ಚಾಲಕನ ಮತದಾನಕ್ಕೆ ಜಿಲ್ಲಾಧಿಕಾರಿ ಸಾಥ್‌

Team Udayavani, Apr 24, 2019, 6:01 AM IST

ಜಿಲ್ಲಾಧಿಕಾರಿಗಳೆಂದರೆ ಚುನಾವಣೆ ವೇಳೆ ಬಹುತೇಕ ಬ್ಯುಸಿ ಇರುತ್ತಾರೆ. ಅವರ ಚಾಲಕರಿಗೂ ಪುರುಸೊತ್ತು ಎನ್ನುವುದು ಇಲ್ಲ. ಆದರೂ ಮತದಾನದ ಮಹತ್ವ ಅರಿತು ಚಾಲಕನಿಗೆ ಮತದಾನಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ಕೊಟ್ಟಿದ್ದೂ ಅಲ್ಲದೇ ಅವರ ತಾಯಿಯವರನ್ನು ಮತ್ತು ಹಿರಿಯ ನಾಗರಿಕರೊಬ್ಬರನ್ನು ತಮ್ಮದೇ ವಾಹನದಲ್ಲಿ ಕರೆತಂದು ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರು ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಜಿಲ್ಲಾಧಿಕಾರಿ ಅವರ ಚಾಲಕ ಬೈಂದೂರು ಸಮೀಪದ ಬಾಡದವರು. ಮಧ್ಯಾಹ್ನ ಜಿಲ್ಲಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡುವಾಗ ಅವರ ಚಾಲಕ ಇನ್ನೊಂದು ಕಾರಿನಲ್ಲಿ ಬೂತ್‌ ಒಂದಕ್ಕೆ ತೆರಳಿ ಮತಚಲಾಯಿಸಲು ಯೋಜಿಸಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ತಮ್ಮದೇ ಕಾರಿನಲ್ಲಿ ಚಾಲಕನೊಂದಿಗೆ ತೆರಳಿದ್ದೂ ಅಲ್ಲದೆ, ಚಾಲಕನ ತಾಯಿ ಹಾಗೂ ಮತ್ತೂಬ್ಬ ಹಿರಿಯ ನಾಗರೀಕರನ್ನು ಜತೆಗೆ ಕರೆತರಲು ಅನುವು ಮಾಡಿದ್ದಾರೆ. ಮತದಾನ ಮುಗಿಯವವರೆಗೂ ಅವರು ಅಲ್ಲೇ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ