ದೀಪಾವಳಿ ಧಮಕಾ: ಕೇವಲ 101 ರೂ.ಗೆ ವಿವೋ ಸ್ಮಾರ್ಟ್ ಫೋನ್

Team Udayavani, Oct 19, 2019, 10:40 AM IST

ಮಣಿಪಾಲ: ದೀಪಾವಳಿ ಹಬ್ಬದ ಪ್ರಯುಕ್ತ  ವಿವೋ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 101 ರೂಪಾಯಿಗೆ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವನ್ನು ಕಂಪೆನಿ ನೀಡಿದೆ. ಆದರೇ ಮುಂಗಡ ಪಾವತಿಯಾಗಿ 101ರೂ. ಪಾವತಿಸಿದರೆ ಮಾತ್ರ ವಿವೋ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ.

ನೋ ಕಾಸ್ಟ್ ಇಎಮ್ ಐ , ಜೀರೋ ಡೌನ್ ಪೇಮೆಂಟ್ ಆಯ್ಕೆಯನ್ನು ನೀಡಲಾಗಿದೆ. ಹಬ್ಬದ ಸಂಭ್ರಮದಲ್ಲಿ ಗ್ರಾಹಕರನ್ನು ಸೆಳೆಯಲು ಈ ಆಫರನ್ನು ನೀಡಲಾಗಿದೆ.  ಭಾರತದ ಎಲ್ಲಾ ವಿವೋ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದೆ. ಮಾತ್ರವಲ್ಲದೆ ಡಿಜಿಟಲ್ ಪೇಮೆಂಡ್ ಮೂಲಕ ಸ್ಮಾರ್ಟ್ ಫೋನ್ ಖರೀದಿದಾರರಿಗೆ ಶೇ10% ಡಿಸ್ಕೌಂಟ್ ನೀಡುತ್ತಿದೆ.

ಈ ಆಫರ್ ಅಕ್ಟೋಬರ್ 18 ರಿಂದ 31 ರವರೆಗೆ ಮಾತ್ರ ನಡೆಯಲಿದ್ದು , ವಿವೋ V17 Pro, ವಿವೋ Z1x , ವಿವೋ V15, ವಿವೋ S1, ವಿವೋ Y17, ವಿವೋ Y15, ಮತ್ತು Vivo Y12 ಸ್ಮಾರ್ಟ್​ಫೋನ್​ಗಳ ಮೇಲೆ ಈ ಆಫರ್ ಅನ್ನು ನೀಡುತ್ತಿದೆ.

101 ರೂಪಾಯಿ ವಿವೋ ಸ್ಮಾರ್ಟ್ ಫೋನ್ ನನ್ನು ಹೇಗೆ ಪಡೆಯಬಹುದು ?

ಮೊದಲು ಮೇಲೆ ನೀಡಿರುವ  ಸ್ಮಾರ್ಟ್ ಫೋನ್ ಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಬೇಕು.  ನಂತರ ವಿವೋ ಮಳಿಗೆಗಳಲ್ಲಿ 101 ರೂ ಪಾವತಿಸಿಬೇಕು. ಉಳಿದ ಮೊತ್ತ ಇಎಮ್ ಐ   ಮೂಲಕ ಕಡಿತವಾಗುತ್ತದೆ. ಒಟ್ಟು 926 ರೂ ಇಎಮ್ ಐ   ಮೂಲಕ  ಕಡಿತವಾಗುತ್ತದೆ. ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಮಳಿಗೆಗಳಲ್ಲಿ ಖರೀದಿಸುವಾಗ ಡೌನ್ ಪೇಮೆಂಟ್ ಪಾವತಿಸಬೇಕಾಗುತ್ತದೆ. ಆದರೇ ಈ ಆಫರ್ ನಲ್ಲಿ ಅದನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ.

ಹೆಚ್ ಡಿಎಫ್ ಸಿ , ಐಸಿಐಸಿಐ ಬ್ಯಾಂಕ್ ಗಳು ಕೂಡ 5%  ಕ್ಯಾಶ್ ಬ್ಯಾಕ್ ಆಫರ್ ಅನ್ನು ಒದಗಿಸುತ್ತಿದ್ದು, ಹೆಚ್ ಡಿಬಿ ಫೈನಾನ್ಸಿಯಲ್ ಸರ್ವಿಸ್ 10 % ಕ್ಯಾಶ್ ಬ್ಯಾಕ್ ಆಫರ್ ಅನ್ನು ನೀಡುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ