರ್ಕಿಂಗ್ ಬ್ಲೂ

ಮೂರು ಮಾದರಿಗಳ ಬೆಲೆ
4 GB /64 GB ಅವೃತ್ತಿಗೆ 13,999 ರೂ.
6GB/64GB ಅವೃತ್ತಿಗೆ 14,999 ರೂ.
8GB/ 128GB ಅವೃತ್ತಿಗೆ 16,999 ರೂ.

ಫ್ಲಿಪ್ ಕಾರ್ಟ್ ನಲ್ಲಿ ಸೆಪ್ಟೆಂಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಮಾರಾಟ. ಪೇಟಿಎಂ ಮೂಲಕ ಪಾವತಿಸಿದರೆ 2000 ರೂ ಕ್ಯಾಶ್‌ಬ್ಯಾಕ್, ಜಿಯೋದಿಂದ 7 ಸಾವಿರವರೆಗೂ ಪ್ರಯೋಜನಗಳು.

 

ರಿಯಲ್‌ಮಿ 5 ವಿಶೇಷತೆಗಳು: ರಿಯಲ್‌ಮಿ  5ಯ ಬ್ಯಾಟರಿ 5000mAh ಸಾಮರ್ಥ್ಯ ಹೊಂದಿದ್ದು, 48ಎಂಪಿ ಸೆನ್ಸರ್ ಒಳಗೊಂಡ ಕ್ಯಾಮೆರಾವನ್ನು ಕೂಡ ಹೊಂದಿದೆ. 720 x 1600 ಪಿಕ್ಸೆಲ್ ರೆಶಲ್ಯೂಷನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ವಿಶಾಲ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅದರ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ನೀಡಲಾಗಿದ್ದು, ಅಂಚು ರಹಿತ ಮತ್ತು ಮಿನಿ ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
ರಿಯಲ್‌ಮಿ 5 ಪ್ರೊಸೆಸರ್ ವೇಗ 2.0Ghz ಅಗಿದ್ದು, ಪ್ರೊಸೆಸರ್ ವೇಗಕ್ಕೆ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲವಿದೆ. ಜೊತೆಗೆ ಈ ಸ್ಮಾರ್ಟ್ ಫೋನ್ 3+32 ಸ್ಟೋರೇಜ್ , 4+64 ಸ್ಟೋರೇಜ್ ಮತ್ತು 4+128 ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ಈ ಫೋನ್‌ನ ಹಿಂಬದಿಯಲ್ಲಿ ತ್ರಿಬಲ್ ಕ್ಯಾಮೆರಾ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾ 12 ಎಂಪಿ ಸೆನ್ಸರ್ ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ 13 ಎಂಪಿ ಸೆನ್ಸರ್‌ನಲ್ಲಿದ್ದು ಬ್ಯೂಟಿ ಮೋಡ್‌ನ್ನು ಒಳಗೊಂಡಿದೆ. 5000mAh ಈ ಫೋನ್‌ಗೆ ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಒದಗಿಸಲಿದ್ದು. ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ಇದೆ. ನಿರಂತರ 30 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಸಾಮಾರ್ಥ್ಯ ಹೊಂದಿದೆ.

ಬೆಲೆ:
3GB/32GB ಅವೃತ್ತಿಗೆ 9,999 ರೂ.
4GB/64GB ಅವೃತ್ತಿಗೆ 10,999 ರೂ.
4GB/128GB ಅವೃತ್ತಿಗೆ 11, 999 ರೂ.

ರಿಯಲ್‌ಮಿ 5 ಫೋನ್ ಆಗಸ್ಟ್ 27ರಿಂದಲೇ ಫ್ಲಿಪ್‌ಕಾರ್ಟ್ ಮೂಲಕ ದೊರೆಯುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ