ವಾಟ್ಸಾಪ್ ನಲ್ಲಿ ಕೊನೆಗೂ ಬಂತು ಡಾರ್ಕ್ ಮೋಡ್: ಹೇಗೆ ಬಳಸುವುದು ?

Team Udayavani, Jan 23, 2020, 9:40 AM IST

ನ್ಯೂಯಾರ್ಕ್ : ವಾಟ್ಸಾಪ್ ಕೊನೆಗೂ ತನ್ನ ಬಳಕೆದಾರರಿಗೆ ಬಹುನಿರೀಕ್ಷಿತ ಡಾರ್ಕ್ ಮೋಡ್ ಅನ್ನು ಪರಿಚಯಿಸಿದೆ. ಈ ಫೀಚರ್ ಆ್ಯಂಡ್ರಾಯ್ಡ್ ಬೇಟಾ ಅವೃತ್ತಿಯ ನೂತನ ಅಪ್ ಡೇಟ್ ನಲ್ಲಿ ಲಭ್ಯವಾಗಲಿದ್ದು, ಇದೇ ಮೊದಲ ಬಾರಿಗೆ ಅಧಿಕೃತವಾಗಿ ಜಾರಿಗೆ ಬರುವ ಮೊದಲೇ ಕೋಟ್ಯಾಂತರ ಬಳೆದಾರರನ್ನು ತಲುಪಲಿದೆ. ನೀವು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ, ಡಾರ್ಕ್ ಮೋಡ್ ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಡಾರ್ಕ್ ಮೋಡ್, ವಾಟ್ಸಾಪ್ ಅಧಿಕೃತ ಆ್ಯಪ್ ನಲ್ಲಿ ಲಭ್ಯವಿಲ್ಲ. ಬದಲಾಗಿ ಬೇಟಾ ಅವೃತ್ತಿಗಳಲ್ಲಿ ಮಾತ್ರ ಬಳಸಲು ಸಾಧ್ಯವಿದ್ದು, ಇದನ್ನು ಸುಲಭವಾಗಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ವಾಟ್ಸಾಪ್ 2.20.13 ಆ್ಯಂಡ್ರಾಯ್ಡ್ ಬೇಟಾ ಅವೃತ್ತಿಗೆ ಜಾಯಿನ್ ಆದರೇ ನಿಮಗೆ ಹೊಸ ಹೊಸ ಅಪ್ಡೇಟ್ ಗಳು ಕಾಣಸಿಗುತ್ತವೆ.

ಹಾಗಾಗಿ ಜನವರಿ 21 ರಂದು ಬಿಡುಗಡೆಯಾದ ನವೀಕರಣಗೊಂಡ ವಾಟ್ಸಾಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ, ಈಗಾಗಲೇ ಬೇಟಾ ಅವೃತ್ತಿಯನ್ನು ಬಳಸುತ್ತಿದ್ದರೆ ಅಪ್ ಡೇಟ್ ಮಾಡಿದರೆ ಡಾರ್ಕ್ ಮೋಡ್ ಫೀಚರ್ ಬಳಸಬಹುದು.

  • ವಾಟ್ಸಾಪ್ ಬೇಟಾ ಆವೃತ್ತಿಯಲ್ಲಿ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಿ.
  • ಅಲ್ಲಿ ಚಾಟ್ಸ್ ಎಂಬ ಆಯ್ಕೆ ಕಾಣಿಸಿದ ತಕ್ಷಣ, ಹೊಸದಾಗಿ ಬಳಕೆಗೆ ಬಂದ ಥೀಮ್ ಅನ್ನು ಕ್ಲಿಕ್ ಮಾಡಿ
  • ಈ ಥೀಮ್ ನಲ್ಲಿ ಸಿಸ್ಟಮ್ ಡೀಫಾಲ್ಟ್, ಲೈಟ್ ಮತ್ತು ಡಾರ್ಕ್ ಎಂಬ ಆಯ್ಕೆಗಳು ಕಾಣಿಸುತ್ತದೆ.
  • ಡಾರ್ಕ್ ಗೆ ಕ್ಲಿಕ್ ಮಾಡಿದ ತಕ್ಷಣ ವಾಟ್ಸಾಪ್ ಡಾರ್ಕ್ ಮೋಡ್ ಬಳಕೆಗೆ ಸಿಗಲಿದೆ.
  • ಮಾತ್ರವಲ್ಲದೆ ಸಿಸ್ಟಮ್ ಡೀಫಾಲ್ಟ್ ಆಯ್ಕೆಯನ್ನು ಕ್ಲಿಕ್ಕಿಸಿದರೆ ಬೆಳಕಿಗೆ ಅನುಗುಣವಾಗಿ ಡಾರ್ಕ್ ಮೋಡ್ ಮತ್ತು ಲೈಟ್ ಮೋಡ್ ಗಳಾಗಿ ಬದಲಾಗಲಿದೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ