ವಾಹನ ಉದ್ಯಮ ಚೇತರಿಕೆ: ಸೆಪ್ಟಂಬರ್‌ನಲ್ಲಿ ಆದ ಮಾರಾಟ ಕಳೆದ 10 ತಿಂಗಳಲ್ಲೇ ಹೆಚ್ಚು

Team Udayavani, Oct 3, 2019, 6:00 AM IST

ಹೊಸದಿಲ್ಲಿ: ಕುಸಿದಿದ್ದ ದೇಶೀಯ ಆಟೋಮೊಬೈಲ್‌ ಕ್ಷೇತ್ರ ಸೆಪ್ಟಂಬರ್‌ ತಿಂಗಳಲ್ಲಿ ಪುಟಿದೆದ್ದಿದೆ. ವಾಹನಗಳ ಮಾರಾಟ ಭರದಿಂದ ಸಾಗುತ್ತಿದ್ದು, ಇದರಿಂದ ವಾಹನ ತಯಾರಿಕಾ ಕಂಪೆನಿಗಳ ಮಾಲಕರು ಹಾಗೂ ಅಧಿಕಾರ ವರ್ಗ ನಿಟ್ಟುಸಿರು ಬಿಡುವಂತಾಗಿದೆ.

ಸಂಕಷ್ಟದಲ್ಲಿದ್ದ ಉದ್ಯಮಕ್ಕೆ ಕೇಂದ್ರ ಸರಕಾರ ಕಾರ್ಪೊರೆಟ್‌ ತೆರಿಗೆಯಂಥ ಕೆಲವು ಅನುಕೂಲಗಳನ್ನು ಘೋಷಿಸಿದ್ದು, ವಾಹನ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಿದೆ. ದಸರಾ, ದೀಪಾವಳಿ ಹಬ್ಬಗಳ ಹಿನ್ನೆಲೆ ಯಲ್ಲಿ ಕಂಪೆನಿಗಳು ಗ್ರಾಹಕರಿಗೆ ಆಫ‌ರ್‌ಗಳನ್ನು ಪ್ರಕಟಿಸಿದ್ದು ಕುಸಿದಿದ್ದ ವಾಹನ ಮಾರಾಟವನ್ನು ಮೇಲೆತ್ತಿವೆ.

ವಾಣಿಜ್ಯ ವಾಹನಗಳ ಮಾರಾಟ ಸೆಪ್ಟಂಬರ್‌ನಲ್ಲಿ ಶೇ. 29 ಹೆಚ್ಚಾ ಗಿದ್ದು, 87,180 ವಾಹನಗಳು ಮಾರಾಟವಾಗಿವೆ. ಇದು ಮಾರ್ಚ್‌ 2019ರಿಂದ ಈಚೆಗೆ ಶೇ. 13 ಹೆಚ್ಚಳ. ತ್ರಿಚಕ್ರ ವಾಹನಗಳ ಮಾರಾಟ ಶೇ. 40 ಹೆಚ್ಚಾಗಿದೆ. ಟ್ರಾಕ್ಟರ್‌ಗಳ ಮಾರಾಟ ಶೇ. 8.1 ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಶೇ. 24.2ರಷ್ಟು ಏರಿಕೆ
ಸೆಪ್ಟಂಬರ್‌ ತಿಂಗಳಲ್ಲಿ ವಾಹನಗಳ ಮಾರಾಟ ಶೇ. 24.2ರಷ್ಟು ಏರಿಕೆ ಕಂಡಿದೆ. ಇದು ಕಳೆದ 10 ತಿಂಗಳಲ್ಲೇ ಅತ್ಯಧಿಕ. ಸೆಪ್ಟಂಬರ್‌ನಲ್ಲಿಯೇ 31 ರಾಜ್ಯ ಗಳ 1,171 ಆರ್‌ಟಿಒ ಕಚೇರಿಗಳಲ್ಲಿ ಅತಿ ಹೆಚ್ಚು ವಾಹನಗಳು ನೋಂದಾವಣೆಯಾಗಿವೆ. ಸೆಪ್ಟಂಬರ್‌ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಶೇ. 23ಕ್ಕೆ ಏರಿಕೆಯಾಗಿತ್ತು. ಪ್ರಯಾಣಿಕರ ವಾಹನಗಳ ಮಾರಾಟ ಶೇ. 28.1ರಷ್ಟು ಹೆಚ್ಚಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ