Udayavni Special

ಕೈ, ದಳಕ್ಕೆ ಜಾತಿ ಲೆಕ್ಕಾಚಾರ; ಕಮಲಕ್ಕೆ ಮೋದಿ ಆಧಾರ!


Team Udayavani, Mar 19, 2019, 12:30 AM IST

modi-i-800.jpg

ರಾಯಚೂರು: ಎಲ್ಲೆಡೆ ಅಭಿವೃದ್ಧಿ ಕೆಲಸ ಕಾರ್ಯಗಳು ಪ್ರಮುಖ ಮಾನದಂಡವಾದರೆ ಜಿಲ್ಲೆಯಲ್ಲಿ ಜಾತಿ, ಅಭ್ಯರ್ಥಿ ವರ್ಚಸ್ಸಿಗೆ ಆದ್ಯತೆ ಎಂದರೆ ತಪ್ಪಾಗಲಿಕ್ಕಿಲ್ಲ. ವಿಧಾನಸಭೆ ಚುನಾವಣೆ ಮುಗಿದು ವರ್ಷ ಮುಗಿಯುವುದರೊಳಗೆ ಸಂಸತ್‌ ಚುನಾವಣೆ ಬರುತ್ತಿವೆ. ರಾಜ್ಯದಲ್ಲಿ ದೋಸ್ತಿ ಸರ್ಕಾರದ ಎರಡು ಪಕ್ಷಗಳು ಕಾರ್ಯವೈಖರಿ ಜತೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಆಡಳಿತವನ್ನು ಜಿಲ್ಲೆಯ ಜನ ಕಂಡಿದ್ದಾರೆ. ಕಳೆದ ಬಾರಿ ದೇಶಾದ್ಯಂತ ಮೋದಿ ಅಲೆ ಇದ್ದಾಗ್ಯೂ ಕಡಿಮೆ ಅಂತರದಲ್ಲಿ ಬಿಜೆಪಿ ಸೋಲುಂಡಿರುವುದು ಇತಿಹಾಸ. ಹೀಗಾಗಿ ಇಲ್ಲಿನ ಮತದಾರನ ಮನಸ್ಥಿತಿ ಅರಿಯುವುದು ನಿಜಕ್ಕೂ ಸವಾಲಿನ ಕೆಲಸ.

ಜಿಲ್ಲೆಯ ಮಟ್ಟಿಗೆ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಗೆ ಈ ಬಾರಿಯೂ ಮೋದಿ ಅಲೆಯೇ ಆಸರೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಭಿವೃದ್ಧಿ, ಕೇಂದ್ರ ಸರ್ಕಾರದ ಯೋಜನೆಗಳ ಜತೆಗೆ ಹಾಲಿ ಸಂಸದರ ಆಡಳಿತ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿದೆ ಬಿಜೆಪಿ. ಆದರೆ, ಜೆಡಿಎಸ್‌ ಜತೆ ಮೈತ್ರಿಗೆ ಮುಂದಾಗಿರುವ ಕಾಂಗ್ರೆಸ್‌, ರಾಜ್ಯ ದೋಸ್ತಿ ಸರ್ಕಾರದ ಸಾಲ ಮನ್ನಾದ ಸಫ‌ಲತೆ ಜತೆಗೆ ಕೇಂದ್ರ ಸರ್ಕಾರದ ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿ, ಕೋಮು ಪ್ರಚೋದನೆ ಘಟನೆಗಳಂಥ ವಿಚಾರಗಳನ್ನು ಪ್ರಸ್ತಾಪಿಸಿ ಮತಬೇಟೆಗೆ ಮುಂದಾಗಿದೆ.

ಕಳೆದ ಬಾರಿ ಕೈ ಹಿಡಿದ 371: 2014ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಲು ಕೆಲವು ಕಾರಣಗಳಲ್ಲಿ 371 (ಜೆ) ಕೂಡ ಒಂದು. ಹೈದರಾಬಾದ್‌-ಕರ್ನಾಟಕ ಭಾಗದ ಮತಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಯಿಂದಲೇ ಬಹುದಿನಗಳ ಬೇಡಿಕೆಗೆ ಹಿಂದಿನ ಯುಪಿಎ ಸರ್ಕಾರ ಅಸ್ತು ಎಂದಿತ್ತು. 371 (ಜೆ) ಕಲಂ ತಿದ್ದುಪಡಿ ಮಾಡಿ ಹೈ-ಕ ಭಾಗದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿತ್ತು. ಈ ಅಸ್ತ್ರ ಮುಂದಿಟ್ಟುಕೊಂಡು ಪ್ರಚಾರಕ್ಕಿಳಿದಿದ್ದ ಕಾಂಗ್ರೆಸ್‌ ಕೊನೆಗೆ ಸಾಫಲ್ಯಗೊಂಡಿತ್ತು.  

ಫಕೀರಪ್ಪರ ವಿರೋಧಿ ಅಲೆ: 2009ರಲ್ಲಿ ಜಿಲ್ಲೆಗೆ ವಲಸೆ ಬಂದಿದ್ದ ಗಣಿಧಣಿಗಳ ಪಾಳಯದ ಫಕೀರಪ್ಪ ಐದು ವರ್ಷಗಳಲ್ಲಿ ಅಭಿವೃದ್ಧಿಗೆ ಅನಾದರ ತೋರುವ ಮೂಲಕ ಸಾಕಷ್ಟು ವಿರೋಧಿ ಅಲೆ ಸೃಷ್ಟಿಯಾಗಿತ್ತು. ಫಕೀರಪ್ಪ ತಮ್ಮ ಸಂಸತ್‌ ಸ್ಥಾನಕ್ಕೆ ನ್ಯಾಯ ಸಲ್ಲಿಸುವಲ್ಲಿ ವಿಫಲರಾಗಿದ್ದರು. ಆದರೆ, ಮೊದಲ ಬಾರಿಗೆ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಲೋಕಸಭೆ ಚುನಾವಣೆಗೂ ಕಾಲಿಟ್ಟ ಪರಿಣಾಮವೋ, ನಾಲ್ಕು ಬಾರಿ ಸಂಸದರಾಗಿದ್ದ ವೆಂಕಟೇಶ ನಾಯಕರ ವ್ಯಕ್ತಿತ್ವದ ಅಲೆಯಿಂದಲೋ 2014ರಲ್ಲಿ ಬಿಜೆಪಿ ಮತ್ತೆ ಸೋಲನುಭವಿಸಿತು.

ಜಾತಿ ಲೆಕ್ಕಾಚಾರ ಕಡೆಗಣಿಸುವಂತಿಲ್ಲ
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ರಾಯಚೂರು ಕ್ಷೇತ್ರ ಯಾದಗಿರಿ ಜಿಲ್ಲೆಯ 3  ಸೇರಿ ಒಟ್ಟು 8 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಇಲ್ಲಿ ಜಾತಿ ರಾಜಕಾರಣ ಇಲ್ಲದಿಲ್ಲ ಎನ್ನುವುದು ಕಷ್ಟ. ಪ.ಪಂ. ಹೆಚ್ಚಾಗಿದ್ದರೂ ಲಿಂಗಾಯತರ ಪ್ರಾಬಲ್ಯ ಅಲ್ಲಗಳೆಯುವಂತಿಲ್ಲ. ಅದರ ಜತೆಗೆ ಕುರುಬ ಮತಗಳು ನಿರ್ಣಾಯಕವೇ. ಹೀಗಾಗಿ ಈ ಬಾರಿಯೂ ಜಾತಿ ರಾಜಕಾರಣಕ್ಕೆ ಅಭ್ಯರ್ಥಿಗಳು ಜೈ ಎನ್ನುವ ಸಾಧ್ಯತೆಯಿದೆ. ಮೀಸಲು ಕ್ಷೇತ್ರವಾದ ಕಾರಣ ಪರಿಶಿಷ್ಟ ಪಂಗಡದ ಮತಗಳು ವಿಭಜನೆಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಬೇರೆ ಜಾತಿಗಳ ಓಲೈಕೆಯಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ. ಮೋದಿ ಅಲೆ ಮೀರಿ ಗೆಲುವು ಸಾಧಿ ಸಿರುವ ಇತಿಹಾಸ ಒಂದೆಡೆಯಾದರೆ, ಈ ಬಾರಿ ದೋಸ್ತಿ ಸರ್ಕಾರ ಒಗ್ಗೂಡಿ ಹೋರಾಡುವ ಸಾಧ್ಯತೆ ಮತ್ತೂಂದೆಡೆ. ಈ ಬಾರಿಯೂ ಅದೇ ಅಲೆ ಉಳಿಸಿಕೊಂಡಿರುವ ಮೋದಿ, ರಾಯಚೂರು ಕ್ಷೇತ್ರದಲ್ಲಿ ಬದಲಾವಣೆಗೆ ತರುವರೇ ಎಂಬ ಕುತೂಹಲ ಮೂಡಿದೆ.

– ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.