ರಿಲಯನ್ಸ್ ಡಿಜಿಟಲ್; ಜನಪ್ರಿಯವಾಗುತ್ತಿದೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10

Team Udayavani, Apr 5, 2019, 1:09 PM IST

ಮುಂಬೈ: ಸ್ಯಾಮ್ ಸಂಗ್ ಕಂಪನಿ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದು, ಕಳೆದ ತಿಂಗಳು ಬೆಂಗಳೂರಿನ ರಿಲಯನ್ಸ್ ಡಿಜಿಟಲ್ ನಲ್ಲಿ ಖ್ಯಾತ ನಟಿ ಶೃತಿ ಹಾಸನ್ ಅವರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಅನ್ನು ಬಿಡುಗಡೆ ಮಾಡಿದ್ದರು.

ಮುಂದಿನ ತಲೆಮಾರಿನ ಫ್ಲ್ಯಾಗ್ ಶಿಪ್ ಎಂದೇ ಖ್ಯಾತಿ ಪಡೆದಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಅನ್ನು ಖ್ಯಾತ ನಟಿ ಶೃತಿ ಹಾಸನ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ಯಾಮ್ ಸಂಗ್ ಕಂಪನಿಯು ಕಳೆದ 10 ವರ್ಷಗಳಿಂದ ಗ್ಯಾಲಕ್ಸಿ ಸಿರೀಸ್ ಸ್ಮಾರ್ಟ್ ಫೋನ್  ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇದೇ ಮಾದರಿಯಲ್ಲಿ ಗ್ಯಾಲಕ್ಸಿಎಸ್ 10 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು.

ಏತನ್ಮಧ್ಯೆ ರಿಲಯನ್ಸ್ ಡಿಜಿಟಲ್ ಮೈ ಜಿಯೋ ಸ್ಟೋರ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮುಂಗಡವಾಗಿ ಬುಕ್ ಮಾಡಿದ ಗ್ರಾಹಕರು ಶೃತಿ ಹಾಸನ್ ಅವರನ್ನು ಭೇಟಿಯಾಗುವ ಅವಕಾಶ ಪಡೆದುಕೊಂಡಿದ್ದರು.

ರಿಲಯನ್ಸ್ ಡಿಜಿಟಲ್ ಯಾವಾಗಲೂ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು,  ಹೊಸ ಗ್ಯಾಜೆಟ್ ಗಳನ್ನು ಶೀಘ್ರವೇ ಗ್ರಾಹಕರಿಗೆ ತಲುಪಿಸುತ್ತಿದೆ. ಗ್ರಾಹಕರ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಭಾರತೀಯರಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಅನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಇದಲ್ಲದೇ ರಿಲಯನ್ಸ್  ಡಿಜಿಟಲ್ ನಲ್ಲಿ ಸ್ಯಾಮ್ ಸಂಗ್ ಲಾಂಚ್ ಮಾಡಿರುವ ಎಲ್ಲಾ ಫೋನ್ ಗಳನ್ನು ಕಾಣಬಹುದಾಗಿದೆ. ಹೊಸ ಫೋನ್ ಅನ್ನು ಗ್ರಾಹಕರು ಎಕ್ಸಿಪಿರೀಯನ್ಸ್ ಮಾಡಬಹುದಾಗಿದೆ.

ಎಲ್ಲಾ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಮತ್ತು reliancedigital.in ನಲ್ಲಿ ಗ್ಯಾಲಕ್ಸಿ S10 e, ಗ್ಯಾಲಕ್ಸಿ S10 ಮತ್ತು ಗ್ಯಾಲಕ್ಸಿ S10 + ಮೊಬೈಲ್​ಗಳನ್ನು ಖರೀದಿಸಬಹುದಾಗಿದೆ.

ಲಭ್ಯತೆ -ಬೆಲೆ, ಬಣ್ಣಗಳು ಮತ್ತು ಆವೃತ್ತಿಗಳು:

1 TB, 512 GB ಮತ್ತು 12 8GB ಸ್ಟೋರೆಜ್​ನಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ S10 + ಸ್ಮಾರ್ಟ್​ಫೋನ್​ಗಳು ಲಭ್ಯವಿರುತ್ತದೆ. 1 TB ಮತ್ತು 512 GB ಆವೃತ್ತಿಗಳು ಕ್ರಮವಾಗಿ ಐಷಾರಾಮಿ ಸಿರಾಮಿಕ್ ವೈಟ್ ಮತ್ತು ಸೆರಾಮಿಕ್ ಬ್ಲಾಕ್ ಬಣ್ಣಗಳಲ್ಲಿ ದೊರೆಯುತ್ತಿದೆ. 128GB ರೂಪಾಂತರವು ಪ್ರಿಸ್ಮ್ ಬ್ಲಾಕ್, ಪ್ರಿಸ್ಮ್ ವೈಟ್ ಮತ್ತು ಪ್ರಿಸ್ಮ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ಗ್ಯಾಲಕ್ಸಿ ಎಸ್ 10 (512 GB) ರೂ.84,900 ಕ್ಕೆ ಪ್ರಿಸ್ಮ್ ವೈಟ್ ಬಣ್ಣದಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ಎಸ್ 10 (128 GB) ರೂ. 66,900ಕ್ಕೆ ಪ್ರಿಸ್ಮ್ ಬ್ಲಾಕ್, ಪ್ರಿಸ್ಮ್ ವೈಟ್ ಮತ್ತು ಪ್ರಿಸ್ಮ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಗ್ಯಾಲಕ್ಸಿ S10 e ಗ್ಯಾಲಕ್ಸಿ S10e ರೂ. 55,900 ಕ್ಕೆ ಪ್ರಿಸ್ಮ್ ಬ್ಲಾಕ್ ಮತ್ತು ಪ್ರಿಸ್ಮ್ ವೈಟ್ ಬಣ್ಣಗಳಲ್ಲಿ ಮಾರಾಟವಾಗಲಿದೆ.

ಲಾಂಚಿಂಗ್ ಆಫರ್​ನಲ್ಲಿ ಗ್ರಾಹಕರಿಗೆ ರೂ.4,999ಕ್ಕೆ ಗ್ಯಾಲೆಕ್ಸಿ ಬಡ್ಸ್ ದೊರೆಯಲಿದೆ. ಅಲ್ಲದೇ HDFC ಗ್ರಾಹಕರಿಗೆ ರೂ, 6,000 ರಷ್ಟು ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆ. ಇದರಲ್ಲದೆ ರೂ.15,000 ರವರೆಗೆ ಅಪ್​ಗ್ರೇಡ್​ ಆಯ್ಕೆಯೂ ನೀಡಲಾಗಿದೆ.

1TB, 512GB ಮತ್ತು 128GB ಸ್ಟೋರೆಜ್​ನಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ S10 + ಸ್ಮಾರ್ಟ್​ಫೋನ್​ಗಳು ರೂ.1,17,900, ರೂ. 91,900 ಮತ್ತು ರೂ. 73,900 ದರಗಳನ್ನು ನಿಗದಿಪಡಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ