ಚೌಕಿದಾರ ಟಿ ಶರ್ಟ್‌ ಧರಿಸಿದವರಿಗೆ ಪ್ರಶ್ನೆ!

Team Udayavani, Apr 30, 2019, 6:07 AM IST

ರಾಜಸ್ಥಾನದ ಚುರುವಿನಲ್ಲಿ ಸೋಮವಾರ ಕಾಂಗ್ರೆಸ್‌ ರಾಲಿ ವೇಳೆ “ಮೇ ಭಿ ಚೌಕಿದಾರ್‌’ ಎಂದು ಬರೆದಿದ್ದ ಟಿಶರ್ಟ್‌ ಧರಿಸಿಕೊಂಡಿದ್ದ ಕೆಲವರು ಯುವಕರು ಕಾಣಿಸಿಕೊಂಡಿದ್ದರು. ಪ್ರಚಾರ ಭಾಷಣ ಮಾಡುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಯವರ ಗಮನ ಈ ಯುವಕರತ್ತ ಹರಿಯಿತು.

ಕೂಡಲೇ ಅವರು ಆ ಯುವಕರನ್ನು ಉದ್ದೇಶಿಸಿ, “ನೀವು ಚೌಕಿದಾರನ ಟೀ ಶರ್ಟ್‌ ಧರಿಸಿಕೊಂಡಿದ್ದೀರಿ. ನಿಮಗೆಲ್ಲರಿಗೂ ಇಲ್ಲಿಗೆ ಸ್ವಾಗತ.

ನಿಮ್ಮೆಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆಂದು ಮೋದಿ ಭರವಸೆ ನೀಡಿದ್ದರು. ನಿಮ್ಮಲ್ಲಿ ಯಾರದ್ದಾದರೂ ಖಾತೆಗೆ 15 ಲಕ್ಷ ಬಂದಿದೆಯೇ? 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಮೋದಿ ಆಶ್ವಾಸನೆ ಈಡೇರಿದೆಯೇ’ ಎಂದು ಪ್ರಶ್ನಿಸಿದರು. ಇದೇ ವೇಳೆ, ತಾವು ಘೋಷಿಸಿರುವ ನ್ಯಾಯ್‌ ಯೋಜನೆಯು ಭಾರತೀಯ ಆರ್ಥಿಕತೆಯ ಎಂಜಿನ್‌ಗೆ ಡೀಸೆಲ್‌ ಇದ್ದಂತೆ ಎಂದೂ ರಾಹುಲ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ