ಬಾಗಲಕೋಟೆ: “ಮುಳುಗಡೆ ಜಿಲ್ಲೆ’ಗೆ ಭರವಸೆಗಳೇ ಜೀವಾಳ


Team Udayavani, Mar 21, 2019, 1:35 AM IST

1-ss.jpg

ಬಾಗಲಕೋಟೆ: “ಮುಳುಗಡೆ ಜಿಲ್ಲೆ’ ಬಾಗಲಕೋಟೆ ಮತ್ತೂಂದು ಲೋಕಸಭಾ ಚುನಾ ವಣೆಗೆ ಸಜ್ಜಾಗುತ್ತಿದೆ. ಮೊದಲು ವಿಜಯಪುರ ದಕ್ಷಿಣ ಲೋಕಸಭಾ ಕ್ಷೇತ್ರವಾಗಿದ್ದ ಬಾಗಲಕೋಟೆ, 1967ರಿಂದ ಬಾಗಲಕೋಟೆ ಸ್ವತಂತ್ರ ಕ್ಷೇತ್ರವಾಯಿತು. ಈವರೆಗೆ ನಡೆದ ಒಟ್ಟು 15 ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್‌ 10 ಬಾರಿ ಗೆದ್ದರೆ, ಜನತಾದಳ ಮತ್ತು ಲೋಕಶಕ್ತಿ ಪಕ್ಷ ತಲಾ ಒಂದು ಬಾರಿ ಗೆಲುವು ಕಂಡಿದೆ.

2004ರಿಂದ ಈವರೆಗೆ ಒಟ್ಟು ಮೂರು ಬಾರಿ ಬಿಜೆಪಿ ಗೆದ್ದಿದೆ. ಬಾಗಲಕೋಟೆ ಜಿಲ್ಲೆಯ ಏಳು ಮತ್ತು ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಒಳಗೊಂಡು ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಕಳೆದ 3 ಚುನಾವಣೆಗಳಲ್ಲಿ ಅಭ್ಯರ್ಥಿಗಳು ಕ್ಷೇತ್ರದ ಮತದಾರರಿಗೆ ಹಲವು ಭರವಸೆಗಳನ್ನು ನೀಡಿ ಮತ ಪಡೆದಿದ್ದಾರೆ. ರೈಲ್ವೇ ಸೇವೆ, ವಿಮಾನ ನಿಲ್ದಾಣ ನಿರ್ಮಾಣದಂಥ ಹಲವು ಭರವಸೆಗಳು ಇಂದಿಗೂ ಈಡೇರಿಲ್ಲ. 107 ವರ್ಷಗಳಷ್ಟು ಹಳೆಯ ಬೇಡಿಕೆಯಾಗಿರುವ ಬಾಗಲ ಕೋಟೆ-ಕುಡಚಿ ರೇಲ್ವೇ ಮಾರ್ಗ ಈವರೆಗೂ ಪೂರ್ಣಗೊಂಡಿಲ್ಲ. ಆದರೆ ಚುನಾವಣ ಸಂದರ್ಭದಲ್ಲಿ ಮತದಾರ ರಿಗೆ ಅಂಗೈಯಲ್ಲಿ ಆಕಾಶ ತೋರಿಸುವ ಭರವಸೆಗಳು ದೊರೆಯುತ್ತಲೇ ಇರುತ್ತವೆ. ಕಾಂಗ್ರೆಸ್‌ ಚುನಾವಣ ಅಸ್ತ್ರ ಬಾದಾಮಿ, ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲು, ಐಹೊಳೆ, ಮುಧೋಳ, ಮಹಾ ಕೂಟ, ಕೂಡಲಸಂಗಮದಂಥ ಐತಿಹಾಸಿಕ, ಧಾರ್ಮಿಕ ಸ್ಥಳಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗಿ ಗಳಿಗೆ ಅವಕಾಶ ಕಲ್ಪಿಸಬಹುದು. ಆದರೆ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ್‌ ಅವರು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಜನರಲ್ಲಿದೆ. ಇದನ್ನು ಕಾಂಗ್ರೆಸ್‌ ನಾಯಕರು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಜತೆಗೆ ಮೈತ್ರಿ ಸರಕಾರ ಮತ್ತು ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌.

ಬಿಜೆಪಿ ಚುನಾವಣ ಅಸ್ತ್ರ ಮೈತ್ರಿ ಸರಕಾರದಿಂದ ಜಿಲ್ಲೆ ಸಹಿತ ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪ, ರಾಜ್ಯದಲ್ಲಿ 5-6 ವರ್ಷಗಳಿಂದ ಕಾಂಗ್ರೆಸ್‌ ಸರಕಾರವಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಲಕ್ಷ್ಯ ವಹಿಸದಿರುವುದು ಬಿಜೆಪಿ ನಾಯಕರ ಚುನಾವಣ ಪ್ರಚಾರಕ್ಕೆ ಪ್ರಮುಖ ವಿಷಯಗಳಾಗಿವೆ. ಜತೆಗೆ ಮೋದಿ ಸರಕಾರದ ಅಭಿವೃದ್ಧಿಪರ ನಿಲುವು ಪ್ಲಸ್‌ ಪಾಯಿಂಟ್‌. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲೂ, ಒಂದೊಂದು ಜಾತಿಯ ಮತದಾರರು ನಿರ್ಣಾ ಯಕರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಅಲೆ, ಪಕ್ಷದ ವರ್ಚಸ್ಸು ಮತ್ತು ಅಭ್ಯರ್ಥಿಯ ಸ್ವಜಾತಿ ಬಲವೂ ಗೆಲುವಿಗೆ ಕಾರಣವಾಗ ಲಿದೆ. ಈವರೆಗಿನ ಚುನಾವಣೆಗಳ ಅವಲೋಕನ ಮಾಡಿದರೆ, ಕ್ಷೇತ್ರದ ಅಭಿವೃದ್ಧಿಗಿಂತ ರಾಷ್ಟ್ರೀಯ ಮತ್ತು ಜಾತಿ ಆಧಾರದ ಮೇಲೆ ಫ‌ಲಿತಾಂಶ ಹೆಚ್ಚು ಅವಲಂಬಿತವಾಗಿರುವುದು ಗೋಚರಿಸುತ್ತದೆ. ಕ್ಷೇತ್ರದ ವಿಶೇಷತೆ 1951ರಿಂದ 1962ರ ವರೆಗೆ ವಿಜಯಪುರ ದಕ್ಷಿಣ ಲೋಕಸಭಾ ಕ್ಷೇತ್ರವಾಗಿದ್ದ ಬಾಗಲಕೋಟೆ, 1967ರ ಚುನಾವಣೆಯಿಂದ ಸ್ವತಂತ್ರ ಕ್ಷೇತ್ರವಾಗಿ ರೂಪುಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ 15 ಚುನಾವಣೆಗಳು ನಡೆದಿವೆ. 1980ರಲ್ಲಿ ವೀರೇಂದ್ರ ಪಾಟೀಲ್‌ ಇಲ್ಲಿಂದ ಗೆದ್ದು, ರಾಜಕೀಯ ಪುನರ್ಜನ್ಮ ಪಡೆದಿದ್ದರು. 1991ರಲ್ಲಿ ಮತ್ತೂಬ್ಬ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ ಅಪಕೀರ್ತಿಯೂ ಈ ಕ್ಷೇತ್ರಕ್ಕಿದೆ. 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.