ಪರೇಶ್ ರಾವಲ್ ಬದಲಿಗೆ ಎಚ್.ಎಸ್.ಪಟೇಲ್ಗೆ ಟಿಕೆಟ್ ನೀಡಿದ ಬಿಜೆಪಿ
Team Udayavani, Apr 4, 2019, 12:21 PM IST
ಅಹಮದಾಬಾದ್ : ಹಾಲಿ ಸಂಸದ, ಖ್ಯಾತ ನಟ ಪರೇಶ್ ರಾವಲ್ ಅವರು ಪ್ರತಿನಿಧಿಸುವ ಅಹಮದಾಬಾದ್ ಪೂರ್ವ ಕ್ಷೇತ್ರದಲ್ಲಿ ಎಚ್.ಎಸ್.ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
2014 ರಲ್ಲಿ ಪರೇಶ್ ರಾವಲ್ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅಭ್ಯರ್ಥಿಯಾಗಿರುವ ಪಟೇಲ್ ಅವರು 2012 ಮತ್ತು 2017 ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಪಟೇಲ್ ಸಮುದಾಯದ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಎಚ್.ಎಸ್.ಪಟೇಲ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಾಗಿದೆ.