ದೆಹಲಿಯಲ್ಲಿ ಮತ್ತೆ ಬಿಜೆಪಿಗೇ ಬಂಪರ್‌?


Team Udayavani, Mar 8, 2019, 12:30 AM IST

q-36.jpg

ಬಹು ಪ್ರಯತ್ನ- ನಿರೀಕ್ಷೆಗಳಿಗೆ ತದ್ವಿರುದ್ಧವಾಗಿ ಆಪ್‌ ಮತ್ತು ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಕಾಂಗ್ರೆಸ್‌ ಮತ್ತು ಆಪ್‌ ಈಗ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿವೆ. ಅದರಲ್ಲೂ ಆಪ್‌, ಕಾಂಗ್ರೆಸ್‌ ಅನ್ನು ಬಿಜೆಪಿಯ ಬಿ ಟೀಂ ಎಂದೂ ದೂರಲಾರಂಭಿಸಿದೆ.  ಹೀಗೆ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಈ ಪಕ್ಷಗಳಿಗೆ ಲಾಭವಿದೆಯೇ? ರಾಜಕೀಯ ವಿಶ್ಲೇಷಕರ ಪ್ರಕಾರ ಈ ನಡೆಯಿಂದ ಎರಡೂ ಪಕ್ಷಗಳಿಗೂ ಹಾನಿಯಾಗಲಿದೆ. ಬಿಜೆಪಿ ವಿರೋಧಿ ಮತಗಳು ಹರಿದುಹಂಚಿಹೋಗಲಿವೆ ಎಂದು ಖುದ್ದು ಆಪ್‌ ಕೂಡ ಒಪ್ಪಿಕೊಳ್ಳುತ್ತಿದೆ. 

2015ರ ವಿಧಾನಸಭಾ ಚುನಾವಣೆಗಳ ಫ‌ಲಿತಾಂಶವನ್ನು ನೋಡಿದರೆ, ಕಾಂಗ್ರೆಸ್‌ ದೆಹಲಿಯಿಂದ ಪೂರ್ಣ ಕಾಲುಕಿತ್ತಿತು ಎಂಬ ಭಾವನೆ ಹುಟ್ಟಿಕೊಂಡಿತ್ತಾದರೂ, 2017ರ ಮುನ್ಸಿಪಲ್‌ ಕಾರ್ಪೊರೇಷನ್‌ ಆಫ್ ದೆಹಲಿ(ಎಂಸಿಡಿ)ಯ ಫ‌ಲಿತಾಂಶ ಬದಲಾದ ಪರಿಸ್ಥಿತಿಗೆ ಕನ್ನಡಿಯಾಗಿ ನಿಲ್ಲುತ್ತದೆ. ಆ ಚುನಾವಣೆಯಲ್ಲಿ ಒಟ್ಟು ಮತ ಹಂಚಿಕೆಯಲ್ಲಿ ಕಾಂಗ್ರೆಸ್‌ 21.1 ಪ್ರತಿಶತ ಮತಗಳನ್ನು ತನ್ನದಾಗಿಸಿಕೊಂಡರೆ, ಆಪ್‌ ಕಾಂಗ್ರೆಸ್‌ಗಿಂತ ಕೇವಲ 5 ಪ್ರತಿಶತ ಹೆಚ್ಚು ಮತಗಳನ್ನು ಪಡೆದಿತ್ತು. ಇಲ್ಲಿಯೂ ಕೂಡ ಎರಡೂ ಪಕ್ಷಗಳ ಒಟ್ಟಾರೆ ಮತಹಂಚಿಕೆ ಪ್ರಮಾಣವೂ ಬಿಜೆಪಿಗಿಂತಲೂ ಎಷ್ಟೋ ಪಾಲು ಅಧಿಕವಿತ್ತು. ಅಂದು ಬಿಜೆಪಿ ವಿರೋಧಿ ಮತಗಳು ಎರಡೂ ಪಕ್ಷಗಳ ನಡುವೆ ಹಂಚಿಹೋದ ಕಾರಣದಿಂದಾಗಿ ಬಿಜೆಪಿಗೆ ಮೇಲುಗೈ ಸಿಗುವಂತಾಯಿತು. 

ಈ ಕಾರಣಕ್ಕಾಗಿಯೇ ಬಹುತೇಕ ರಾಜಕೀಯ ಪಂಡಿತರು, “ಆಪ್‌ ಮತ್ತು ಕಾಂಗ್ರೆಸ್‌ ಒಟ್ಟಿಗೇ ಚುನಾವಣೆಯನ್ನು ಎದುರಿಸ ಲಿವೆ’ ಎಂದು ಭವಿಷ್ಯ ಊಹಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಆಪ್‌ ವಿರುದ್ಧದ ಕಾಂಗ್ರೆಸ್‌ನ ಸಿಟ್ಟು ಇನ್ನೂ ಕಡಿಮೆಯಾಗಿ ಲ್ಲವೆನಿಸುತ್ತದೆ. ಏಕೆಂದರೆ, ದೆಹಲಿಯಲ್ಲಿ ಕಾಂಗ್ರೆಸ್‌ನ ಅಸ್ತಿತ್ವಕ್ಕೆ ಬಹುದೊಡ್ಡ  ಕುತ್ತು ತಂದದ್ದೇ ಆಮ್‌ ಆದ್ಮಿ ಪಕ್ಷ. ಆದಾಗ್ಯೂ 2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ದೆಹಲಿಯ ಎಲ್ಲಾ 7 ಸ್ಥಾನಗಳನ್ನು ಗೆದ್ದಿತ್ತಾದರೂ, ವೋಟ್‌ ಷೇರ್‌ ವಿಷಯದಲ್ಲಿ ಬಿಜೆಪಿಯ ಪ್ರದರ್ಶನ 1996, 1998 ಮತ್ತು 1999ರಲ್ಲಿಯೇ ಉತ್ತಮವಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್‌ ಮತ ಪಾಲಿನಲ್ಲಿ ಅತಿ ಕಳಪೆ ಪ್ರದರ್ಶನ ನೀಡಿದ್ದು 2014ರಲ್ಲೇ. ಇನ್ನು ಎಲ್ಲಕ್ಕಿಂತಲೂ ಮುಖ್ಯವಾಗಿ, ದೆಹಲಿ ಕಾಂಗ್ರೆಸ್‌ನ ಮುಂಚೂಣಿ ಚಹರೆಯಾಗಿರುವ ಶೀಲಾ ದೀಕ್ಷಿತ್‌ರ ವಿರುದ್ಧ ಕೇಜ್ರಿವಾಲ್‌ ವರ್ಷಗಳಿಂದ ನಿರಂತರ ದಾಳಿ ಮಾಡುತ್ತಲೇ ಬಂದರು. ತಾವು ಅಧಿಕಾರಕ್ಕೆ ಬಂದದ್ದೇ ಶೀಲಾರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ವೈಯಕ್ತಿಕವಾಗಿ ಶೀಲಾ ದೀಕ್ಷಿತ್‌ರಿಗೆ ಆಪ್‌ನ ಮೇಲೆ ಬಹಳ ಮುನಿಸಿದೆ ಎನ್ನುತ್ತಾರೆ ದೆಹಲಿ ಕಾಂಗ್ರೆಸ್ಸಿಗರು. 

ಕಾಂಗ್ರೆಸ್‌ ಮತ್ತು ಆಪ್‌ನ ಕಚ್ಚಾಟದಿಂದ ನಿಸ್ಸಂಶಯವಾಗಿಯೂ ಬಿಜೆಪಿಗೆ ಲಾಭವಾಗಲಿದೆ. ಈ ಬಾರಿಯೂ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿಗೇ ಬಂಪರ್‌ ಸಿಗಬಹುದು. ದೆಹಲಿಯಲ್ಲಿ ಆಡಳಿತ ವಿರೋಧಿ ಅಲೆಯೂ ಆಪ್‌ ವಿರುದ್ಧ ಕೆಲಸ ಮಾಡುವ ಸಂಭವವಿದೆ. ಇದೇ ಕಾರಣಕ್ಕಾಗಿಯೇ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದ ಆಪ್‌ಗೆ ತೀವ್ರ ಅಸಮಾಧಾನವಾಗಿದೆ. ಈ ಅಸಮಾಧಾನ ಕೇಜ್ರಿವಾಲರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.  “”ಇಡೀ ದೇಶವೇ ಮೋದಿ-ಶಾ ಜೋಡಿಯನ್ನು ಸೋಲಿಸಲು ಬಯಸಿರು ವಾಗ, ಕಾಂಗ್ರೆಸ್‌ ಮಾತ್ರ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಿ ಬಿಜೆಪಿಗೆ ಸಹಾಯ ಮಾಡುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಒಳಗೊಳಗೇ ಒಪ್ಪಂದ ಮಾಡಿಕೊಂಡಿವೆ. ದೆಹಲಿಗರು ಕಾಂಗ್ರೆಸ್‌ ಮತ್ತು ಬಿಜೆಪಿಯ ಈ ಅಪವಿತ್ರ ಮೈತ್ರಿಯ ವಿರುದ್ಧ ಹೋರಾಡಲು ಸಿದ್ಧರಿದ್ದಾರೆ” ಎಂಬ ಕೇಜ್ರಿವಾಲರ ಮಾತುಗಳನ್ನು ನೋಡಬೇಕಿರುವುದು ಈ ಹಿನ್ನೆಲೆಯಲ್ಲಿಯೇ.   

ಈ ಬಾರಿ
ಪ್ರಿಯಾಂಕಾ ವಾದ್ರಾ
ಉತ್ತರಪ್ರದೇಶದ ಕಾಂಗ್ರೆಸ್‌ ಘಟಕಕ್ಕೆ ಪ್ರಿಯಾಂಕಾ ವಾದ್ರಾ ಸಕ್ರಿಯ ರಾಜಕೀಯ ನವಚೈತನ್ಯ ಕೊಟ್ಟಿದೆ. ಆದಾಗ್ಯೂ ಉತ್ತರ ಪ್ರದೇಶದ ಪೂರ್ವ ಭಾಗದ ಚುನಾವಣಾ ನೇತೃತ್ವ ವಹಿಸಿ ಕೊಂಡಿದ್ದರೂ ಲೋಕಸಭಾ ಸಮರಕ್ಕಿಂತಲೂ ಉತ್ತರಪ್ರದೇಶದ ವಿಧಾನಸಭೆಯ ಮೇಲೆಯೇ ಪ್ರಿಯಾಂಕಾ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗುತ್ತದೆ.  2022ರ ಚುನಾವಣೆಯಲ್ಲಿ ಪ್ರಿಯಾಂಕಾ ಸಿಎಂ ಅಭ್ಯರ್ಥಿಯಾಗಬಹುದು ಎನ್ನುತ್ತಾರೆ ಯುಪಿ ಕಾಂಗ್ರೆಸ್ಸಿಗರು.

ಇಂದಿನ ಕೋಟ್‌
ರಫೇಲ್‌  ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕಳ್ಳತನವಾಗಿವೆ! ಸತ್ಯಾನಾಶ! ಸರ್ಕಾರ ಯಾವ ಚೌಕೀದಾರಿ ಮಾಡುತ್ತಿದೆ? 
ಮಾಯಾವತಿ

ಹಿಂದೂ ಧರ್ಮವನ್ನು ಅವಹೇಳನ ಮಾಡಿ ಅಲ್ಪಸಂಖ್ಯಾತರ ಮತಗಳಿಸುವ ರಾಹುಲ್‌ ಮತ್ತು ಕಾಂಗ್ರೆಸ್‌ನ ತಂತ್ರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭ ದಲ್ಲಿ ಲಿಂಗಾಯತರನ್ನು ಒಡೆಯಲು ಪ್ರಯತ್ನಿಸಿದ್ದ ಸಿದ್ದರಾಮಯ್ಯರಿಗೆ ಜನ ತಕ್ಕ ಪಾಠ ಕಲಿಸಿದ್ದರು. ಆದರೆ ಅವರು ಇನ್ನೂ ಪಾಠ ಕಲಿತಿಲ್ಲ ಎನ್ನಿಸುತ್ತಿದೆ.
ರಾಜೀವ್‌ ಚಂದ್ರಶೇಖರ್‌

350 ಕೆಜಿ ಆರ್‌ಡಿಎಕ್ಸ್ ಪುಲ್ವಾಮಾ ಪ್ರದೇಶಕ್ಕೆ ಹೇಗೆ ಬಂತು? ಇದು ಪ್ರಧಾನಿ ಮೋದಿಗೆ ಗೊತ್ತಿಲ್ಲವೇ? ಪುಲ್ವಾಮ ದಾಳಿ ನರೇಂದ್ರ ಮೋದಿ ಮತ್ತು  ಇಮ್ರಾನ್‌ ಖಾನ್‌ ನಡುವಿನ ಮ್ಯಾಚ್‌ ಫಿಕ್ಸಿಂಗ್‌.  
ಬಿ.ಕೆ. ಹರಿಪ್ರಸಾದ್‌ 

ಪುಲ್ವಾಮಾ ಉಗ್ರ ದಾಳಿಯನ್ನು “ಮ್ಯಾಚ್‌ ಫಿಕ್ಸಿಂಗ್‌’ ಎಂದು ಕರೆದು ರಾಹುಲ್‌ರ ಕಾಂಗ್ರೆಸ್‌ ಪಕ್ಷ ಪಾಕಿಸ್ತಾನಿ ಉಗ್ರರಿಗೆ ಮತ್ತೂಮ್ಮೆ ಕ್ಲೀನ್‌ ಚಿಟ್‌ ಕೊಟ್ಟಂತಾಗಲಿಲ್ಲವೇ? ಪ್ರತಿ ಬಾರಿಯೂ, ಕಾಂಗ್ರೆಸ್‌ ಕಾ ಹಾಥ್‌ ಪಾಕಿಸ್ತಾನ್‌ ಕೆ ಸಾಥ್‌!
ಶೆಹಜಾದ್‌ ಪೂನಾವಾಲಾ

6000 ಶತಾಯುಷಿಗಳು
ಹರ್ಯಾಣಾ ರಾಜ್ಯದಲ್ಲಿ ಶತಾಯುಷಿ ಮತದಾರರ ಸಂಖ್ಯೆ 6000ಕ್ಕೂ ಅಧಿಕವಿದೆ.

ಟಾಪ್ ನ್ಯೂಸ್

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ? ಹೊಸ ನಿಯಮ ಸಾಧ್ಯತೆ

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ? ಹೊಸ ನಿಯಮ ಸಾಧ್ಯತೆ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.