ವೆಲ್‌ಕಮ್‌ ಟು ಟಾಟಾ!

ಗ್ರ್ಯಾವಿಟಾಸ್‌ ಮತ್ತು ಅಲ್ಟ್ರಾಝ್ ಫೀಚರ್‌ ಅನಾವರಣ

Team Udayavani, Dec 2, 2019, 5:00 AM IST

ಸದ್ಯ ಮಾರುಕಟ್ಟೆಯಲ್ಲಿ ಕಂಪನಿಗಳು ಕೊಂಚ ಮೌನಕ್ಕೆ ಶರಣಾಗಿದ್ದರೆ ಟಾಟಾ ಕಂಪನಿ ಮಾತ್ರ 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಒಂದೊಂದೇ ಫೀಚರ್‌ಗಳನ್ನು ಅನಾವರಣ ಮಾಡುತ್ತಿದೆ.

ಈಗಾಗಲೇ ಜಿನೀವಾ ಮೋಟಾರ್‌ ಶೋನಲ್ಲಿ ಬಿಡುಗಡೆಯಾಗಿರುವ ಟಾಟಾ ಹೆಜಾರ್ಡ್‌ನ ಭಾರತೀಯ ಪರಿಷ್ಕೃತ ರೂಪ ಬಿಡುಗಡೆಯಾಗುವ ದಿನಾಂಕ ನಿಗದಿಯಾಗಿದೆ. 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಟೋ ಶೋನಲ್ಲಿ ಈ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಈಗ “ಟಾಟಾ ಗ್ರ್ಯಾವಿಟಾಸ್‌’ ಎಂಬ ಹೆಸರು ನೀಡಿರುವ ಕಂಪನಿ, ಇದು ಹೆಜಾರ್ಡ್‌ನ ಪ್ರತಿರೂಪವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರಿಂದಲೇ ಪ್ರೇರಣೆ ಪಡೆದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ವಿಭಿನ್ನ ವಿನ್ಯಾಸ ಶೈಲಿ
ಆದರೆ, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಏಳು ಸೀಟುಗಳ ಟಾಟಾ ಹ್ಯಾರಿಯರ್‌ನ ನಂತರದ ಪ್ರೀಮಿಯಂ ಎಸ್‌ಯುವಿಯಾಗಿ ಗ್ರ್ಯಾವಿಟಾಸ್‌ ಮಾರುಕಟ್ಟೆ ಪ್ರವೇಶ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಲ್ಯಾಂಡ್‌ ರೋವರ್‌ನ ಡಿ8 ಫ್ಲಾಟ್‌ಫಾರ್ಮ್ನಿಂದ ಪಡೆದಿರುವ ಓಮೇಗಾ (ಆಪ್ಟಿಕಲ್‌ ಮಾಡ್ಯುಲರ್‌ ಎಫಿಶಿಯಂಟ್‌ ಗ್ಲೋಬಲ್‌ ಅಡ್ವಾನ್ಸಡ್‌)ನ ವಿನ್ಯಾಸವನ್ನು ಹೊಂದಿ ಈ ಕಾರು ಬರಲಿದೆಯಂತೆ. ಅಂದರೆ, ಸರಿಸುಮಾರು ಟಾಟಾ ಹ್ಯಾರಿಯರ್‌ನಂತೆಯೇ ಲಕ್ಷಣಗಳನ್ನು ಹೊಂದಿದೆ. ಇಲ್ಲಿಯವರೆಗಿಗಿಂತ ವಿಭಿನ್ನ ವಿನ್ಯಾಸ ಶೈಲಿಯನ್ನು ಈ ಕಾರಿನಲ್ಲಿ ಅನುಸರಿಸಲಾಗಿದೆ. ಇದಷ್ಟೇ ಅಲ್ಲ, ಮುಂದೆ ಬರಲಿರುವ ಟಾಟಾ ಆಲ್ಟ್ರಾಜ್‌, ಟಾಟಾ ನೆಕ್ಸಾನ್‌ ಫೇಸ್‌ಲಿಫr… ಮತ್ತು ನೆಕ್ಸಾನ್‌ ಇವಿಯಲ್ಲೂ ಇದೇ ಕಾನ್ಸೆಪ್ಟ್ ನ ಅಡಿಯಲ್ಲಿ ಕಾರು ಸಿದ್ಧ ಪಡಿಸಲಾಗಿದೆ.

ಕಾರಿನ ಸುತ್ತಳತೆ
4661 ಎಂ.ಎಂ ಉದ್ದ, 1894ಎಂ.ಎಂ ಅಗಲ, 1786 ಎಂಎಂ ಎತ್ತರದ ಕಾರಿದು. ಹ್ಯಾರಿಯರ್‌ಗೆ ಹೋಲಿಸಿದರೆ, ಇನ್ನೂ 63 ಎಂ.ಎಂ ಹೆಚ್ಚು ಉದ್ದ, 80ಎಂ.ಎಂ ಹೆಚ್ಚು ಎತ್ತರವಿದೆ. ಜತೆಗೆ 6 ಸ್ಪೀಡ್‌ ಗೇರುಗಳ ಬಾಕ್ಸ್ ಹೊಂದಿರುವ ಇದು 2 ಲೀ. ಸಾಮರ್ಥ್ಯದ ಎಂಜಿನ್‌ ಹೊಂದಿದೆ. ಜತೆಗೆ ನಾಲ್ಕು ಸಿಲಿಂಡರ್‌ಗಳನ್ನೂ ಹೊಂದಿದ್ದು, ಇದು ಹ್ಯಾರಿಯರ್‌ನ ಮಾದರಿಯನ್ನೇ ಒಳಗೊಂಡಿದೆ.

ಟಾಟಾ ಆಲ್ಟ್ರಾಜ್‌ ಒಳಾಂಗಣ
ಸದ್ಯ ಮಾರುಕಟ್ಟೆಯಲ್ಲಿ ಕಂಪನಿಗಳು ಕೊಂಚ ಮೌನಕ್ಕೆ ಶರಣಾಗಿದ್ದರೆ ಟಾಟಾ ಕಂಪನಿ ಮಾತ್ರ 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಒಂದೊಂದೇ ಫೀಚರ್‌ಗಳನ್ನು ಅನಾವರಣ ಮಾಡುತ್ತಿದೆ. ಈಗಾಗಲೇ ಟಾಟಾ ಗ್ರ್ಯಾವಿಟಾಸ್‌ ಆಯ್ತು, ಈಗ ಟಾಟಾ ಆಲ್ಟ್ರಾಜ್‌ನ ಒಳಾಂಗಣ ಫೋಟೋಗಳು ಬಯಲಾಗಿವೆ. ಈ ಕಾರು 1.2 ಲೀ. ಪೆಟ್ರೋಲ್‌ ಎಂಜಿನ್‌ ಮತ್ತು 1.5 ಲೀ. ಡೀಸೆಲ್‌ ಎಂಜಿನ್‌ ಸಾಮರ್ಥ್ಯದ್ದಾಗಿದ್ದು, ಬಿಎಸ್‌6 ಅನ್ನು ಅಳವಡಿಸಿಕೊಂಡೇ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಕಾರು ಮಾರುಕಟ್ಟೆಗೆ ಬಂದರೆ, ಹೋಂಡಾ ಜಾಝ್, ಹುಂಡೈ ಎಲೀಟ್‌ ಐ20, ಟೊಯೋಟಾ ಗ್ಲಾಂಝಾ ಮತ್ತು ಮಾರುತಿ ಸುಜುಕಿ ಬಲೇನೋಗೆ ಫೈಟ್‌ ನೀಡಲಿದೆ.

ಬೆಟ್ಟ ಗುಡ್ಡದಲ್ಲಿ ರೋವರ್‌ ಶಕ್ತಿ ಪ್ರದರ್ಶನ
ಈಗಾಗಲೇ ದೇಶದ ಹಲವಾರು ನಗರಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿರುವ ಲ್ಯಾಂಡ್‌ ರೋವರ್‌ನ “ದಿ ಅಬವ್‌ ಆ್ಯಂಡ್‌ ಬಿಯಾಂಡ್‌ ಟೂರ್‌ 2019′, ಇತ್ತೀಚಿಗೆ ಬೆಂಗಳೂರಿಗೂ ಆಗಮಿಸಿತ್ತು. ಈ ಟೂರ್‌ನ ಪ್ರಮುಖ ಉದ್ದೇಶವೇ ಲ್ಯಾಂಡ್‌ ರೋವರ್‌ ಕಾರಿನ ಶಕ್ತಿ ಪ್ರದರ್ಶನ. ಈ ಟೂರ್‌ನಲ್ಲಿ ಗ್ರಾಹಕರಿಗೆ ಲ್ಯಾಂಡ್‌ ರೋವರ್‌ಅನ್ನು ಹೇಗೆ ಬೆಟ್ಟ ಗುಡ್ಡಗಳಲ್ಲೂ ಚಲಾಯಿಸಬಹುದು ಎಂಬುದನ್ನು ತೋರಿಸುವುದಾಗಿತ್ತು. ಅದರಂತೆಯೇ, ತಜ್ಞ ಇನ್‌ಸ್ಟ್ರಕ್ಟರ್‌ ಒಬ್ಬರ ಸಹಾಯದಿಂದ ಗಾಡಿ ಚಾಲನೆಗೂ ಅವಕಾಶ ನೀಡಲಾಯಿತು. ಬೆಟ್ಟ ಹತ್ತುವಾಗ, ಇಳಿಯುವಾಗ ಯಾವ ರೀತಿ ಕಾರು ತನ್ನನ್ನು ತಾನೇ ಹೇಗೆ ನಿಯಂತ್ರಿಸಿಕೊಳ್ಳುತ್ತದೆ ಎಂಬುದರ ಗ್ರಹಿಕೆ ಅಲ್ಲಿ ನೆರೆದಿದ್ದ ಗ್ರಾಹಕರಿಗೆ ಸಿಕ್ಕಿತು. ಜತೆಗೆ ಕಾರಿನ ಎಚ್‌ಎಸ್‌ಎ,ಎಚ್‌ಡಿಸಿ (ಹಿಲ್‌ ಡಿಸೆಂಟ್‌ ಕಂಟ್ರೋಲ್‌), ಎಟಿಪಿಸಿ(ಆಲ್‌ ಟೆರೈನ್‌ ಪ್ರೋಗ್ರೆಸ್‌ ಕಂಟ್ರೋಲ್‌) ಫೀಚರ್‌ನ ಬಳಕೆ ಹೇಗೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಅಂದ ಹಾಗೆ, ಈ ಟೂರ್‌ಗಾಗಿ ಬಳಸಿಕೊಂಡದ್ದು ಲ್ಯಾಂಡ್‌ ರೋವರ್‌ 2 ಲೀಟರ್‌ ಇಂಗೇನಿಯಮ್‌ ಡೀಸೆಲ್‌ ಎಂಜಿನ್‌ ಕಾರು. ಇದು 9 ಗೇರ್‌ಗಳ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್ ಅನ್ನು ಹೊಂದಿದೆ.

– ಸೋಮಶೇಖರ ಸಿ.ಜೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ