
ಇಂದು World Ocean Day: ಕಡಲ ಉಳಿವಿನಲ್ಲಿ ಅಡಗಿದೆ ನಮ್ಮ ಬದುಕು!
Team Udayavani, Jun 8, 2023, 7:01 AM IST

ಸಾಗರಗಳ ಜೀವವೈವಿಧ್ಯತೆ ಮತ್ತು ಸಮುದ್ರದ ಮಹತ್ವದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಪ್ರತೀ ವರ್ಷ ಜೂ.8 ರಂದು “ವಿಶ್ವ ಸಾಗರ ದಿನ”ವನ್ನು ಆಚರಿಸ ಲಾಗುತ್ತಿದೆ. ಈ ಬಾರಿ “ಮಹಾಸಾಗರ; ಅಲೆಗಳು ಬದಲಾಗುತ್ತಿವೆ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತಿದೆ. ತನ್ಮೂಲಕ ಸಾಗರ ಗಳಲ್ಲಾಗುತ್ತಿರುವ ಪ್ರಸಕ್ತ ಬೆಳವಣಿಗೆಗಳ ಬಗೆಗೆ ವಿಶ್ವಾದ್ಯಂತದ ಜನರ ಗಮನ ಸೆಳೆಯುವುದರ ಜತೆಯಲ್ಲಿ ಭವಿಷ್ಯದ ಕರಾಳತೆಯ ಕುರಿತಂತೆ ಎಚ್ಚರಿಕೆ ಯನ್ನೂ ನೀಡುವ ಪ್ರಯತ್ನ ಮಾಡಲಾಗುತ್ತಿದೆ.
ಸಾಗರ ಅಥವಾ ಸಮುದ್ರ ಕೇವಲಜಲಜೀವಿಗಳಿಗೆ ಮಾತ್ರವಲ್ಲ, ಭೂಮಿಯ ಮೇಲೆ ವಾಸಿಸುವ ಪ್ರತೀ ಜೀವಿಗೂ ಮುಖ್ಯವೇ. ಭೂಮಿಯ ವಾತಾವರಣದ ಸಮತೋಲನದಲ್ಲಿ ಸಾಗರಗಳ ಪಾತ್ರವೂ ದೊಡ್ಡದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ತಾಪಮಾನ, ಬದಲಾಗುತ್ತಿರುವ ವಾತಾವರಣ ಸಮುದ್ರ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ. ಅದಲ್ಲದೇ ಕಡಲ ಜೀವವೈವಿಧ್ಯತೆಯ ಮೇಲೂ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ. ಇದರ ಜತೆಗೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ಸಾಗರಗಳಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪರಿಸರ, ಪ್ರಕೃತಿಯ ಜತೆಜತೆಗೆ ಸಾಗರದ ಉಳಿವಿಗಾಗಿ ಹೆಜ್ಜೆ ಇಡಬೇಕಾಗಿದೆ.
ತಾಪಮಾನ ನಿಯಂತ್ರಣದಲ್ಲಿ ಸಮುದ್ರಗಳ ಪಾತ್ರ
ಸಮುದ್ರ ಸಾವಿರಾರು ಜೀವ ಪ್ರಭೇದಗಳ ಗೂಡು. ಸರಾ ಸರಿ ಶೇ.50ರಷ್ಟು ಆಮ್ಲಜನಕ ಸಮುದ್ರದಿಂದ ಉತ್ಪತ್ತಿಯಾ ಗುತ್ತದೆ. ಅದಲ್ಲದೇ ಕಾರ್ಖಾನೆಗಳಿಂದ ಹೊರಸೂಸುವ ಶೇ.90ರಷ್ಟು ತಾಪಮಾನವನ್ನು ಸಮುದ್ರ ತನ್ನೊಳಗೆ ಎಳೆದು ಕೊಳ್ಳುತ್ತದೆ. ಸಮುದ್ರದಲ್ಲಿ ಹೆಚ್ಚಾಗುತ್ತಿರುವ ಈ ಶಾಖ, ತಾಪ ಮಾನ ಸಮುದ್ರದಲ್ಲಿನ ಜೀವಿಗಳಿಗೆ ಮಾರಕವಾಗುತ್ತಿದ್ದು, ಭೂಮಿಯ ತಾಪಮಾನದ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದಾಗಿಯೇ ವರ್ಷಗಳುರುಳಿದಂತೆಯೇ ತಾಪಮಾನ ಹೆಚ್ಚು ತ್ತಲೇ ಸಾಗಿದೆ. ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಹವಾ ಮಾನ ಬದಲಾವಣೆಗೂ ಹೆಚ್ಚುತ್ತಿರುವ ತಾಪಮಾನವೇ ಬಲುಮುಖ್ಯ ಕಾರಣವಾಗಿದೆ.
ಪ್ಲಾಸ್ಟಿಕ್ ಮಾಲಿನ್ಯ
ತಾಪಮಾನ ಏರಿಕೆಯ ಜತೆಜತೆಗೆ ಕಡಲ ಜೀವವೈವಿಧ್ಯತೆಗೆ ಎದುರಾಗಿರುವ ಬಹುದೊಡ್ಡ ಅಪಾಯ ಎಂದರೆ ಪ್ಲಾಸ್ಟಿಕ್ ಮಾಲಿನ್ಯ. ಮಾನವ ಎಸೆಯುವ ಪ್ರತೀ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ವಸ್ತುಗಳಿಂದ ಕಡಲ ಒಡಲು ತುಂಬಿ ಹೋಗಿದ್ದು, ಇದರಿಂದ ಕಡಲು ಹಾಗೂ ಕಡಲ ಜೀವಿಗಳು ತನ್ನ ಸೌಂದರ್ಯ, ಜೀವಿತಾವಧಿಯನ್ನು ಕಳೆದುಕೊಳ್ಳು ತ್ತಿವೆ. 2050ರ ವೇಳೆಗೆ ಸಮುದ್ರಗಳಲ್ಲಿ ಮೀನು ಗಳಿಗಿಂತ ಪ್ಲಾಸ್ಟಿಕ್‌ಗಳು ಹೆಚ್ಚಾಗಿ ಇರಲಿವೆ ಎಂದು ಊಹಿಸಲಾಗಿದೆ. ಸಮುದ್ರದ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ದೇಶಗಳಲ್ಲಿ ಪಿಲಿಫೈನ್ಸ್ ( 3,56,371 ಮೆಟ್ರಿಕ್ ಟನ್ಸ್ )ಮೊದಲ ಸ್ಥಾನದಲ್ಲಿದ್ದರೆ, ಭಾರತ ( 1,26,513 ಮೆಟ್ರಿಕ್ ಟನ್ಸ್ ) ಎರಡನೇ ಸ್ಥಾನದಲ್ಲಿದೆ. ಇನ್ನು ಮೊದಲ ಹತ್ತು ಸ್ಥಾನಗಳಲ್ಲಿ ದಕ್ಷಿಣ ಏಷ್ಯಾ ದೇಶಗಳೇ ಹೆಚ್ಚಿವೆ.
ಕಡಲ ರಕ್ಷಣೆಗಾಗಿ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ. ನಾವುಜಾಗೃತರಾಗಿ ನಮ್ಮವರನ್ನು ಕಡಲ ಉಳಿವಿನೆಡೆಗೆ ಕಾರ್ಯಪ್ರವೃತ್ತರನ್ನಾಗಿಸಿ ಕಡಲ ಉಳಿವಿಗೆ ನೆರವಾಗೋಣ. ಕಡಲ ರಕ್ಷಣೆಯ ಮಾತುಗಳು ಕೇವಲ ಮಾತಾಗಿಯೇ ಉಳಿಯದಿರಲಿ, ಏಕೆಂದರೆ ನಮ್ಮ ಗ್ರಹದ ಉಳಿವು ಇರುವುದು ನಮ್ಮ ಕೈಗಳಲ್ಲೇ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

33% Reservation: ಭವಿಷ್ಯದಲ್ಲಿ ವಿಧಾನಸಭೆಗೆ 74 ಮಂದಿ ಮಹಿಳೆಯರ ಪಾರುಪತ್ಯ

Women: ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ “ನಾರಿಶಕ್ತಿ ವಂದನ್ ಅಧಿನಿಯಮ”

Udayavani: ಕಾವೇರಿ ಕಗ್ಗಂಟಿಗೆ ಸರಕಾರದ ಎಡವಟ್ಟುಗಳೇ ಕಾರಣ: ಬಸವರಾಜ ಬೊಮ್ಮಾಯಿ ಆಕ್ರೋಶ

UV Fusuion: ರಾಜ್ಯದ ಮೊದಲ ಆಸ್ಟ್ರೋ ಫಾರ್ಮ್: ಅತ್ಯುತ್ತಮ ಖಗೋಳ ಪ್ರವಾಸಿ ಕೇಂದ್ರ

Solutions and Problems: ಸಮಸ್ಯೆಗೊಂದು ಪರಿಹಾರವೂ ಇದೆ
MUST WATCH
ಹೊಸ ಸೇರ್ಪಡೆ

Waste disposal: ರಾ.ಹೆದ್ದಾರಿ ಬದಿ ಕಸ ಎಸೆಯುತ್ತಿದ್ದ ವಾಹನ ತಡೆದು ದಂಡ ವಿಧಿಸಿದ ಪಂಚಾಯತ್

ಗೆಲುವಿನ ಹಾದಿಯಲ್ಲಿ ‘13’ ಸಿನಿಮಾ

Goa Karnataka Border: ಅಕ್ರಮ ಮದ್ಯ ಸಾಗಣೆ… ಗೋವಾ ಕರ್ನಾಟಕ ಗಡಿಯಲ್ಲಿ ಬಿಗಿ ತಪಾಸಣೆ

South Africa Squad; ಗಾಯಗೊಂಡ ಇಬ್ಬರು ವೇಗಿಗಳು; ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ

Actor Akhil Mishra: ಅಡುಗೆ ಮನೆಯಲ್ಲಿ ಜಾರಿಬಿದ್ದು ಖ್ಯಾತ ಬಾಲಿವುಡ್ ನಟ ನಿಧನ