Udayavni Special

ಕಾಶ್ಮೀರ ಎಲೆಕ್ಷನ್‌ಗೆ ಕಾನೂನಿನ ಭೀತಿ?


Team Udayavani, Feb 26, 2019, 12:30 AM IST

x-17.jpg

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಏಕಕಾಲದಲ್ಲಿ ನಡೆಯುವುದೇ-ಇಲ್ಲವೇ ಎಂಬ ಚರ್ಚೆ ಆರಂಭವಾಗಿದೆ. 2014ರ ನವೆಂಬರ್‌-ಡಿಸೆಂಬರ್‌ನಲ್ಲಿ 87 ಸ್ಥಾನಗಳಿರುವ ವಿಧಾನಸಭೆಗೆ ಚುನಾವಣೆ ನಡೆದು ಅತಂತ್ರ ಫ‌ಲಿತಾಂಶ ರಚನೆಯಾಗಿತ್ತು. ತದ್ವಿರುದ್ಧ ಸಿದ್ಧಾಂತಗಳಿರುವ ಪಿಡಿಪಿ ಮತ್ತು ಬಿಜೆಪಿ ಅಂದು ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದವು. ಆದರೆ 2018ರ ಜೂನ್‌ನಲ್ಲಿ ಈ ಮೈತ್ರಿ ಸರ್ಕಾರ ಕುಸಿದು ಬಿತ್ತು. ಅಂದಿನಿಂದ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. 

ಫೆ.14ರಂದು ಪುಲ್ವಾಮಾದಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಆತ್ಮಹತ್ಯಾ ದಾಳಿಗೆ ನಲವತ್ತು ಮಂದಿ ಸಿಆರ್‌ಪಿಎಫ್ ಯೋಧರ ಮೃತಪಟ್ಟ ನಂತರ, ಭದ್ರತೆಯ ವಿಚಾರದಲ್ಲಿ ಚರ್ಚೆಗಳು ನಡೆಯಲಾರಂಭಿಸಿವೆ. ಈ ಘಟನೆಯ ನಂತರ ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆಯಲಾಗಿದೆ. ಜತೆಗೆ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದವರನ್ನು ಸೆರೆಮನೆಗೆ ತಳ್ಳುವ ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ 100 ಕಂಪನಿಗಳಷ್ಟು ಅರೆಸೇನಾ ಪಡೆಗಳನ್ನು ಕಣಿವೆ ರಾಜ್ಯಕ್ಕೆ ರವಾನೆ ಮಾಡಲಾಗಿದೆ. ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿಧಾನಸಭೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಹಲವು ಬಾರಿ ಹೇಳಿಕೊಂಡಿದ್ದರು. ಆದರೆ ಪುಲ್ವಾಮಾ ಘಟನೆಯ ಬಳಿಕ ವಿಧಾನಸಭೆ, ಲೋಕಸಭೆ ಚುನಾವಣೆ ಏಕಕಾಲದಲ್ಲಿ ನಡೆದರೆ ಯಾವ ರೀತಿ ಭದ್ರತೆ ಕೊಡಬಹುದು ಎಂಬ ವಿಚಾರದ ಹೊಸ ಸವಾಲು ಕೇಂದ್ರ, ರಾಜ್ಯಕ್ಕೆ ಎದುರಾಗಿದೆ.ದರ ನಡುವೆಯೇ ಕೇಂದ್ರ ಗೃಹ ಸಚಿವಾಲಯ 800 ಕಂಪನಿಗಳಷ್ಟು ಅರೆ ಸೇನಾಪಡೆಗಳನ್ನು ನಿಯೋಜಿಸಲು ಮುಂದಾಗಿದೆ. ಆದರೆ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಜತೆಯಾಗಿ ನಡೆಸಲು ಹೆಚ್ಚುವರಿ ಯಾಗಿ 200 ಕಂಪನಿಗಳಷ್ಟು ಅರೆಸೇನಾ ಪಡೆಗಳು ಬೇಕಾ ಗು ತ್ತವೆ. ದೇಶದ ವಿವಿಧ ಭಾಗಗಳಲ್ಲಿ ಚುನಾವಣೆ ನಡೆಸಿ ಕಣಿವೆ ರಾಜ್ಯದಲ್ಲಿ ಜಂಟಿಯಾಗಿ ನಡೆಸಲು ಆ ಪ್ರಮಾಣದ ಭದ್ರತಾ ಪಡೆಗಳು ಸಿಗಲಿವೆಯೇ, ಅದನ್ನು ಯಾವ ರೀತಿ ಹೊಂದಾಣಿಕೆ ಮಾಡಬಹುದು ಎನ್ನುವುದೇ ಕದನ ಕುತೂಹಲ. ಈಗಾಗಲೇ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 400 ಕಂಪನಿಗಳಷ್ಟು ಅರೆ ಸೇನಾ ಪಡೆಗಳನ್ನು ನಿಯೋಜನೆ ಮಾಡಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ  400 ಕಂಪನಿಗಳಷ್ಟು ಅರೆಸೇನಾ ಪಡೆ ನಿಯೋಜನೆ ಮಾಡಲಾಗಿತ್ತು.

ಕೇಂದ್ರ ಚುನಾವಣಾ ಆಯೋಗ ಮಾ.4-5ರಂದು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿ ಚುನಾವಣೆ ನಡೆಸಲು ಸಾಧ್ಯವಿದೆಯೋ ಇಲ್ಲವೋ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಹಾಗೂ ಇದಾದ ಬಳಿಕ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.

ನಿಯಮ ಪ್ರಕಾರ ವಿಧಾನಸಭೆ ವಿಸರ್ಜಿಸಿ ಆರು ತಿಂಗಳು ಕಳೆದ ಬಳಿಕ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಸಲು ಅವಕಾಶ ಉಂಟು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ಅವಧಿ ಮೇ 20ಕ್ಕೆ ಮುಕ್ತಾಯವಾಗುತ್ತದೆ. ಜತೆಗೆ ರಾಷ್ಟ್ರಪತಿ ಆಳ್ವಿಕೆಯ ಅವಧಿ ಜೂ.20ಕ್ಕೆ ಮುಕ್ತಾಯವಾಗುತ್ತದೆ. 

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಒಮರ್‌ ಅಬ್ದುಲ್ಲಾ “ಸರಿಯಾದ ಸಮಯಕ್ಕೆ ಮತ್ತು ಲೋಕಸಭೆ ಚುನಾವಣೆ ಜತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಕೇಂದ್ರ ಸರ್ಕಾರಕ್ಕೆ ನಿಜವಾದ ಪರೀಕ್ಷೆ. ಭಯೋತ್ಪಾದಕರು ಮತ್ತು ಪ್ರತ್ಯೇಕವಾದಿಗಳು ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ವಿಳಂಬ ಮಾಡಲು ಸಂಚು ರೂಪಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರನ್ನೆದುರಿಸಿ ಶಾಂತಿ ಸುವ್ಯವಸ್ಥೆ ಮೂಲಕ ಸುಸೂತ್ರವಾಗಿ ಚುನಾವಣೆ ನಡೆಸಲು ಸಾಧ್ಯವೇ?’ ಎಂದು ಟ್ವಿಟರ್‌ನಲ್ಲಿ ಜಿಜ್ಞಾಸೆ ಎತ್ತಿದ್ದಾರೆ.

ಒಟ್ಟು ವಿಧಾನಸಭಾ ಕ್ಷೇತ್ರಗಳು
2014ರ ಚುನಾವಣೆ
65% ಮತ ಪ್ರಮಾಣ
831 ಒಟ್ಟು ಅಭ್ಯರ್ಥಿಗಳು

2008ರ ಚುನಾವಣೆ
61.42% ಮತ ಪ್ರಮಾಣ
1354 ಒಟ್ಟು ಅಭ್ಯರ್ಥಿಗಳು

2002ರ ಚುನಾವಣೆ
43.7% ಮತ ಪ್ರಮಾಣ
709 ಒಟ್ಟು ಅಭ್ಯರ್ಥಿಗಳು

ಬಿಟ್ಟೇನೆಂದರೂ…
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಈ ಬಾರಿ ಮಹಾ ರಾಷ್ಟ್ರದ ಮಾಧಾ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿ ಸಲಿದ್ದಾರೆ. ತಾವು ಇನ್ಮುಂದೆ ಲೋಕಸಭಾ ಚುನಾ ವಣೆ ಯನ್ನು ಎದುರಿಸುವುದಿಲ್ಲ ಎಂದು ತಿಂಗಳ ಹಿಂದೆ ಹೇಳಿ ದ್ದರು. 2014ರ ಚುನಾವಣೆ ಯಿಂದಲೂ ಅವರು ದೂರ ಉಳಿದಿದ್ದರು. 2012 ರಲ್ಲೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ  ಪವಾರ್‌ ಘೋಷಿಸಿದ್ದರು.

ಐಪಿಎಸ್‌ ಅಧಿಕಾರಿ  ಮಮತಾ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೊದಲ ಬಾರಿ ಸಿಎಂ ವಿರುದ್ಧ  ಆರೋಪ ಎದುರಾಗಿದೆ. 
ಮುಕುಲ್‌ ರಾಯ್‌, ಬಿಜೆಪಿ ನಾಯಕ

ನೋಟ್‌ಬಂದಿ,  ಜಿಎಸ್‌ಟಿ  ಮೂಲಕ ವೇಗವಾಗಿ ಸಾಗುತ್ತಿದ್ದ ಅರ್ಥವ್ಯವಸ್ಥೆಗೆ ಬ್ರೇಕ್‌ ಹಾಕಿದರು. ದೆಹಲಿ ಅರ್ಥ ವ್ಯವಸ್ಥೆ ಕುಗ್ಗದಂತೆ ಮಾಡಿದ್ದು ನಾವು 
ಅರವಿಂದ್‌ ಕೇಜ್ರಿವಾಲ್‌, ದೆಹಲಿ ಸಿಎಂ

ಯಾವುದೇ ದೇಶದ ಇತಿಹಾಸ ನೋಡಿದರೂ ಇಂಥ ನಾಯಕತ್ವ (ಮೋದಿ) ಸಿಗುವುದು ಬಹಳ ಅಪರೂಪ. 
ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವೆ

5 ಶತಕೋಟಿ ಡಾಲರ್‌
ಈ ಬಾರಿ ಲೋಕಸಭಾ ಚುನಾವಣೆಯ ಒಟ್ಟು ಖರ್ಚು 5 ಶತಕೋಟಿ ಡಾಲರ್‌(3,54,87,50,00,000.00 ರೂಪಾಯಿ) ಅನ್ನೂ ಮೀರುವ ಸಾಧ್ಯತೆಯಿದೆ. 

ಪುಲ್ವಾಮಾ ದಾಳಿಯ ನಂತರ ಮೋದಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು.  ದೇಶದ ಸೈನಿಕರ ಮಾರಣಹೋಮವಾದ ಸಂದರ್ಭದಲ್ಲೂ ಅವರಲ್ಲಿ ಚಿಕ್ಕ ಎಮೋಷನ್‌ ಇಲ್ಲದಿರುವುದು ಜುಗುಪ್ಸೆ ಹುಟ್ಟಿಸುತ್ತದೆ!
ಸ್ವಾತಿ ಮಲಿವಾಲ್‌, ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ

ನಿಮ್ಮ ಪಕ್ಷ(ಆಪ್‌) ಮೊದಲಿನಿಂದಲೂ ಕಾಶ್ಮೀರ ಮತ್ತು ಖಲಿಸ್ತಾನದ ಪ್ರತ್ಯೇಕತಾವಾದಿಗಳ ಪರ  ಧೋರಣೆ ತೋರುತ್ತಾ ಬಂದಿದೆ ಎನ್ನುವುದು ಗೊತ್ತಿದೆ. ನಿಮ್ಮ ಕೊಳಕು ರಾಜಕೀಯದಲ್ಲಿ ಧೀರ ಸೈನಿಕರನ್ನೇಕೆ ಎಳೆದು ತರುತ್ತೀರಿ? 
ಸೋನಂ ಮಹಾಜನ್‌ 

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

covid

ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ :ವಿ.ಕೆ.ಪಾಲ್

Untitled-1

ಶಶಿಕಲಾ ಎಐಎಡಿಎಂಕೆಯ ಸ್ವಯಂಘೋಷಿತ ಪ್ರಧಾನ ಕಾರ್ಯದರ್ಶಿ!

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.