ಸಾಂಪ್ಲಾಗೆ ಟಿಕೆಟ್‌ ಇಲ್ಲ ; ಬಿಜೆಪಿ ಗೋಹತ್ಯೆ ಮಾಡಿತು ಎಂದ ಕೇಂದ್ರ ಸಚಿವ!

Team Udayavani, Apr 24, 2019, 8:54 AM IST

ಹೋಶಿಯಾರ್‌ಪುರ್‌ : ಕೇಂದ್ರ ಸಚಿವ ವಿಜಯ್‌ ಸಾಂಪ್ಲಾ ಅವರಿಗೆ ಬಿಜೆಪಿ ಹೋಶಿಯಾರ್‌ ಪುರ್‌ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟನ್ನು ನೀಡದೆ ಬೇರೆ ಅಭ್ಯರ್ಥಿಗೆ ನೀಡಿದೆ. ಈ ಕ್ರಮದ ಕುರಿತು ತೀವ್ರ ಅಸಮಾಧಾನ ಹೊರ ಹಾಕಿರುವ ವಿಜಯ್‌ ಸಾಂಪ್ಲಾ ಪಕ್ಷ ಗೋಹತ್ಯೆ ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಹೋಶಿಯಾರ್‌ ಪುರ್‌ಗೆ ಹಾಲಿ ಶಾಸಕ, ಮಾಜಿ ನಾಗರಿಕ ಸೇವೆ ಅಧಿಕಾರಿ ಸೋಮ್‌ ಪ್ರಕಾಶ್‌ ಅವರಿಗೆ ಟಿಕೆಟ್‌ ನೀಡಿದೆ.

2014 ರ ಚುನಾವಣೆಯಲ್ಲಿ ಸಾಂಪ್ಲಾ ಅವರು ಹೋಶಿಯಾರ್‌ಪುರದಿಂದ 13,500 ಮತಗಳ ಅಂತರದಿಂದ ಜಯಗಳಿಸಿದ್ದರು.

ನಾನೇನು ತಪ್ಪು ಮಾಡಿದ್ದೇನೆ? ನನ್ನ ತಪ್ಪು ಏನೆಂದು ಯಾರಾದರು ಹೇಳಲಿ , ನನ್ನ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ. ಯಾರೂ ನನ್ನ ಮೇಲೆ ಬೆರಳು ತೋರಿಸಿಲ್ಲ. ನಾನು ನನ್ನ ಕ್ಷೇತ್ರಕ್ಕೆ ವಿಮಾನ ನಿಲ್ದಾಣ, ರೈಲು ನಿಲ್ದಾಣ , ರಸ್ತೆಗಳನ್ನು ಮಾಡಿಸಿದ್ದೇ ತಪ್ಪೇ? , ನನ್ನ ಮುಂದಿನ ಪೀಳಿಗೆಗೆ ಹೀಗಾಗಬಾರದು ಎಂದು ಸಾಂಪ್ಲಾ ಟ್ವೀಟ್‌ ಮಾಡಿದ್ದಾರೆ.

ಸಾಂಪ್ಲಾ ಅವರು 2016 ರಿಂದ 18 ರ ವರೆಗೆ ಪಂಜಾಬ್‌ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಶಿರೋಮಣಿ ಆಕಾಲಿದಳದೊಂದಿಗಿನ ಬಿಜೆಪಿ ಮೈತ್ರಿಕೂಟ 2017 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಸಾಂಪ್ಲಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

  • ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸುದ್ದಿವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿವೆ. 13 ಸಮೀಕ್ಷೆಗಳ ಪೈಕಿ ಆರರಲ್ಲಿ...

  • ಲೋಕಸಭೆ ಚುನಾವಣೆಯ ಜೊತೆಗೆ ಈ ಬಾರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ...

  • ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಹಿಂಸಾಚಾರ, ಘರ್ಷಣೆ, ವಾಕ್ಸಮರಗಳನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ದೀದಿಯ ಭದ್ರಕೋಟೆಯನ್ನು ಒಡೆಯುವಲ್ಲಿ ಪ್ರಧಾನಿ...

  • ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ನಿರೀಕ್ಷೆಯಂತೆಯೇ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಊಹಿಸಿವೆ....

  • ಮತಗಟ್ಟೆಗೆ ಮುಸುಕು (ಪರ್ದಾ) ಹಾಕಿಕೊಂಡು ಬರುವ ಮಹಿಳೆಯರು, ಮುಸುಕು ತೆಗೆದು ಮತದಾನ ಮಾಡಬೇಕು ಎಂದು ಕೇರಳದ ಸಿಪಿಎಂ ನಾಯಕ ಎಂ.ವಿ. ಜಯರಾಜನ್‌ ನೀಡಿರುವ ಹೇಳಿಕೆಯೊಂದು...

ಹೊಸ ಸೇರ್ಪಡೆ