ಕಾಂಗ್ರೆಸ್‌ “ಮೀಸಲು’ ಕ್ಷೇತ್ರದಲ್ಲಿ ಬಿಜೆಪಿ ರಣತಂತ್ರ


Team Udayavani, Mar 29, 2019, 7:48 AM IST

1-ttt

ರಾಯಚೂರು: ಕೇಂದ್ರದಲ್ಲಿ ಯಾವುದೇ ಪಕ್ಷ ಅ ಧಿಕಾರಕ್ಕೆ ಬರಲಿ, ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ನದ್ದೇ ರಾಜ್ಯಭಾರ. 16 ಚುನಾವಣೆಗಳಲ್ಲಿ ಇಲ್ಲಿ
13 ಬಾರಿ ಕಾಂಗ್ರೆಸ್‌ ಗೆದ್ದು ಬೀಗಿರುವುದು ಇತಿಹಾಸ.

ಕಳೆದ ಬಾರಿ ಇಡೀ ದೇಶವೇ ಮೋದಿ ಅಲೆಯಲ್ಲಿದ್ದಾಗಲೂ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದರು. ಈ ಬಾರಿ ಬ್ರೇಕ್‌ ಬೀಳುವುದೇ ಎಂಬ ಕುತೂಹಲ ಮನೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಮಾವ-ಅಳಿಯನ ನಡುವೆ ನಡೆದ ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್‌ 1,499 ಮತಗಳ ಅಂತರದಿಂದ ಗೆಲುವು ದಾಖಲಿಸಿತ್ತು. ಈ ಬಾರಿಯೂ ಹಾಲಿ ಸಂಸದ ಬಿ.ವಿ.ನಾಯಕ ಕಣದಲ್ಲಿದ್ದು, ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಈಗ ಜೆಡಿಎಸ್‌
ಕೂಡ ಕಾಂಗ್ರೆಸ್‌ ಜತೆ ಕೈ ಜೋಡಿಸಿದ ಪರಿಣಾಮ ಎದುರಾಳಿ ಬಿಜೆಪಿಗೆ ಸಾಕಷ್ಟು ಸವಾಲು ಎದುರಾಗಿದೆ.

ಕ್ಷೇತ್ರಕ್ಕೆ ಈವರೆಗೆ ನಡೆದ 16 ಚುನಾವಣೆಗಳಲ್ಲಿ 13 ಬಾರಿ ಕಾಂಗ್ರೆಸ್‌ ಗೆಲುವು ದಾಖಲಿಸಿದೆ. ಪಕ್ಷೇತರ ಅಭ್ಯರ್ಥಿ, ಜನತಾದಳ, ಬಿಜೆಪಿ ಒಂದೊಂದು ಬಾರಿ ಮಾತ್ರ ಗೆದ್ದಿವೆ.  1952ರಿಂದಲೂ ಕಾಂಗ್ರೆಸ್‌ ಇಲ್ಲಿ ತನ್ನ ಹಿಡಿತ ಬಿಟ್ಟುಕೊಟ್ಟಿಲ್ಲ. ಈಗ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿಯ ಮೂರು ಸೇರಿ
ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳು ಒಳಗೊಂಡಿವೆ.

ಬಿಜೆಪಿಗೆ ಮೋದಿ ಅಲೆ ಆಸರೆ: ಕಾಂಗ್ರೆಸ್‌ ಅಭ್ಯರ್ಥಿ ಈಗಾಗಲೇ ಭರದ ಪ್ರಚಾರ ನಡೆಸಿದ್ದಾರೆ. ಆದರೆ, ಸೂಕ್ತ ಎದುರಾಳಿಯನ್ನು ಶೋಧಿಸುವಲ್ಲಿ ಬಿಜೆಪಿ ಕಾಲಹರಣ
ಮಾಡಿದ್ದು, ನಾಮಪತ್ರ ಸಲ್ಲಿಕೆ ಶುರುವಾದರೂ ಘೋಷಣೆ ಮಾಡಿಲ್ಲ. ರಾಯಚೂರು ಕ್ಷೇತ್ರದ ವಿಚಾರಕ್ಕೆ ಬಂದರೆ ಕೇವಲ ಮೋದಿ ಅಲೆಯೊಂದೇ ಗೆಲುವಿನ ಮಾನದಂಡವಲ್ಲ ಎನ್ನುವ ಸತ್ಯ ಕಳೆದ ಚುನಾವಣೆ ಯಲ್ಲಿಯೇ ಸಾಬೀತಾಗಿದೆ. ಮಾಜಿ ಸಚಿವ ರಾಜಾ
ಅಮ ರೇಶ್ವರ ನಾಯಕ್‌, ಮಾಜಿ ಶಾಸಕ ತಿಪ್ಪರಾಜ ನಡುವೆ ಪೈಪೋಟಿ ಏರ್ಪಟ್ಟಿದೆ. ಇವರಲ್ಲಿ ಯಾರು ಪ್ರಬಲ ಪೈಪೋಟಿ ನೀಡಬಲ್ಲರು ಎಂಬ ಚಿಂತನೆಯಲ್ಲಿ ರುವ
ವರಿಷ್ಠರು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಲಿಂಗಾಯತರು ನಿರ್ಣಾಯಕ
ರಾಯಚೂರಿನ 5, ಯಾದಗಿರಿ ಜಿಲ್ಲೆಯ 3 ವಿಧಾನಸಭೆ ಕ್ಷೇತ್ರ ಒಳಗೊಂಡಿದೆ. ಎಂಟರಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರರಲ್ಲಿ ಕಾಂಗ್ರೆಸ್‌ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಪ.ಪಂ.ಕ್ಕೆ ಮೀಸಲಾಗಿರುವ ಕಾರಣ
ಪ್ರಭಾವಿಯಾದ ನಾಯಕ ಸಮಾಜದ ಮತಗಳು ವಿಭಜನೆಗೊಳ್ಳುವ ಸಾಧ್ಯತೆ ಇದೆ. ಅಲ್ಪಸಂಖ್ಯಾತ ಮತ ಸೆಳೆಯುವಲ್ಲಿ ಕೈ ಸಫಲವಾದರೆ, ಲಿಂಗಾಯತ, ಕುರುಬ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇನ್ನು ಪರಿಶಿಷ್ಟ ಪಂಗಡ ಕ್ಷೇತ್ರಗಳಿಂದ ಗೆಲುವು ಸಾಧಿ ಸಿದ ದೇವದುರ್ಗ ಶಾಸಕ ಶಿವನಗೌಡ, ಸುರಪುರ ಶಾಸಕ ರಾಜುಗೌಡ ಪಕ್ಷದ ಗೆಲುವಿಗೆ ಹೆಚ್ಚು ಒತ್ತು ನೀಡಿದರೆ, ಲಿಂಗಾಯತ ಸಮಾಜದ ರಾಯಚೂರು ನಗರ ಕ್ಷೇತ್ರದ ಡಾ| ಶಿವರಾಜ ಪಾಟೀಲ, ಯಾದಗಿರಿ ಕ್ಷೇತ್ರದ ವೆಂಕಟರೆಡ್ಡಿ ಮುದ್ನಾಳ, ಈಚೆಗೆ
ಪಕ್ಷ ಸೇರಿದ ಮಾಲಕರೆಡ್ಡಿ ಬಿಜೆಪಿ ಗೆಲುವಿಗೆ ಹೆಚ್ಚು ಶ್ರಮಿಸಬೇಕಿದೆ.

ತಂದೆಯ ಹಾದಿಯಲ್ಲಿ ಮಗ?
ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಅವರ ತಂದೆ ವೆಂಕಟೇಶ ನಾಯಕ ಅವರು ಇದೇ ಕ್ಷೇತ್ರದಿಂದ ಸತತ 4 ಬಾರಿ ಕಾಂಗ್ರೆಸ್‌ ನಿಂದ ಗೆಲುವು ದಾಖಲಿಸಿದ್ದರು. 2009ರಲ್ಲಿ ಬಿಜೆಪಿಯ ಸಣ್ಣ ಫಕ್ಕೀರಪ್ಪ ವಿರುದಟಛಿ ಸೋಲು ಅನುಭವಿಸುವ ಮೂಲಕ ಕಾಂಗ್ರೆಸ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಬಿದ್ದಿತ್ತು. ಅದಾದ ಬಳಿಕ ಕಳೆದ 2014ರ ಚುನಾವಣೆಯಲ್ಲಿ ಅವರ ಮಗ ಬಿ.ವಿ.ನಾಯಕ ಸ್ಪರ್ಧಿಸಿದರೆ, ಬಿಜೆಪಿಯಿಂದ ಅವರ ಅಳಿಯ ಬಿಜೆಪಿಯ ಕೆ.ಶಿವನಗೌಡ ನಾಯಕ ಸ್ಪಧಿ ì ಸಿದ್ದರು. ಮೋದಿ ಅಲೆ ಮೆಟ್ಟಿ ನಿಂತ ಬಿ.ವಿ.ನಾಯಕ ಕಡಿಮೆ ಅಂತರದ ಗೆಲುವು ದಾಖಲಿಸಿದ್ದರು. ಈಗ 2ನೇ ಬಾರಿ ಪುನಃ ಕಣಕ್ಕಿಳಿಯು ತ್ತಿರುವ ಬಿ.ವಿ.ನಾಯಕ ತಂದೆಯಂತೆ ಸರಣಿ ಗೆಲುವು ಮುಂದುವರಿಸುವರೋ ಎಂಬ ಕುತೂಹಲ ಮೂಡಿದೆ.

ಸಿದ್ದಯ್ಯ ಸ್ವಾಮಿ ಕುಕನೂರು

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.