ಮತದಾನಕ್ಕೆ ಹಿಂದೇಟು ಹಾಕದಿರಿ

Team Udayavani, Mar 28, 2019, 6:30 AM IST

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆದಿದ್ದಾರೆ.

ಈ ಅಭಿಯಾನ ಇಂದು ಮುಕ್ತಾಯಗೊಳ್ಳುತ್ತಿದ್ದು, ಪಾಲ್ಗೊಂಡ ಯುವ ಮತದಾರರೆಲ್ಲರಿಗೆ ಅಭಿನಂದನೆ.

ಮತದಾನ ನಮ್ಮ ಪವಿತ್ರ ಕರ್ತವ್ಯ
ಸುಭದ್ರ ಸರಕಾರ ಅಧಿಕಾರಕ್ಕೆ ಬರಬೇಕಾದರೆ ನಾವು ಮತದಾನವನ್ನು ಕಡ್ಡಾಯವಾಗಿ ಮಾಡಬೇಕು. ಮತದಾನ ನಮ್ಮ ಪವಿತ್ರ. ಆಗ ಮಾತ್ರ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕಲು ಅರ್ಹತೆ ಗಳಿಸುತ್ತೇವೆ. ನಾವು ನಿಜವಾದ ಅರ್ಥದಲ್ಲಿ ಆರ್ಹತೆ ಉಳ್ಳವರು ಎಂದು ಗುರುತಿಸಿ ಕೊಳ್ಳ ಬೇಕಾದರೆ ನಮ್ಮ ಮತವನ್ನು ನಾವು ತಪ್ಪದೇ ಚಲಾಯಿಸಲು ನಿರ್ಧರಿಸಬೇಕು.
– ನೆಲ್ಸನ್‌ ರೋಹನ್‌ ರೊಡ್ರಿಗಸ್‌, ವಿದ್ಯಾನಿಕೇತನ ಪ್ರಥಮ ದರ್ಜೆ
ಕಾಲೇಜು, ಕಾಪು

ದೇಶದ ಒಳಿತಿಗೆ ಮತದಾನ
ನಮ್ಮ ದೇಶದ, ನಾಡಿನ, ಸಮಾಜದ ಒಳಿತಿಗಾಗಿ ಯುವ ಜನರಾದ ನಾವೆಲ್ಲ ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕು. ಇದು ನಮ್ಮ ಹಕ್ಕು ಮತ್ತು ಕರ್ತವ್ಯ ಕೂಡ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವಂತಹ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಬೇಕು. ಯಾವುದೇ ಹಣ, ಹೆಂಡದ ಆಮಿಷಕ್ಕೆ ಒಳಗಾಗದೇ ಮುಕ್ತವಾಗಿ ಮತ ಚಲಾಯಿಸಬೇಕು.
– ನಾಗರತ್ನಾ, ರಿಚರ್ಡ್‌ ಅಲ್ಮೇಡಾ ಪ್ರ. ದರ್ಜೆ ಕಾಲೇಜು, ನಾವುಂದ

ಮಹತ್ತರ ಜವಾಬ್ದಾರಿ
ಮತದಾನ ಹತ್ತಿರ ಬಂದಂತೆ ಮತಯಾಚನೆ ಮಾಡುವ ಪ್ರವೃತ್ತಿ ಯಾವುದೇ ರಾಜಕಾರಣಿಗಳಿಗೆ ಭೂಷಣವಲ್ಲ. ಬದಲು 5 ವರ್ಷದ ಆಡಳಿತದ ಅವಧಿಯಲ್ಲಿ ಮತದಾರರನ್ನು ಸಂಪರ್ಕಿಸಿ ಆ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿ ಜನಪರ ಕಾಳಜಿಯ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಗೊಳಿಸುವ ಹಾಗೂ ಅನುಷ್ಠಾನಗೊಳಿಸಿರುವ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಜವಾಬ್ದಾರಿ ಪ್ರತಿಯೋರ್ವರಿಗೂ ಇದೆ ಎನ್ನುವುದನ್ನು ಮರೆಯಬಾರದು.
– ಅಮಿತ್‌ ಬಿ., ಸರಕಾರಿ ಪದವಿ ಕಾಲೇಜು, ಕೋಟೇಶ್ವರ

ಮತ ಹಾಕುವ ಮುನ್ನ ಯೋಚಿಸಿ
ಇವತ್ತಿನ ಯುವ ಸಮೂಹ ಒಂದಾಗ ಬೇಕು. ಮತದಾನ ಯಾರಿಗೆ ಮಾಡಬೇಕು ಎನ್ನುವ ಹಿರಿಯರ ಅನುಮಾನಗಳನ್ನು ತೊಡೆದು ಹಾಕ ಬೇಕು ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡ ಬೇಕು. ಎಲ್ಲರು ಒಂದಾಗಿ ಆರಿಸಬೇಕು. ಬಲಿಷ್ಠವಾದ ನಾಯಕರ ನಿರ್ಧಾರದ ಮೇಲೆ ನಮ್ಮ ದೇಶದ ಮುಂದಿನ ಬೆಳವಣಿಗೆ ನಿಂತಿದೆ. ಹೀಗಾಗಿ ನಾವು ಮತ ಹಾಕುವಾಗ ಸ್ವಲ್ಪ ದೇಶದ ಬಗ್ಗೆ ಚಿಂತನೆ ಮಾಡಬೇಕು.
– ಉಮೇಶ್‌ ಪೂಜಾರಿ, ಸ. ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ

ಯುವಶಕ್ತಿಗೆ ಮನ್ನಣೆ ಇರಲಿ
ಯುವ ನಾಯಕರನ್ನು ರಾಷ್ಟ್ರ ರಾಜಕರಣಕ್ಕೆ ಆಯ್ಕೆ ಮಾಡುವುದು ಅತೀ ಅಗತ್ಯ. ವಿದ್ಯಾವಂತ ಬುದ್ದಿವಂತ ಜಾಣ ಯುವಶಕ್ತಿಯನ್ನು ಬೆಳೆಸುವ ಜವಾಬ್ದಾರಿ ಹಿರಿಯ ರಾಜಕಾರಣಿಗಳಿಗಿದೆ. ಕೇವಲ ಮತಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ಯುವಕರನ್ನು ಬಳಸಿ ತದನಂತರ ಆ ಭಾಗಕ್ಕೆ ಇಣುಕಿ ನೋಡದ ಜನಪ್ರತಿನಿಧಿಗಳನ್ನು ಈಗಿಂದೀಗಲೇ ಚಿವುಟಿ ದೂರವಿಡಬೇಕು.
-ಸವಿನಯ, ಸರಕಾರಿ ಪದವಿ ಕಾಲೇಜು, ಕೋಟೇಶ್ವರ

ಒಂದು ದೇಶದ ಭವಿಷ್ಯ ಮತದಾರನ ಕೈಯ್ಯಲ್ಲಿ
ಮತದಾನವೆಂಬುದು ಒಬ್ಬ ವ್ಯಕ್ತಿಯನ್ನು ಗೆಲ್ಲಿಸಲಷ್ಟೆ ಮಾಡುವ ಕಾರ್ಯವಲ್ಲ.
ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಹಕ್ಕನ್ನು ನಾವು ಚಲಾಯಿಸುವುದು.
ಒಂದು ಕುಟುಂಬದ ಭವಿಷ್ಯ ಮನೆಯ ಯಜಮಾನನ ಕೈಯಲ್ಲಿರುತ್ತದೆಯೋ ಹಾಗೆ ಒಂದು ದೇಶದ ಭವಿಷ್ಯ,ಪ್ರಜಾಪ್ರಭುತ್ವದ ಗೆಲುವು, ಇವೆಲ್ಲವೂ ಮತದಾರರ ಮತದಾನದ ಮೇಲೆ ನಿಂತಿರುತ್ತದೆ.
– ಸತೀಶ್‌ ಕೆ.ಎಂ.ಜೆ. ಶಿರಿಯಾರ, ವೈಕುಂಠ ಬಾಳಿಗಾ ಲಾ ಕಾಲೇಜು ಉಡುಪಿ

ಒಂದೊಂದು ಮತವೂ ಅಮೂಲ್ಯ
ನಾವು ಮತದಾನ ಮಾಡುವಾಗ ಜಾತಿ, ಮತ, ಧರ್ಮದ ವಿಚಾರದ ಮೇಲೆ ಮತದಾನ ಮಾಡಬಾರದು. ಹಾಗೆಯೇ ನಮ್ಮ ಸ್ಥಳೀಯ ಬದಲಾವಣೆ ಗೋಸ್ಕರ ಶ್ರಮ ಪಡುವಂತಹ ನಾಯಕನನ್ನು ಆರಿಸು ವಂತದ್ದು ನಮ್ಮ ಜವಾಬ್ದಾರಿ. É ಯಾವ ನಾಯಕ ನನ್ನು ನಾವು ಪ್ರಧಾನಿಯನ್ನಾಗಿ ಆರಿಸಬೇಕು ಎನ್ನುವುದು ಮುಖ್ಯವಾಗಿ ನೋಡ ಬೇಕಾ ಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಮತವೂ ಅಮೂಲ್ಯವಾಗಿರುತ್ತದೆ.
– ಪ್ರಜ್ವಲ್‌ ಪೂಜಾರಿ ಶಿರ್ಲಾಲು, ಶ್ರೀ ಭುವನೇಂದ್ರ ಕಾಲೇಜು,ಕಾರ್ಕಳ

ಸರ್ವರ ಪಾಲ್ಗೊಳ್ಳುವಿಕೆ ಅತ್ಯಗತ್ಯ
ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವ ಬದಲು ದೇಶ ನನಗೇನು ಕೊಟ್ಟಿದೆ ಎನ್ನುವ ಜನರಿರುವರು ನಮ್ಮಲ್ಲಿ. ಭಾರತ ಸ್ವತಂತ್ರ ಗೊಂಡು ಇಷ್ಟು ವರ್ಷವಾ ದರೂ ನಮ್ಮಲ್ಲಿ ಶೇ. 100 ಮತದಾನ ಇಂದಿಗೂ ಚಲಾವಣೆಯಾಗಲಿಲ್ಲ. ಬದಲಾವಣೆ ಜಗದ ನಿಯಮ ಮಹತ್ತರ ತಿರುವು ಕಾಣ ಬೇಕಾಗಿರುವುದು ಅತ್ಯಗತ್ಯ. ಚುನಾವಣೆಯಲ್ಲಿ ಅರ್ಹ ನಾಗರಿಕರು ಪಾಲ್ಗೊಳ್ಳುವುದು ಅಗತ್ಯವಾಗಿದೆ.
– ಸುಷ್ಮಾ, ಹಾಳೆಕಟ್ಟೆ ಕಲ್ಯಾ, ಎಸ್‌.ವಿ. ಮಹಿಳಾ ಕಾಲೇಜು ಕಾರ್ಕಳ

ನನ್ನ ಮತ ದೇಶದ ಪ್ರಗತಿಗಾಗಿ
ಹಳ್ಳಿ ಹಳ್ಳಿಗಳಲ್ಲಿ ರಸ್ತೆಗಳನ್ನು ನಿರ್ಮಿಸಿ ಬೀದಿ ದೀಪಗಳನ್ನು ಅಳವಡಿಸಿ ನಿರ್ವಹಿಸಬೇಕು .ಮೂಲಸೌಕರ್ಯಗಳಾದ ರಸ್ತೆ ,ಆರೋಗ್ಯ ,ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು .ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು ಕೃಷಿಗೆ ಹೆಚ್ಚಿನ ಆಧ್ಯತೆನಿಡಬೇಕು .ಕೃಷಿ ಸಾಲ ಮನ್ನಾ ಮಾಡುವ ಬದಲು ಇನ್ನಿತರ ರೀತಿಯಲ್ಲಿ ಕೃಷಿಗೆ ಪೋ›ತ್ಸಾಹ ನೀಡಬೇಕು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಕಿಂಡಿ ಅಣೆಕಟ್ಟು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯವನ್ನು ಮಾಡ್ಬೇಕು.
– ಅಭಿಷೇಕ್‌ ಶೆಟ್ಟಿ ಆಜ್ರಿ, ಸ. ಪದವಿ ಪೂರ್ವ ಕಾಲೇಜು ಶಂಕರನಾರಾಯಣ

ಯೋಗ್ಯ ನಾಯಕರ ಆಯ್ಕೆಗೆ ಮತ ಹಾಕಬೇಕು
ಮತದಾನ ನಮ್ಮೆಲ್ಲರ ‌ ಹಕ್ಕು. ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮಲ್ಲಿ ಮತದಾನದ ಮೂಲಕ ಯಾರನ್ನು ಬೇಕಾದರೂ ಆಯ್ಕೆ ಮಾಡುವ ಸ್ವತಂತ್ರ ಪ್ರಜೆಗಳಿಗಿದೆ. ಸರಿಯಾಗಿ ಯೋಚಿಸಿ, ವಿವೇಚನೆಯಿಂದ ಮತ ಚಲಾಯಿಸುವ ಮೂಲಕ ಯೋಗ್ಯ ನಾಯಕರನ್ನು ಆ¿ಕೆ ಮಾಡಬಹುದು. ನಾವು ಆರಿಸಿ, ಕಳುಹಿಸಿದ ನಾಯಕ ದೇಶದ, ನಮ್ಮೂರಿನ ಅಭಿವೃದ್ಧಿಗೆ ಶೇ.100ರಷ್ಟು ಪ್ರಯತ್ನ ಮಾಡುವಂತಾಗಬೇಕು.
– ಡೆಲಿನಾ ನ್ಯಾಟಿÉ ನಜ್ರೆತ್‌, ರಿಚರ್ಡ್‌ ಅಲ್ಮೇಡಾ ಪ್ರ. ದರ್ಜೆ ಕಾಲೇಜು ನಾವುಂದ

ಮತದಾನಕ್ಕೆ ಹಿಂದೇಟು ಹಾಕದಿರಿ
ವಿದ್ಯಾವಂತರು ಮತ ಚಲಾಯಿಸದೇ ಹಿಂದೇಟು ಹಾಕುತ್ತಿರುವ ಪ್ರವೃತ್ತಿ ಸಲ್ಲದು. ಮತದಾನದ ಹಕ್ಕಿನ ಸದುಪಯೋಗವಾಗಬೇಕು. ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸುವುದರ ಮೂಲಕ ಯೋಗ್ಯ ವ್ಯಕ್ತಿಯನ್ನು ಆರಿಸಬೇಕು. ನನ್ನ ಮತ ನನ್ನ ದೇಶಕ್ಕಾಗಿ, ಉಜ್ವಲ ಭವಿಷ್ಯದ ಕನಸಿಗಾಗಿ. ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸೋಣ.
– ಅರ್ಪಣಾ, ಸರಕಾರಿ ಪದವಿ ಕಾಲೇಜು, ಕೋಟೇಶ್ವರ

ಜನಸಾಮಾನ್ಯರ ಸಮಸ್ಯೆಗಳಿಗೆ ದನಿಯಾಗುವವರಿಗೆ ನನ್ನ ಮತ
ಮತದಾನವು ಅಮೂಲ್ಯವಾದದ್ದು ಆರಿಸಿದ ವ್ಯಕ್ತಿ ಸದನದಲ್ಲಿ ದನಿ ಎತ್ತಿ ಆಯಾಯ ಕ್ಷೇತ್ರದ ಜನ ಸಾಮಾನ್ಯರ ಸಮಸ್ಯೆಗಳಿಗೆ ಉತ್ತರ ದೊರಕಿಸಿ ಕೊಳ್ಳುವವರೆಗೆ ಹೋರಾಟ ನಡೆಸುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ರಾಷ್ಟ್ರ ರಾಜಕಾರಣಕ್ಕೆ ಆಯ್ಕೆ ಮಾಡುವುದು ಸೂಕ್ತ. ಆಯ್ಕೆ ಮಾಡಿ ಆರಿಸಿದ ವ್ಯಕ್ತಿ ಅಭಿವೃದ್ಧಿಯ ಹರಿಕಾರರಾಗಿರಬೇಕು.
– ಲತಾ, ಸರಕಾರಿ ಪದವಿ ಕಾಲೇಜು, ಕೋಟೇಶ್ವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ