ಟಿಕ್ ಟಾಕ್ ಒಡೆತನದ ಬೈಟೆಡಾನ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್ ಫೋನ್: ಇದರ ವಿಶೇಷತೆಯೇನು ?

Team Udayavani, Nov 3, 2019, 11:54 AM IST

ಜನಪ್ರಿಯ ಟಿಕ್ ಟಾಕ್ ಆ್ಯಪ್ ಕಂಡುಹಿಡಿದ ಬೈಟೆಡಾನ್ಸ್ ಕಂಪೆನಿ ಸ್ಮಾರ್ಟ್ ಫೋನ್ ತಯಾರಿಸುವ ಕುರಿತು ಈ ಹಿಂದೆಯೇ ಸುಳಿವು ನೀಡಿತ್ತು. ಅದರೀಗ ಸ್ಮಾರ್ಟಿಸನ್ ಜಿಯಾಂಗ್ ಪ್ರೊ 3 ಹೆಸರಿನ ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಮೂಲಗಳು ಪ್ರಕಾರ 2020 ರಲ್ಲಿ ಈ ಫೋನ್ ಮಾರುಕಟ್ಟೆಗೆ ಬರಲಿದೆ. ಹಲವು ಹೊಸ ಫೀಚರ್ ಗಳು ಈ ಫೋನ್ ನಲ್ಲಿರಲಿದ್ದು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ತಿಳಿದು ಬಂದಿದೆ.

ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಸ್ಮಾರ್ಟಿಸನ್ ಜಿಯಾಂಗು ಪ್ರೋ 3 ಸ್ಮಾರ್ಟ್ ಫೋನ್ ಸ್ನ್ಯಾಪ್ ಡ್ರ್ಯಾಗನ್ 855+ ಎಸ್ ಒಸಿ ಪ್ರೊಸೆಸರ್ ಹೊಂದಿದ್ದು, 4 ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಜೊತೆಗೆ ಟಿಕ್ ಟಾಕ್ ಆ್ಯಪ್ ಅನ್ನು ಇಲ್ಲಿ ಇನ್ ಬಿಲ್ಟ್ ಆಗಿ ನೀಡಲಾಗಿದೆ. ಮಾತ್ರವಲ್ಲದೆ ಸಿಂಗಲ್ ಸ್ವೈಪ್ ಲಾಕ್ ಆಯ್ಕೆಯನ್ನು ಹೊಂದಿದೆ.

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ:

ಈ ಸ್ಮಾರ್ಟ್ ಫೋನ್ ಮೂರು ಕಾನ್ಫಿಗರೇಶನ್ ನಲ್ಲಿ ಲಭ್ಯವಾಗಲಿದ್ದು ಬೆಲೆಗಳಲ್ಲೂ ಏರಿಳಿಗೊಂಡಿದೆ. ಕ್ರಮವಾಗಿ 8ಜಿಬಿ ರ್ಯಾಮ್​​ + 128 ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ 29 ಸಾವಿರ ಎಂದು ಅಂದಾಜಿಸಲಾಗಿದೆ.

8ಜಿಬಿ ರ್ಯಾಮ್​ + 256 ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 32 ಸಾವಿರ.

ಹಾಗೂ 12ಜಿಬಿ ರ್ಯಾಮ್​ ಮತ್ತು 256ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಬೆಲೆ 36 ಸಾವಿರ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ವಿಶೇಷತೆ:

ಸ್ಮಾರ್ಟಿಸನ್​ ಜಿಯಾಂಗು ಪ್ರೊ 3 ಎರಡು ಸಿಮ್ ಸ್ಲಾಟ್ (ನ್ಯಾನೋ ಸಿಮ್ ), ಸ್ಮಾರ್ಟ್​ಫೋನ್​ 6.39 ಇಂಚಿನ ಫುಲ್​ ಹೆಚ್​ಡಿ+ ಅಮೋಲ್ಡ್​ ಡಿಸ್​ಪ್ಲೇ ನೀಡಲಾಗಿದೆ. ಸ್ನಾಪ್​ಡ್ರ್ಯಾಗನ್​ 855+ ಎಸ್​ಒಸಿ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗಾಗಿ 8GB RAM​​ + 128GB ಸ್ಟೊರೇಜ್ ಆಯ್ಕೆಯಲ್ಲಿ, 8GB RAM​ + 256 ಸ್ಟೊರೇಜ್​ನಲ್ಲಿ ಮತ್ತು 12GB RAM​ ಮತ್ತು 256GB ಸ್ಟೊರೇಜ್​ನಲ್ಲಿ ಸಿಗಲಿದೆ.

ನೂತನ ಸ್ಮಾರ್ಟ್​ಫೋನಿನಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು + 13 ಮೆಗಾಫಿಕ್ಸೆಲ್​ ವೈಡ್​ ಆ್ಯಂಗಲ್​ ಕ್ಯಾಮೆರಾ + 8 ಮೆಗಾಫಿಕ್ಸೆಲ್​ ಟೆಲಿಫೋಟೋ + 5 ಮೆಗಾಫಿಕ್ಸೆಲ್​ ಮಾಕ್ರೊ ಕ್ಯಾಮೆರಾ​ ನೀಡಲಾಗಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ 4G LTE, ಬ್ಲೂಟೂತ್​( v5.0,), ವೈ-ಫೈ, ಜಿಪಿಎಸ್​( a/b/g/n/ac)  ನೀಡಲಾಗಿದೆ. 4000mAh​ ಬ್ಯಾಟರಿ ಅಳವಡಿಸಲಾಗಿದೆ.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ