ಸ್ಥಬ್ಧ ಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ

ಜಂಬೂಸವಾರಿ ಮೆರವಣಿಗೆಯಲ್ಲಿ 6 ಸ್ತಬ್ದ ಚಿತ್ರ ಪ್ರದರ್ಶನ

Team Udayavani, Oct 11, 2021, 1:56 PM IST

ಸ್ಥಬ್ಧ ಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿ ಸುವ ಸ್ತಬ್ಧಚಿತ್ರಗಳ ನಿರ್ಮಾಣದ ಸಿದ್ಧತಾ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಪರಿಶೀಲಿಸಿದರು.  ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ರಂಗಮಂದಿರ ಮಂಟಪದ ಎದುರಿನ ಮಳಿಗೆಯಲ್ಲಿ ನಿರ್ಮಿಸುತ್ತಿರುವ ಸ್ತಬ್ಧಚಿತ್ರ ಪರಿಶೀಲಿಸಿದರು.

ನಿರ್ಮಾಣದ ಕಾರ್ಯದಲ್ಲಿ ತೊಡ ಗಿದ್ದ ಕಲಾವಿದರ ಜತೆಗೆ ಸಮಾಲೋಚಿಸಿ ಮಾಹಿತಿ ಪಡೆದರು. ಈ ವೇಳೆ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್‌ ಅವರು 6 ಸ್ತಬ್ಧಚಿತ್ರಗಳ ಬ್ಲೂಪ್ರಿಂಟ್‌ ಹಿಡಿದು ವಿವರಣೆ ಒದಗಿಸಿದರು. ಬಹು ವಸತಿ ಸಂಕೀರ್ಣ, ಕೊರೊನಾ ಮುಕ್ತ ಕರ್ನಾಟಕ, ಆನೆಬಂಡಿ, ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ, ಪರಿಸರ ಸಂರಕ್ಷಣೆ, ಸಮಗ್ರ ಕೃಷಿಯ ಸ್ತಬ್ಧಚಿತ್ರ ತಯಾರಾಗುವ ಕುರಿತು ಮಾಹಿತಿ ನೀಡಿದರು.

ತಾಲೀಮಿಗೆ ಸಜ್ಜು:ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ತೀರ್ಮಾನದಂತೆ ಸ್ತಬ್ಧಚಿತ್ರಗಳನ್ನು ಕಡಿಮೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಬಾರಿ 6 ಸ್ತಬ್ಧಚಿತ್ರ ಪಾಲ್ಗೊಳ್ಳಲಿವೆ. ಅ.13ರ ಸಂಜೆ ಹೊತ್ತಿಗೆ ಸಂಪೂರ್ಣ ಸಿದ್ಧವಾಗಲಿದೆ. ಕಲಾತಂಡ ಭಾಗವಹಿಸಲಿವೆ. ದಸರಾ ಮಹೋತ್ಸವದ ಎಲ್ಲ ಸಿದ್ಧತೆ ಮುಗಿಯುತ್ತಿವೆ. ತಾಲೀಮಿಗೆ ಆನೆಗಳು ಸಜ್ಜಾಗಿವೆ ಎಂದರು. ಸರಳ ದಸರಾ ಮಹೋತ್ಸವ ಆಚರಣೆಯಾಗಿದ್ದರಿಂದ ಅಧಿಕಾರೇತರ ಸದಸ್ಯರನ್ನು ರಚನೆ ಮಾಡದೆ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಗಳು ಸುಲಲಿತವಾಗಿ ಜರುಗುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ;- ಶಿರ್ವ: ನೀರು ಪಾಲಾದ ಯುವಕನ ಶವ ಪತ್ತೆ

ಐಟಿ ದಾಳಿಗೂ-ಬಿಎಸ್‌ವೈಗೂ ಸಂಬಂಧವಿಲ್ಲ: ಐಟಿ ದಾಳಿಗೂ-ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವ ರಿಗೂ ಯಾವುದೇ ಸಂಬಂಧವಿಲ್ಲ. ಪ್ರತಿಪಕ್ಷಗಳು ಟೀಕೆ ಮಾಡ ಬೇಕೆಂಬ ಕಾರಣಕ್ಕಾಗಿ ಟೀಕಿಸುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರತಿಪಕ್ಷದವರ ಮನೆಯ ಮೇಲೆ ದಾಳಿ ಮಾಡಿದಾಗ ರಾಜಕೀಯಪ್ರೇರಿತ ಎನ್ನುತ್ತಾರೆ. ಈಗ ಬೇರೆಯವರ ಮನೆಯಲ್ಲಿ ದಾಳಿ ಮಾಡಿದರೂ ರಾಜಕೀಯ ಬಣ್ಣ ಕಟ್ಟುತ್ತಾರೆ. ಐಟಿ ದಾಳಿ ಕಾನೂನಿನ ಪ್ರಕಾರ ನಡೆದಿದೆ. ಐಟಿಯವರು ಎಲ್ಲರ ಮನೆಯ ಮೇಲೂ ದಾಳಿ ನಡೆಸಲು ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು.

ಸಿಂದಗಿ, ಹಾನಗಲ್‌ ಕ್ಷೇತ್ರದ ಉಪ ಚುನಾವಣೆಯ ಮೇಲೆ ಯಾವ ಪರಿಣಾಮ ಬೀರಲ್ಲ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಸಿ.ಎಂ.ಉದಾಸಿ ಕುಟುಂಬಕ್ಕೆ ಟಿಕೆಟ್‌ ಕೊಡದೆ ಇರುವುದು ಹೈಕಮಾಂಡ್‌ ತೀರ್ಮಾನ. ಅದನ್ನು ಯಾರೂ ಪ್ರಶ್ನೆ ಮಾಡಲಾಗದು. ನೀವು ಮಾಡಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷ ಎಂ.ಅಪ್ಪಣ್ಣ, ಶಾಸಕ ಎಲ್‌. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾಧಿ ಕಾರಿ ಡಾ.ಬಗಾದಿ ಗೌತಮ್‌, ಜಿಪಂ ಸಿಇಒ ಎ.ಎಂ.ಯೋಗೀ ಶ್‌, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್‌ ಇದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.