“ಫೇಸ್ಬುಕ್, ಟ್ವಿಟ್ಟರ್ನಲ್ಲಿ ಸುಮಲತಾ ಫಾಲೋ ಮಾಡಿ’
Team Udayavani, Mar 12, 2019, 12:40 AM IST
ಮಂಡ್ಯ: ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಪೂರ್ವ ತಯಾರಿ ನಡೆಸಿರುವ ಸುಮಲತಾ ಅಂಬರೀಶ್, ತಮ್ಮ ಚುನಾವಣಾ ಪ್ರಚಾರವನ್ನು ಜೋರಾಗಿಯೇ ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕ್ಷೇತ್ರದ ಜನರನ್ನು ತಲುಪಲು ಮತ್ತಷ್ಟು ಸಿದಟಛಿತೆ ನಡೆಸಿರುವ ಅವರು, ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಈಗಾಗಲೇ “ಸುಮಲತಾ ಅಮರ್ನಾಥ್’ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ಹೊಂದಿರುವ ಸುಮಲತಾ, ಈಗ “ಸುಮಲತಾ ಅಂಬ ರೀಶ್’ ಹೆಸರಿನಲ್ಲಿ ಮತ್ತೂಂದು ಪೇಜ್ ತೆರೆದಿದ್ದಾರೆ. ಈ ಖಾತೆಯಲ್ಲಿ ಎಲ್ಲರಿಗೂ ನಾನು ಸಂಪರ್ಕಕ್ಕೆ ಸಿಗುತ್ತೇನೆ ಎಂದು ತಿಳಿಸಿದ್ದಾರೆ. “”ಆತ್ಮೀಯರೇ, ನಮಸ್ಕಾರ, ನಾನು ಮಂಡ್ಯದ ಮನೆ ಮಗಳು ನಿಮ್ಮ ಸುಮಲತಾ ಅಂಬರೀಶ್. ಇನ್ನು ಮುಂದೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಟ್ವಿಟ್ಟರ್ನಲ್ಲಿ ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ. Sumalatha Ambareesh Official Page ಇದು ನನ್ನ ಅಧಿಕೃತ ಪೇಜ್. ಇನ್ನು ಮುಂದೆ,ದಿನನಿತ್ಯ ತಮ್ಮೆಲ್ಲರ ಸಂಪರ್ಕದಲ್ಲಿರುತ್ತೇನೆ. ತಮ್ಮ ಸಲಹೆ ಮಾರ್ಗದರ್ಶನ, ಸಹಕಾರ ಹೀಗೆ ನಿರಂತರವಾಗಿರಲಿ. ಧನ್ಯವಾದಗಳು.’ ಎಂದು ಹೇಳಿದ್ದಾರೆ.