ಮೋದಿ ವೆಬ್‌ ಸರಣಿ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ

Team Udayavani, Apr 21, 2019, 6:00 AM IST

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಬಾಲಿವುಡ್‌ ನಟ ಸನ್ನಿ ಡಿಯೋಲ್‌, ದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು

ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ವೆಬ್‌ ಸರಣಿಯಾದ “ಮೋದಿ- ಜರ್ನಿ ಆಫ್ ಎ ಕಾಮನ್‌ ಮ್ಯಾನ್‌’ನ ಪ್ರಸಾರ ನಿಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗ, ಸರಣಿಯ ನಿರ್ಮಾಣ ಸಂಸ್ಥೆಯಾದ ಈರೋಸ್‌ ನೌಗೆ ಆದೇಶಿಸಿದೆ. ತನ್ನ ಮುಂದಿನ ಆದೇಶದವರೆಗೂ ಪ್ರಸಾರ ತಡೆ ಹಿಡಿಯಬೇಕೆಂದು ತಾಕೀತು ಮಾಡಿದೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಇತ್ತೀಚೆಗೆ, ಈ ಸರಣಿಯ ಟ್ರೈಲರ್‌ ವೀಕ್ಷಿಸಿದ ಅನಂತರ ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಟ್ರೈಲರ್‌ನಲ್ಲಿ ಮೋದಿಯವರ ಜೀವನದ ಎಲ್ಲಾ ಘಟ್ಟಗಳನ್ನೂ ಚಿತ್ರಿಸಲಾಗಿದ್ದು, ಸಾಮಾನ್ಯ ಬಾಲಕನೊಬ್ಬ ರಾಷ್ಟ್ರನಾಯಕನಾದ ಕಥಾಹಂದರವಿದೆ. ಈ ಹಿನ್ನೆಲೆಯಲ್ಲಿ ವೆಬ್‌ ಸರಣಿಯ ಪ್ರಸಾರಕ್ಕೆ ತಡೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಸನ್ನಿ ಡಿಯೋಲ್‌ ಬಿಜೆಪಿಗೆ?
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಬಾಲಿವುಡ್‌ ನಟ ಸನ್ನಿ ಡಿಯೋಲ್‌, ದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಪಿಸುಪಿಸು ಮಾತುಗಳಿಗೆ ನಾಂದಿ ಹಾಡಿದೆ. ಹಾಲಿ ಲೋಕಸಭಾ ಚುನಾವಣೆಗಾಗಿ ಪಂಜಾಬ್‌ನ ಮೂರು ಕ್ಷೇತ್ರಗಳಿಗೆ (ಅಮೃತಸರ, ಗುರುದಾಸ್‌ಪುರ ಮತ್ತು ಹೋಶಿಯಾಪುರ್‌) ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಸೂಕ್ತ ಅಭ್ಯರ್ಥಿಗಳಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಹಾಗಾಗಿ, ಅಮಿತ್‌ ಶಾ ಅವರು, ಸನ್ನಿ ಡಿಯೋಲ್‌ ಅವರನ್ನು ಅಮೃತಸರದಿಂದ ಕಣಕ್ಕಿಳಿಸಲು ಪ್ರಯತ್ನಿಸಿರಬಹುದೇ ಎಂಬ ಕುತೂಹಲ ಎದ್ದಿದೆ.


ಈ ವಿಭಾಗದಿಂದ ಇನ್ನಷ್ಟು

  • ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸುದ್ದಿವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿವೆ. 13 ಸಮೀಕ್ಷೆಗಳ ಪೈಕಿ ಆರರಲ್ಲಿ...

  • ಲೋಕಸಭೆ ಚುನಾವಣೆಯ ಜೊತೆಗೆ ಈ ಬಾರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ...

  • ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಹಿಂಸಾಚಾರ, ಘರ್ಷಣೆ, ವಾಕ್ಸಮರಗಳನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ದೀದಿಯ ಭದ್ರಕೋಟೆಯನ್ನು ಒಡೆಯುವಲ್ಲಿ ಪ್ರಧಾನಿ...

  • ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ನಿರೀಕ್ಷೆಯಂತೆಯೇ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಊಹಿಸಿವೆ....

  • ಮತಗಟ್ಟೆಗೆ ಮುಸುಕು (ಪರ್ದಾ) ಹಾಕಿಕೊಂಡು ಬರುವ ಮಹಿಳೆಯರು, ಮುಸುಕು ತೆಗೆದು ಮತದಾನ ಮಾಡಬೇಕು ಎಂದು ಕೇರಳದ ಸಿಪಿಎಂ ನಾಯಕ ಎಂ.ವಿ. ಜಯರಾಜನ್‌ ನೀಡಿರುವ ಹೇಳಿಕೆಯೊಂದು...

ಹೊಸ ಸೇರ್ಪಡೆ