ದಕ್ಷಿಣ ಸಮರ ಕ್ಷಣ ರೋಚಕ ಕಣ

Team Udayavani, May 19, 2019, 9:35 AM IST

ದೇಶಾದ್ಯಂತ ಒಂದೊಂದು ಲೋಕಸಭಾ ಕ್ಷೇತ್ರವೂ ಒಂದೊಂದು ರೀತಿಯಲ್ಲಿ ವಿಶೇಷತೆ ಪಡೆದುಕೊಂಡಿದೆ. ದಿಗ್ಗಜ ನಾಯಕರಿಂದ ಹಿಡಿದು, ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವವರೂ ಸದ್ದು ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭೆಯ ಟಾಪ್‌ 50 ಕ್ಷೇತ್ರಗಳ ಪೈಕಿ ಕೊನೆಯ ಕಂತಿನಲ್ಲಿ ಕರ್ನಾಟಕದ ಏಳು,  ಉತ್ತರ ಭಾರತದ ಮೂರು ಸೇರಿದಂತೆ 14 ಕ್ಷೇತ್ರಗಳ ಸಮರ ಚಿತ್ರಣ ಇಲ್ಲಿದೆ.

ಹಾಸನ (ಕರ್ನಾಟಕ)
ಎ.ಮಂಜು (ಬಿಜೆಪಿ) Vs ಪ್ರಜ್ವಲ್‌ ರೇವಣ್ಣ (ಜೆಡಿಎಸ್‌)
* ದೇವೇಗೌಡರು ಸ್ಪರ್ಧಿಸಬೇಕೆಂದಿದ್ದ ಕ್ಷೇತ್ರದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಪುತ್ರ ಸ್ಪರ್ಧೆ.
* ಕಾಂಗ್ರೆಸ್‌ನಲ್ಲಿದ್ದ ಎ.ಮಂಜು ಬಿಜೆಪಿ ಸೇರ್ಪಡೆಗೊಂಡು ಸ್ಪರ್ಧಾಳುವಾಗಿದ್ದಾರೆ.
* ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಹಲವು ಸಂದಿಗ್ಧತೆ ನಡುವೆಯೂ ಪ್ರಚಾರ ನಡೆಸಿದ್ದರು. ಈ ಬಾರಿ ಯಾರು ಗೆಲ್ಲಬಹುದು ಎನ್ನುವ ವಿಚಾರವು ರಾಜ್ಯಾದ್ಯಂತ ತೀವ್ರ ಕುತೂಹಲ ಹುಟ್ಟುಹಾಕಿದೆ.

ಮಂಡ್ಯ (ಕರ್ನಾಟಕ)
ಸುಮಲತಾ (ಪಕ್ಷೇತರ) Vs ನಿಖೀಲ್‌ (ಜೆಡಿಎಸ್‌)
* ಚುನಾವಣೆ ಘೋಷಣೆ ಮುನ್ನವೇ ರಂಗು ಪಡೆದ ಕ್ಷೇತ್ರವಿದು.
* ಈ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸುಮಲತಾ ಮತ್ತು ಜೆಡಿಎಸ್‌ನಿಂದ ಸಿಎಂ ಪುತ್ರ ನಿಖೀಲ್‌ ಸ್ಪರ್ಧಿಸಲಿದ್ದಾರೆ ಎಂದಾದಾಗ ಮತ್ತಷ್ಟು ಬಿರುಸಾಯ್ತು ಪ್ರಚಾರ.
* ಜೆಡಿಎಸ್‌ ನಾಯಕರ ವಿವಾದಾತ್ಮಕ ಹೇಳಿಕೆಗಳು ಸುಮಲತಾಗೆ ವರವಾಗುವುದೇ ಕಾದು ನೋಡಬೇಕಿದೆ.

ತುಮಕೂರು (ಕರ್ನಾಟಕ)
ಎಚ್‌.ಡಿ.ದೇವೇಗೌಡ (ಜೆಡಿಎಸ್‌) Vs ಬಿ.ಎಸ್‌.ಬಸವರಾಜು (ಬಿಜೆಪಿ)
* ಬಹಳ ಲೆಕ್ಕಾಚಾರದ ಬಳಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
* ಕಷ್ಟದಲ್ಲಿ ಹಾಲಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡರಿಂದ ನಾಮಪತ್ರ ವಾಪಸ್‌.
* ಬಿಜೆಪಿಯಿಂದ ಮಾಜಿ ಸಂಸದ ಬಿ.ಎಸ್‌.ಬಸವರಾಜು ಸ್ಪರ್ಧಿಸಿರುವ ಕಣದಲ್ಲಿ ಈಗ ಗರಿಗೆದರಿದ ಕುತೂಹಲ.

ಉತ್ತರ ಕನ್ನಡ (ಕರ್ನಾಟಕ)
ಅನಂತ ಕುಮಾರ್‌ ಹೆಗಡೆ (ಬಿಜೆಪಿ) Vs ಆನಂದ ಅಸ್ನೋಟಿಕರ್‌ (ಜೆಡಿಎಸ್‌)
* ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ನೇರ ಹೋರಾಟವಿದೆ. ಅಸ್ನೋಟಿಕರ್‌ ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖರು ಗೈರುಹಾಜರಾಗಿದ್ದರು.
* ಬಿಜೆಪಿಯಲ್ಲಿ ಕೂಡ ಬಣಗಳು ಇದ್ದು, ಅದು ಕೇಂದ್ರ ಸಚಿವರಿಗೆ ಮುಳುವಾಗುವ ಲಕ್ಷಣ.
* ಜೆಡಿಎಸ್‌ ಪರ ಕೆಲಸ ಮಾಡಲು ಕಾಂಗ್ರೆಸ್‌ನ ಕೆಲವರು ಹಿಂದೇಟು ಹಾಕಿದ್ದರು.

ಬೆಂಗಳೂರು ಉತ್ತರ (ಕರ್ನಾಟಕ)
ಡಿ.ವಿ.ಸದಾನಂದ ಗೌಡ (ಬಿಜೆಪಿ) Vs ಕೃಷ್ಣ ಬೈರೇಗೌಡ (ಕಾಂಗ್ರೆಸ್‌)
* ದೇವೇಗೌಡರು ಇಲ್ಲಿಂದ ಸ್ಪರ್ಧೆ ಮಾಡುವ ಮಾತುಗಳಿದ್ದವು. ಅಂತಿಮವಾಗಿ ಸಚಿವ ಕೃಷ್ಣ ಬೈರೇಗೌಡರು ಸ್ಪರ್ಧಿಸಿದ್ದಾರೆ.
* 2004ರಿಂದ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಡಿ.ವಿ.ಸದಾನಂದ ಗೌಡ ಅವರು 2ನೇ ಬಾರಿಗೆ ಗೆಲ್ಲುವ ಭರವಸೆಯಲ್ಲಿ ಇದ್ದಾರೆ.
* ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರ ಸಂಖ್ಯೆ ಅಧಿಕವಿದೆ.

ಬೆಂಗಳೂರು ದಕ್ಷಿಣ (ಕರ್ನಾಟಕ)
ಹರಿಪ್ರಸಾದ್‌ (ಕಾಂಗ್ರೆಸ್‌) Vs ತೇಜಸ್ವಿ ಸೂರ್ಯ (ಬಿಜೆಪಿ)
* ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ನೀಡುವ ಮಾತುಗಳು ಇದ್ದರೂ, ಕೊನೆಗೆ ಸಿಕ್ಕಿದ್ದು ತೇಜಸ್ವಿ ಸೂರ್ಯಗೆ.
* ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಕಣಕ್ಕೆ. 1999ರಲ್ಲಿ ಪ್ರಸಾದ್‌ ಸೋತಿದ್ದರು.
*1996ರಿಂದ ಈ ಕ್ಷೇತ್ರದಲ್ಲಿ ಅನಂತ ಕುಮಾರ್‌ ಅವರೇ ಜಯ ಸಾಧಿಸುತ್ತಾ ಬಂದಿದ್ದರು.

ಗುಲ್ಬರ್ಗ (ಕರ್ನಾಟಕ)
ಮಲ್ಲಿಕಾರ್ಜು ಖರ್ಗೆ (ಕಾಂಗ್ರೆಸ್‌) Vs ಡಾ| ಉಮೇಶ್‌ ಜಾಧವ್‌ (ಬಿಜೆಪಿ)
* ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಬಿಜೆಪಿಯಿಂದ ಡಾ| ಉಮೇಶ್‌ ಜಾಧವ್‌ ಕಣಕ್ಕೆ.
* ಮೋದಿ ಪ್ರಧಾನಿಯಾಗುವುದು ಎಷ್ಟು ಸತ್ಯವೋ, ಗುಲ್ಬರ್ಗದಲ್ಲಿ ಜಾಧವ್‌ ಗೆಲುವುದೂ ಅಷ್ಟೇ ಸತ್ಯ ಎನ್ನುತ್ತಾರೆ ಬಿಜೆಪಿ ನಾಯಕರು.
* ಖರ್ಗೆಯವರು ಕ್ಷೇತ್ರದ ಜನರು ತಮ್ಮ ಕೈಬಿಡುವುದಿಲ್ಲ ಎಂಬ ವಿಶ್ವಾಸವನ್ನು ಪದೇ ಪದೆ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು (ಕೇರಳ)
ಕೆ.ಪಿ.ಸತೀಶ್ಚಂದ್ರನ್‌ (ಎಲ್‌ಡಿಎಫ್) Vs ರಾಜಮೋಹನ್‌ ಉಣ್ಣಿತ್ತಾನ್‌ (ಯುಡಿಎಫ್)
* 1989ರಿಂದಲೇ ಇಲ್ಲಿ ಯುಡಿಎಫ್ ಗೆಲ್ಲುತ್ತಿದೆ. ಕಾಲಕ್ಕೆ ತಕ್ಕಂತೆ ಅಭ್ಯರ್ಥಿಗಳು ಬದಲಾಗಿದ್ದಾರೆ.
* ಈ ಬಾರಿ ಬಿಜೆಪಿ ಕುಂಟಾರು ರವೀಶ ತಂತ್ರಿಯವರನ್ನು ಕಣಕ್ಕಿಳಿಸಿದೆ. ಶಬರಿಮಲೆ ವಿವಾದ ಹಿಂದೂ ಮತದಾರರ ಮೇಲೆ ಪ್ರಭಾವ ಬೀರಿದೆ.
* ಬಿಜೆಪಿಗೆ ಹಿಂದಿನ ಬಾರಿಗಿಂತ ಹೆಚ್ಚು ಅನುಕೂಲವಾಗಿ ಇರಲಿದೆ ಎಂಬ ವಿಶ್ಲೇಷಣೆಗಳಿವೆ.

ವಯನಾಡ್‌ (ಕೇರಳ)
ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಪಿ.ಪಿ.ಸುನೀರ್‌  (ಸಿಪಿಐ)
*ಅಮೇಠಿ ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಪರ್ಧಿಸಿರುವ 2ನೇ ಮತ್ತು ಅಲ್ಪಸಂಖ್ಯಾಕ‌ರೇ ಹೆಚ್ಚಾಗಿರುವ ಕ್ಷೇತ್ರ.
* ಬಿಜೆಪಿಯ ಮೈತ್ರಿ ಪಕ್ಷ ಭಾರತೀಯ ಧರ್ಮ ಜನಸೇನಾ ಅಭ್ಯರ್ಥಿ ಕಣದಲ್ಲಿದ್ದರೂ, ಮತ ವಿಭಜನೆಗೆ ಹೆಚ್ಚಿನ ಪರಿಣಾಮ ಇರಲಾರದು.
*ಕಾಂಗ್ರೆಸ್‌ ಹೇಳಿಕೊಳ್ಳುವ ಪ್ರಕಾರ ಕ್ಷೇತ್ರದಲ್ಲಿ ಪಕ್ಷದ ಅಧ್ಯಕ್ಷರ ಪರವಾಗಿಯೇ ಅಲೆ ಇದೆ. 4 ಕ್ಷೇತ್ರಗಳಲ್ಲಿ ಯುಡಿಎಫ್ ಶಾಸಕರಿದ್ದಾರೆ.

ಶಿವಗಂಗಾ (ತಮಿಳುನಾಡು)
ಕಾರ್ತಿ ಚಿದಂಬರಂ (ಕಾಂಗ್ರೆಸ್‌) Vs ಎಚ್‌.ರಾಜಾ (ಬಿಜೆಪಿ)
*ಏಳು ಬಾರಿ ಪಿ.ಚಿದಂಬರಂ ಪ್ರತಿನಿಧಿಸಿದ್ದ ಕ್ಷೇತ್ರವಿದು. 2014ರಲ್ಲಿ ಸ್ಪರ್ಧಿಸಿದ್ದ ಕಾರ್ತಿ ಚಿದಂಬರಂ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. * ಕಾಂಗ್ರೆಸ್‌ ನಾಯಕ ಇ.ಎಂ.ಸುದರ್ಶನ ನಾಚಿಯಪ್ಪನ್‌ಗೆ ಟಿಕೆಟ್‌ ಕೊಡದೇ ಇದ್ದದ್ದು ಸ್ಥಳೀಯ ಮುಖಂಡರಿಗೆ ಆಕ್ರೋಶ ತರಿಸಿದೆ.
* ಎಐಎಡಿಎಂಕೆ ಬೆಂಬಲ ನೀಡಿರುವುದರಿಂದಾಗಿ ಕ್ಷೇತ್ರದಲ್ಲಿ ಗೆಲ್ಲಬಹುದೆಂಬ ವಿಶ್ವಾಸ ಬಿಜೆಪಿಯದ್ದು.

ನಿಜಾಮಾಬಾದ್‌ (ತೆಲಂಗಾಣ)
ಕೆ.ಕವಿತಾ (ಟಿಆರ್‌ಎಸ್‌) Vs ಮಧು ಯಾಶ್ಕಿ ಗೌಡ್‌ (ಕಾಂಗ್ರೆಸ್‌)
* ಅಮೆರಿಕದಲ್ಲಿ ಟೆಕ್ಕಿ ಆಗಿದ್ದ ಕೆ.ಕವಿತಾ, 2014ಲ್ಲಿ ಗೆದ್ದಿದ್ದರು. ತಂದೆ ಚಂದ್ರಶೇಖರ ರಾವ್‌ ಸಿಎಂ ಆಗಿರುವುದರಿಂದ ಅನುಕೂಲದ ಸ್ಥಿತಿ.
* 178 ಮಂದಿ ರೈತರು ತಮ್ಮ ದಯನೀಯ ಸ್ಥಿತಿ ಜಾಹೀರುಗೊಳಿಸಲು ಚುನಾವಣೆಗೆ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಗೈರತ್ತು.
* ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಆರ್‌ಎಸ್‌ ಶಾಸಕರೇ ಇರುವುದು ಧನಾತ್ಮಕ ಸ್ಥಿತಿ.

ಗುಣಾ (ಮಧ್ಯಪ್ರದೇಶ)
ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್‌) Vs ಡಾ| ಕೆ.ಪಿ.ಯಾದವ್‌ (ಬಿಜೆಪಿ)
* ನಾಲ್ಕು ಬಾರಿ ಗೆದ್ದಿರುವ ಸಿಂಧಿಯಾಗೆ ಈ ಬಾರಿಯೂ ನಿರಾಯಾಸ ಜಯ ಸಾಧ್ಯತೆ.
* ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದಿರುವುದರಿಂದ ಮಾಯಾ ಕೋಪ ಪ್ರಭಾವ ಬೀರುವ ಸಾಧ್ಯತೆ.
* ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಯನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು ಸಿಂಧಿಯಾ.

ಹಝಾರಿಬಾಗ್‌ (ಜಾರ್ಖಂಡ್‌)
ಜಯಂತ್‌ ಸಿನ್ಹಾ (ಬಿಜೆಪಿ) Vs ಗೋಪಾಲ್‌ ಸಾಹು (ಕಾಂಗ್ರೆಸ್‌)
* ಜಾರ್ಖಂಡ್‌ ಮುಕ್ತಿ ಮೋರ್ಚಾ ಜತೆ ಕಾಂಗ್ರೆಸ್‌ ಮೈತ್ರಿಯಿಂದ ಸಿನ್ಹಾಗೆ ಪರಿಸ್ಥಿತಿ ಕಠಿನ.
* ಜೆಎಂಎಂ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಟಿಕೆಟ್‌ ನೀಡದೆ ಇರುವುದು ಕೊಂಚ ಅನುಕೂಲ.
* ಯಶವಂತ್‌ ಸಿನ್ಹಾ ಕೇಂದ್ರದ ವಿರುದ್ಧ ಮಾಡುವ ಟೀಕೆಗಳು ಬಿಜೆಪಿಗೆ ಪ್ರತಿಕೂಲವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೆ ಇದನ್ನು ಜಯಂತ್‌ ನಿರಾಕರಿಸುತ್ತಾರೆ.

ಉನ್ನಾವ್‌ (ಉತ್ತರ ಪ್ರದೇಶ)
ಸಾಕ್ಷಿ ಮಹಾರಾಜ್‌ (ಬಿಜೆಪಿ) VS ಅರುಣ್‌ ಶಂಕರ್‌ ಮಿಶ್ರಾ (ಎಸ್‌ಪಿ)
* 2 ದಶಕಗಳ ಅವಧಿಯಲ್ಲಿ ಒಬ್ಬ ಸಂಸದ ಸತತ 2ನೇ ಬಾರಿಗೆ ಗೆದ್ದ ಉದಾಹರಣೆ ಇಲ್ಲ.
* ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವೇ ಪ್ರಮುಖವಾದ್ದರಿಂದ ಎಸ್ಪಿಯಿಂದ ಬ್ರಾಹ್ಮಣ ಮುಖಂಡನಿಗೆ ಟಿಕೆಟ್‌.
* ಕಾಂಗ್ರೆಸ್‌ನಿಂದ ಅನು ಟಂಡನ್‌ ಸ್ಪರ್ಧೆ ಮತ್ತು ಮೋದಿ ಪ್ರಭಾವಳಿ ಬಿಜೆಪಿಗೆ ಅನುಕೂಲ. ಸಾಕ್ಷಿ ಮಹಾರಾಜ್‌ ಅವರ ಬೆಂಬಲಿಗ ಪಡೆಯೂ ಬೃಹತ್ತಾಗಿರುವುದರಿಂದ ಅವರೇ ಗೆಲ್ಲುವ ಸಾಧ್ಯತೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಥುರಾ (ಉತ್ತರ ಪ್ರದೇಶ) ಹೇಮಮಾಲಿನಿ (ಬಿಜೆಪಿ) Vs ಕುನ್ವರ್‌ ನರೇಂದ್ರ ಸಿಂಗ್‌ (ಆರ್‌ಎಲ್‌ಡಿ) * ಜಾಟ್‌ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಕಳೆದ ಬಾರಿ ಕನಸಿನ...

  • ಲೋಕಸಭಾ ಚುನಾವಣೆಯ ಫ‌ಲಿತಾಂಶದ ದಿನ ಹತ್ತಿರವಾಗುತ್ತಿದ್ದು, ಈ ಬಾರಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದಷ್ಟೇ ಅಲ್ಲದೆ,...

  • 2019ರ ಲೋಕಸಭೆ ಚುನಾವಣೆ ಕ್ಷಣಕ್ಷಣದಲ್ಲೂ, ಕಣಕಣದಲ್ಲೂ ರೋಮಾಂಚಕಾರಿ ತಿರುವು ಪಡೆಯುತ್ತಾ ಇಡೀ ದೇಶವನ್ನು ಫ‌ಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಲ್ಲಿಸಿದೆ. ಜಗತ್ತಿನ...

  • ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಪ್ರಯತ್ನಿಸುತ್ತಿದ್ದು, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ರನ್ನು...

  • ಜನಸಂಖ್ಯೆಯ ದೃಷ್ಟಿಯಿಂದ ನವದೆಹಲಿಯ ಚಾಂದ್‌ನೀ ಚೌಕ್‌ ದೆಹಲಿಯ ಅತಿ ಚಿಕ್ಕ ಲೋಕಸಭಾ ಕ್ಷೇತ್ರವಾದರೂ ಇಲ್ಲಿನ ಗೆಲುವು ಬಿಜೆಪಿ, ಕಾಂಗ್ರೆಸ್‌ ಮತ್ತು ಆಪ್‌ಗೆ...

ಹೊಸ ಸೇರ್ಪಡೆ