ಕರಾವಳಿ ಜಿಲ್ಲೆ ಶ್ಲಾಘನೀಯ ಪ್ರಚಾರ ಪರಂಪರೆ


Team Udayavani, Apr 11, 2019, 6:00 AM IST

0904mlr6

ಮಂಗಳೂರಿನಲ್ಲಿ ಅಟಲ್‌ ಬಿಹಾರಿ ವಾಜಪೇಯಿ.

ಮಂಗಳೂರು: ಅವಿಭಜಿತ ಜಿಲ್ಲೆಯು ಶ್ಲಾಘನೀಯ ಚುನಾವಣ ಪರಂಪರೆಯನ್ನು ಹೊಂದಿದೆ. ಈವರೆಗಿನ ಎಲ್ಲ ಚುನಾವಣೆಗಳೂ ಇಲ್ಲಿ ಶಾಂತಿಯುತವಾಗಿ ನಡೆದಿರುವುದೇ ಈ ಶ್ಲಾಘನೀಯ ಪರಂಪರೆ.

ಇಲ್ಲಿ ಚುನಾವಣೆಗಳಲ್ಲಿ ಸ್ಥಳೀಯ ಸಂಗತಿಗಳು ಅಥವಾ ವ್ಯಕ್ತಿಗತ ವಿಚಾರಗಳು ಆದ್ಯತೆ ಪಡೆಯುವುದಿಲ್ಲ. ಜಾತಿ ಧರ್ಮಗಳು ಇಲ್ಲಿ ಚುನಾವಣೆಯ ಸಂದರ್ಭದಲ್ಲಿ ವಿಷಯಗಳಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಇಲ್ಲಿ ಚುನಾವಣೆಗಳು ನಿಜ ಅರ್ಥದ ಪ್ರಜಾತಾಂತ್ರಿಕ ಹಬ್ಬಗಳೇ ಆಗಿರುತ್ತವೆ. ಎಲ್ಲೋ ಒಂದೆರಡು ಕಡೆ ಘರ್ಷಣೆಯಂತಹ ಪ್ರಕರಣಗಳು ನಡೆದೇ ಇಲ್ಲವೆಂದಲ್ಲ. ಆದರೆ ಇದು ಸಾಮಾಜಿಕ ಶಾಂತಿಯನ್ನು ಕದಡುವ ರೀತಿಯದ್ದಾಗಿರಲಿಲ್ಲ.

90ರ ದಶಕದ ಮೊದಲಿನ ಚುನಾವಣೆಗಳಲ್ಲಿ ಅಬ್ಬರದ ಪ್ರಚಾರ ವಿತ್ತು. ಸಮಯ ಪಾಲನೆ ಇರಲಿಲ್ಲ. ಭಿತ್ತಿಪತ್ರಗಳು, ಮತ ಕೋರುವ ಪೋಸ್ಟರ್‌ಗಳು ಊರು ತುಂಬಾ ಕಾಣಿಸುತ್ತಿದ್ದವು. ರ್ಯಾಲಿಗಳು ನಿರಂತರವಾಗಿ ನಡೆಯುತ್ತಿದ್ದವು. ಆ ಕಾಲಘಟ್ಟದಲ್ಲೂ ಜಿಲ್ಲೆ ಶಾಂತಿ ಪರಿಪಾಲಿಸಿತ್ತು. ನಾಯಕರ, ಕಾರ್ಯಕರ್ತರ ಸಾಮಾಜಿಕ ಪ್ರಜ್ಞೆಗೆ ಇದು ಸಾಕ್ಷಿಯಾಗಿದೆ.

ಈ ಬಾರಿಯೂ ಇದೇ ಪರಂಪರೆ ಕಾಣಿಸುತ್ತಿದೆ. ಹಿತಮಿತವಾದ ಪ್ರಚಾರ ಇದಕ್ಕೆ ಕಾರಣ. ಆರೋಪ- ಪ್ರತ್ಯಾರೋಪಗಳು ಚುನಾವಣೆಗಳ ಸಂದರ್ಭದಲ್ಲಿ ಅತೀ ಸಾಮಾನ್ಯ. ಜಿಲ್ಲೆಯಲ್ಲಿ ಈ ಬಾರಿಯೂ ನಾಯಕರು- ಅಭ್ಯರ್ಥಿಗಳು ಇದರಲ್ಲಿ ನಿರತರಾಗಿರುವುದೂ ಸತ್ಯ. ಆದರೆ ಈ ಮಾತುಗಳು ಸಭ್ಯತೆಯ ಎಲ್ಲೆ ಮೀರಿಲ್ಲ ಎಂಬುದು ಗಮನಾರ್ಹ.

ಸ್ಥಳೀಯ- ರಾಜ್ಯ- ದೇಶದ ಚುನಾವಣೆಗಳ ಸಂದರ್ಭಗಳಲ್ಲಿ ಆಯಾವಿಚಾರಗಳೇ ಪ್ರಚಾರದಲ್ಲಿ ಪ್ರಸ್ತಾವವಾಗಬೇಕು. ನಿಂದನೆಗೆ ಇದು ಸಂದರ್ಭವಲ್ಲ. ಈ ಅಂಶಗಳನ್ನು ಜಿಲ್ಲೆ ಸದಾ ಪರಿಪಾಲಿಸುತ್ತಿದೆ.

ಅಂದ ಹಾಗೆ…
ಆ ಅಭ್ಯರ್ಥಿ ತನ್ನ ಪ್ರಥಮ ಪ್ರಚಾರ ಭಾಷಣದಲ್ಲಿ “ಎ’ ಪಕ್ಷವನ್ನೇ ಗೆಲ್ಲಿಸಿ ಅಂತ ಪದೇ ಪದೇ ಹೇಳುತ್ತಿದ್ದರು. ಸಭೆಯಲ್ಲಿ ಸೇರಿದ ಕಾರ್ಯಕರ್ತರಿಗೆ, ವೇದಿಕೆಯಲ್ಲಿದ್ದ ಮುಖಂಡರಿಗೆಲ್ಲ ಕಸಿವಿಸಿ. ನಿಜಕ್ಕಾದರೆ ಆ ಅಭ್ಯರ್ಥಿ ಆಗ ತಾನೇ “ಎ’ ಪಕ್ಷದಿಂದ ಪಕ್ಷಾಂತರಗೊಂಡು “ಬಿ’ ಪಕ್ಷಕ್ಕೆ ಸೇರಿ “ಬಿ’ ಪಕ್ಷದ ಟಿಕೆಟ್‌ ಪಡೆದಿದ್ದರು.

– ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.