ಶೀಘ್ರವೇ ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ರಿಲೀಸ್; ಬೆಸ್ಟ್ ಫೀಚರ್ಸ್

Team Udayavani, May 18, 2019, 4:45 PM IST

ನವದೆಹಲಿ:ಚೀನಾದಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ರಿಯಲ್ ಮಿ ಎಕ್ಸ್ ಮೊಬೈಲ್ ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೂ ಲಗ್ಗೆ ಇಡಲಿದೆ ಎಂದು ರಿಯಲ್ ಮಿ ಭಾರತದ ಸಿಇಒ ಮಾಧವ್ ಸೇಠ್ ಶನಿವಾರ ಘೋಷಿಸಿದ್ದಾರೆ.

ಏತನ್ಮಧ್ಯೆ ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಹೇಳಿಲ್ಲ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ರಿಲಯ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಫೀಚರ್ಸ್ ಅನ್ನು ಬಹಿರಂಗಪಡಿಸಿದ್ದಾರೆ.

ರಿಯಲ್ ಮಿ ಎಕ್ಸ್ ಚೀನಾದಲ್ಲಿ ಬಿಡುಗಡೆಯಾದ ಸ್ಮಾರ್ಟ್ ಫೋನ್ ಗಿಂತ ವಿಭಿನ್ನ ಫೀಚರ್ಸ್ ನಲ್ಲಿರಲಿದೆಯಂತೆ. ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾದರಿಯ ಬಣ್ಣವನ್ನು ಹೊಂದರಲಿದೆ ಎಂದು ಮಾಧವ್ ವಿವರಿಸಿದ್ದಾರೆ. ಭಾರತದಲ್ಲಿ ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಬೆಲೆ ಅಂದಾಜು 18 ಸಾವಿರ ರೂಪಾಯಿ ಎಂದು ರಿವೀಲ್ ಮಾಡಿದ್ದಾರೆ.

ಚೀನಾದಲ್ಲಿ ರಿಯಲ್ ಮಿ ಎಕ್ಸ್ ಮೂರು ವೆರಿಯಂಟ್ಸ್ ಗಳಲ್ಲಿ ಬಿಡುಗಡೆಯಾಗಿದ್ದು, 4ಜಿಬಿ RAM + 64 ಜಿಬಿ Storage ಅಂದಾಜು ಬೆಲೆ 15,300, 2) 6ಜಿಬಿ RAM + 64ಜಿಬಿ Storage ಅಂದಾಜು ಬೆಲೆ 16,300, 3) 8ಜಿಬಿ RAM + 128 ಜಿಬಿ Storage ಅಂದಾಜು ಬೆಲೆ 18,300.

6.5 ಇಂಚಿನ ವಿಶಾಲ AMOLED ಡಿಸ್ ಪ್ಲೇ ಹೊಂದಿದ್ದು, ಡಿಸ್ ಪ್ಲೇ ಶೇ.19.5:9ರಷ್ಟು ರೆಶಲ್ಯೂಷನ್ ಒಳಗೊಂಡಿದೆ. ಕಡಿಮೆ ಅಂಚನ್ನು ಹೊಂದಿದೆ. ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ಸೆಟ್ ಅನ್ನು ಒಳಗೊಂಡಿದೆ. ಇದು 8 ಜಿಬಿ RAM ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ.

ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ನ ಹಿಂಬದಿಯಲ್ಲಿ 48ಮೆಗಾ ಫಿಕ್ಸಲ್ ಕ್ಯಾಮರ ಹೊಂದಿದೆ. 1.6 ಮೈಕ್ರೋನ್ ಫಿಕ್ಸಲ್, 6 ಫಿಕ್ಸಲ್ ಲೆನ್ಸ್ ಮತ್ತು 5 ಮೆಗಾ ಫಿಕ್ಸಲ್ ಸೆಕೆಂಡರಿ ಡೆಪ್ತ್ ಕೆಮರಾವನ್ನೊಳಗೊಂಡಿದೆ. ರಿಯಲ್ ಮಿ ಎಕ್ಸ್ ನಲ್ಲಿ 16 ಮೆಗಾ ಫಿಕ್ಸಲ್ ಸೆಲ್ಫಿ ಕ್ಯಾಮರ ಇದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ