
ತೆಪ್ಪೋತ್ಸವ ಬದಲು ದೇವಿಗೆ ತೀರ್ಥ ಸ್ನಾನ
Team Udayavani, Oct 22, 2021, 12:23 PM IST

ಮೈಸೂರು: ಕೋವಿಡ್ 19 ಹಿನ್ನೆಲೆ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವ ಬದಲಿಗೆ ತೀರ್ಥಸ್ನಾನವನ್ನು ಸರಳವಾಗಿ ನೆರವೇರಿಸಲಾಯಿತು. ಪ್ರತಿವರ್ಷ ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗುತ್ತಿದ್ದ ದೇವಿಯ ತೆಪ್ಪೋತ್ಸವ ಈ ಬಾರಿಯೂ ಕೊರೊನಾ ಹಿನ್ನೆಲೆ ಕಳೆದ ವರ್ಷದಂತೆ ತೀರ್ಥಸ್ನಾನ ಮಾಡಿಸಲಾಯಿತು.
ಬೆಳಗ್ಗೆ ಚಿನ್ನಾಭರಣಗಳಿಂದ ಅಲಂಕೃತಗೊಂಡ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನ ಆವರಣದಿಂದ ದೇವಿಕೆರೆ ವರೆಗೆ ಮೆರವಣಿಗೆ ಮೂಲಕ ತರಲಾಯಿತು.
ಇದನ್ನೂ ಓದಿ:- ಅಕ್ಕಮಹಾದೇವಿ ವಿವಿಗೆ ನಿರಾಸಕ್ತಿಯ ಬರೆ
ಅಲ್ಲಿ ಪ್ರಧಾನ ಆಗಮಿಕ ಶಶಿಶೇಖರ್ ದೀಕ್ಷಿತರ ನೇತೃತ್ವದಲ್ಲಿ ದೇವಿಗೆ ಪೂಜೆ ನೆರವೇರಿಸಿ, ತೀರ್ಥ ಸ್ನಾನ ನೆರವೇರಿಸಲಾಯಿ. ಈ ಮೂಲಕ ದಸರಾ ಮಹೋತ್ಸವ ಸಂಪನ್ನಗೊಂಡಿತ್ತು. ಜಿಲ್ಲಾಡಳಿತ ಪರವಾಗಿ ಅಪರ ಜಿಲ್ಲಾಧಿಕಾರಿ ಎಸ್. ಮಂಜುನಾಥ್, ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿ ಯತಿರಾಜು ಸಂಪತ್ ಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
