ಶೀಘ್ರವೇ ನಿಮ್ಮ ಕೈಗೆಟುಕಲಿದೆ ಅಗ್ಗದ ರಿಯಲ್ ಮಿ ಪ್ರೊ ಸ್ಮಾರ್ಟ್ ಫೋನ್

Team Udayavani, Aug 17, 2019, 5:00 PM IST

ಹೊಸದಿಲ್ಲಿ: ಕಡಿಮೆ ದರದಲ್ಲಿ ಭರ್ಜರಿ ತಾಂತ್ರಿಕತೆಯ ಫೋನ್‌ಗಳನ್ನು ನೀಡುತ್ತಿರುವ ರಿಯಲ್ ಮಿ ಕಂಪೆನಿ ಇದೀಗ ಇನ್ನೆರಡು ಫೋನ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಲು ತಯಾರಾಗಿದೆ.

ರಿಯಲ್ ಮಿ 5 ಮತ್ತು  ರಿಯಲ್ ಮಿ 5 ಪ್ರೊ ಆ.20ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ಕ್ವಾಡ್‌ ಕ್ಯಾಮೆರಾವನ್ನು ಈ ಮಾಡೆಲ್‌ಗ‌ಳ ಮೂಲಕ ರಿಯಲ್ ಮಿ ಪರಿಚಯಿಸುತ್ತಿದೆ.

ಹೇಗಿವೆ ಫೋನ್‌ಗಳು?

ಫೋನ್‌ಗಳ ತಾಂತ್ರಿಕತೆ ಬಗ್ಗೆ ಇನ್ನೂ ರಿಯಲ್ ಮಿ ಬಾಯ್ಬಿಟ್ಟಿಲ್ಲ. ಆದರೆ ಕೆಲವೊಂದು ವಿಚಾರಗಳು ಬೆಳಕಿಗೆ ಬಂದಿವೆ. 5 ಪ್ರೊ ಮೊಬೈಲ್‌ ಕ್ವಾಲ್ಕಮ್‌ನ ಅತ್ಯಾಧುನಿಕ ಪ್ರೊಸೆಸರ್‌ ಹೊಂದಿದ್ದರೆ, 5 ಮೊಬೈಲ್‌ ಸ್ನಾಪ್‌ಡ್ರಾಗನ್‌ 665 ಎಸ್‌ಒಸಿ ಹೊಂದಿರಲಿದೆ ಎನ್ನಲಾಗಿದೆ. ಜತೆಗೆ 5 ಸಾವಿರ ಎಮ್‌ಎಚ್‌ ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಇನ್ನು 5 ಪ್ರೊನಲ್ಲಿ 48 ಮೆಗಾಪಿಕ್ಸೆಲ್‌ನ ಕ್ಯಾಮೆರಾ ಇದ್ದರೆ, 5ನಲ್ಲಿ 16 ಮೆಗಾಪಿಕ್ಸೆಲ್‌ ಕೆಮರಾ ಇರಲಿದೆ.

ಬೆಲೆ ಎಷ್ಟು?

ರಿಯಲ್ ಮಿ 5 ಬೆಲೆ 10 ಸಾವಿರ ರೂ. ಒಳಗಿದ್ದರೆ, 5 ಪ್ರೊ ಬೆಲೆ 15 ಸಾವಿರ ರೂ. ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ