ಸೇನಾ ಕುಟುಂಬಕ್ಕೆ  ಚೆನ್ನೈ ಆರ್ಥಿಕ ನೆರವು

Team Udayavani, Mar 22, 2019, 2:44 AM IST

ಚೆನ್ನೈ: ಹನ್ನೆರಡನೇ ಐಪಿಎಲ್‌ ಕೂಟದ ಆರಂಭಿಕ ಪಂದ್ಯದ ಟಿಕೆಟ್‌ ಮೊತ್ತವನ್ನು ಪುಲ್ವಾಮಾ ದುರಂತದಲ್ಲಿ ಮಡಿದ ಯೋಧರ ಕುಟುಂಬಕ್ಕೆ ನೀಡಲು ಚೆನ್ನೈ ಸೂಪರ್‌ ಕಿಂಗ್ಸ್‌ ನಿರ್ಧರಿಸಿದೆ. ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಇದರ ಚೆಕ್‌ ಹಸ್ತಾಂತರಿಸಲಿದ್ದಾರೆ ಎಂದು ತಂಡದ ಪ್ರಕಟನೆ ತಿಳಿಸಿದೆ.

ಶನಿವಾರ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ 12ನೇ ಐಪಿಎಲ್‌ ಕೂಟ ಆರಂಭವಾಗಲಿದ್ದು, ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಮುಖಾಮುಖೀಯಾಗಲಿವೆ. ಪಂದ್ಯದ ಟಿಕೆಟ್‌ ಮೊದಲ ದಿನವೇ “ಸೋಲ್ಡ್‌ ಔಟ್‌’ ಆಗಿದೆ.

“ಈ ಬಾರಿಯ ಉದ್ಘಾಟನಾ ಪಂದ್ಯವೆಂದರೆ ಅದು ಚೆನ್ನೈ ಪಾಲಿನ ಮೊದಲ ತವರು ಪಂದ್ಯವೂ ಆಗಿದೆ. ಹೀಗಾಗಿ ಇದರ ಟಿಕೆಟ್‌ ಮೊತ್ತದ ಗಳಿಕೆಯನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ. ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಆಗಿರುವ, ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ ಈ ಚೆಕ್‌ ಹಸ್ತಾಂತರಿಸಲಿದ್ದಾರೆ’ ಎಂಬುದಾಗಿ ಚೆನ್ನೈ ತಂಡದ ನಿರ್ದೇಶಕ ರಾಕೇಶ್‌ ಸಿಂಗ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅದ್ದೂರಿ ಆರಂಭ ಇಲ್ಲ ಪುಲ್ವಾಮಾ ಘಟನೆಯಿಂದಾಗಿ ಈ ಬಾರಿಯ ಐಪಿಎಲ್‌ ಅದ್ದೂರಿಯ ಆರಂಭ ಕಾಣದು. ಇದಕ್ಕೆ ತಗಲುವ ಮೊತ್ತವನ್ನು ಬಿಸಿಸಿಐ ಹುತಾತ್ಮರ ನಿಧಿಗೆ ಅರ್ಪಿಸಲಿದೆ.

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಭಾರತದ ಕ್ರಿಕೆಟಿಗರು ಮಿಲಿಟರಿ ಕ್ಯಾಪ್‌ ಧರಿಸಿ ಆಡಲಿಳಿದಿದ್ದನ್ನು ಸ್ಮರಿಸಬಹುದು. ಜತೆಗೆ ಪಂದ್ಯದ ಸಂಭಾವನೆಯನ್ನು “ರಾಷ್ಟ್ರೀಯ ರಕ್ಷಣಾ ನಿಧಿ’ಗೆ ಸಲ್ಲಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ