ವಾಟ್ಸ್‌ ಆ್ಯಪ್‌ ಅಪ್‌ಗ್ರೇಡ್‌ಗೆ ಸಲಹೆ

Team Udayavani, Nov 21, 2019, 8:24 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ವಾಟ್ಸ್‌ಆ್ಯಪ್‌ ಗ್ರಾಹಕರು ಮತ್ತೂಮ್ಮೆ ವೈರಸ್‌ ದಾಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ, ವಾಟ್ಸ್‌ ಆ್ಯಪ್‌ನ ಎಲ್ಲಾ ಗ್ರಾಹಕರೂ, ಆ ಆ್ಯಪ್‌ ಅನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರದ ಅಧೀನದ ‘ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌-ಇಂಡಿಯಾ’ (ಸಿಇಆರ್‌ಟಿ-ಇನ್‌) ಎಚ್ಚರಿಕೆ ನೀಡಿದೆ.

ಸಿಇಆರ್‌ಟಿ-ಇನ್‌, ಆನ್‌ಲೈನ್‌ ಮೂಲಕ ಆಗುವ ಹ್ಯಾಕಿಂಗ್‌, ಫಿಶಿಂಗ್‌ ಮುಂತಾದ ಅಪಾಯಗಳನ್ನು ನಿಭಾಯಿಸುವ ನೋಡಲ್‌ ಸಂಸ್ಥೆ ಯಾಗಿದೆ. ವಾಟ್ಸ್ ಆ್ಯಪ್‌ ಬಳಸುವ ಎಲ್ಲಾ ಗ್ರಾಹಕರ ಮೊಬೈಲಿಗೆ ಬರುತ್ತಿರುವ ಎಂಪಿ 4 ಮಾದರಿಯ ವಿಡಿಯೋ ಕ್ಲಿಪಿಂಗ್‌ ಒಂದರ ಮೂಲಕ ಅಜ್ಞಾತ ಸ್ಥಳದಲ್ಲಿರುವ ಹ್ಯಾಕರ್‌ಗಳು, ವೈರಸ್‌ಗಳನ್ನು ಹರಿಬಿಡುತ್ತಿದ್ದಾರೆಂದು ವಾಟ್ಸ್‌ ಆ್ಯಪ್‌ ಸಂಸ್ಥೆ ಎಚ್ಚರಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ