ಪಾಸ್ವಾನ್‌ ಇಲ್ಲದೆ ಹಾಜೀಪುರ ಎಲೆಕ್ಷನ್‌

Team Udayavani, May 3, 2019, 6:15 AM IST

ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರತಿನಿಧಿಸುವ ಕ್ಷೇತ್ರವೇ ಹಾಜಿಪುರ. ಈ ಕ್ಷೇತ್ರದಿಂದ ಪ್ರಸಕ್ತ ಸಾಲಿನಲ್ಲಿ ಪಾಸ್ವಾನ್‌ ಸ್ಪರ್ಧೆ ಮಾಡುತ್ತಿಲ್ಲ. ಅವರ ಬದಲು ಪುತ್ರ ಚಿರಾಗ್‌ ಪಾಸ್ವಾನ್‌ ಕಣಕ್ಕೆ ಇಳಿಯಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಅದರ ಬದಲಾಗಿ ಬಿಹಾರ ಸರ್ಕಾರದಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿರುವ ಪಶುಪತಿ ಕುಮಾರ್‌ ಪರಸ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ಎದುರಾಳಿ ಅಭ್ಯರ್ಥಿಯಾಗಿ ಆರ್‌ಜೆಡಿಯ ಶಿವಚಂದ್ರ ರಾಮ್‌ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

1952ರಲ್ಲಿ ಈ ಕ್ಷೇತ್ರ ರಚನೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜೇಶ್ವರ ಪಟೇಲ್‌ ಗೆದ್ದಿದ್ದರು. 1957 ಮತ್ತು 1962ರ ಚುನಾವಣೆಯಲ್ಲಿ ಪಟೇಲ್‌ ಅವರೇ ಸ್ಥಾನ ಉಳಿಸಿಕೊಂಡಿದ್ದರು. 1967ರಲ್ಲಿ ಕಾಂಗ್ರೆಸ್‌ನಿಂದ ವಾಲ್ಮೀಕಿ ಚೌಧರಿ ಗೆದ್ದರು. 1971ರಲ್ಲಿ ರಾಮ್‌ಶೇಖರ್‌ ಪ್ರಸಾದ್‌ ಸಿಂಗ್‌ ಜಯ ಸಾಧಿಸಿದ್ದರು. ಹಾಲಿ ಪ್ರಭಾವಿ ನಾಯಕ ಪಾಸ್ವಾನ್‌ 1977ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ತಮ್ಮ ಛಾಪು ಮೂಡಿಸಿದರು. 1980, 1989, 1996, 1998, 1999, 2004, 2014ರ ಚುನಾವಣೆಯಲ್ಲಿ ಪಾಸ್ವಾನ್‌ ಜಯಗಳಿಸಿದ್ದರು. 1991 ಮತ್ತು 2009ರಲ್ಲಿ ಜೆಡಿಯುನ ರಾಂ ಸುಂದರ್‌ ದಾಸ್‌ ಗೆದ್ದಿದ್ದರು.

ಸ್ವಾತಂತ್ರ್ಯ ಪಡೆದ ಬಳಿಕ 1977ರ ವರೆಗೆ ಮಾತ್ರ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದರು. ನಂತರದ ವರ್ಷಗಳಲ್ಲಿ ಅದಕ್ಕೆ ಬ್ರೇಕ್‌ ನೀಡಿದ ಹೆಗ್ಗಳಿಕೆ ಕೇಂದ್ರ ಸಚಿವ ಪಾಸ್ವಾನ್‌ಗೆ ಸೇರಿದೆ. 1977ರಲ್ಲಿ ಪಾಸ್ವಾನ್‌ ಮೊದಲ ಬಾರಿಗೆ 4,69,007 ಮತಗಳನ್ನು ಪಡೆಯುವ ಮೂಲಕ ಅತ್ಯಂತ ಹೆಚ್ಚಿನ ಪ್ರಮಾಣದ ಮತ ಪಡೆದು ಆ ಕಾಲಕ್ಕೇ ಗಿನ್ನಿಸ್‌ ದಾಖಲೆ ಮಾಡಿದ್ದರು. ಈ ದಾಖಲೆಯನ್ನು ದಿ.ಪಿ.ವಿ.ನರಸಿಂಹ ರಾವ್‌ ಒಡಿಶಾದ ನಂದ್ಯಾಲ್‌ನಿಂದ 5 ಲಕ್ಷ ಮತಗಳನ್ನು ಪಡೆಯುವ ಮೂಲಕ ಮುರಿದಿದ್ದರು.

ಈ ಬಿಹಾರದಲ್ಲಿ ಜೆಡಿಯು-ಬಿಜೆಪಿ ಸ್ಥಾನ ಹೊಂದಾಣಿಕೆ ವೇಳೆ ಪಾಸ್ವಾನ್‌ ಎನ್‌ಡಿಎ ತೊರೆವ ಮಾತಾಡಿದ್ದರು. ಅಂತಿಮವಾಗಿ ಗೆದ್ದದ್ದು ಅವರೇ. 1 ರಾಜ್ಯಸಭಾ ಸ್ಥಾನ, 7 ಕ್ಷೇತ್ರಗಳನ್ನು ಅವರು ಪಡೆದುಕೊಂಡಿದ್ದಾರೆ.
ಜಾತಿ ಲೆಕ್ಕಾಚಾರ: ಇಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು. ಅಲ್ಪಸಂಖ್ಯಾತ ಸಮುದಾಯದ ಪೈಕಿ ಮುಸ್ಲಿಂ ಸಮುದಾಯದ ಪ್ರತಿನಿಧಿನ್ವ ಶೇ.9.5. ಕ್ರಿಶ್ಚಿಯನ್‌ ಸಮುದಾಯ ಶೇ.0.06, ಜೈನ, ಸಿಖ್‌ ಮತ್ತು ಬೌದ್ಧ ಸಮುದಾಯದವರ ಪ್ರಮಾಣ ಶೇ.3ರಷ್ಟು ಇದೆ. ಇನ್ನು ಯಾದವರು, ರಜಪೂತರು, ಭೂಮಿಹಾರರು, ಕುಶ್ವಾಹಾ, ಪಾಸ್ವಾನ್‌, ರವಿದಾಸ ಸಮುದಾಯಕ್ಕೆ ಸೇರಿದವರೂ ಗಣನೀಯ ಪ್ರಮಾಣದಲ್ಲಿ ಇದ್ದಾರೆ.

ಗೆದ್ದಾಗ ಸಚಿವ: ರಾಂ ವಿಲಾಸ್‌ ಪಾಸ್ವಾನ್‌ ಪ್ರತಿಬಾರಿ ಗೆದ್ದಾಗಲೂ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಗಳ ಅವಧಿಯಲ್ಲಿ ವಿವಿಧ ಖಾತೆಗಳನ್ನು ಅವರು ನಿರ್ವಹಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಕ್ಷೇತ್ರದ ಜತೆಗೆ ಬರೋಬ್ಬರಿ ನಲವತ್ತು ವರ್ಷಗಳ ಕಾಲ ನಿಕಟ ಸಂಬಂಧ ಇರಿಸಿಕೊಂಡಿದ್ದಾರೆ. ಜನತಾ ಪರಿವಾರ ವಿಭಜನೆಗೊಂಡು ಪ್ರತ್ಯೇಕಗೊಂಡಾಗಲೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಬಿಹಾರದಲ್ಲಿ ಎನ್‌ಡಿಎ ಸ್ಥಾನ ಹೊಂದಾಣಿಕೆ ವೇಳೆ ತಮಗೆ ರಾಜ್ಯಸಭಾ ಸ್ಥಾನ ಬೇಕೇ ಬೇಕು ಎಂದು ಪಟ್ಟುಹಿಡಿದು ಗಿಟ್ಟಿಸಿಕೊಂಡವರು. ಹೀಗಾಗಿ, ಕ್ಷೇತ್ರದ ಜನತೆಗೆ ಅವರನ್ನು ನಿಜಕ್ಕೂ “ಕಳೆದುಕೊಂಡಂತೆ’ ಆಗಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕ್ಷೇತ್ರದ ಮತದಾರ ಜೋಗೇಶ್ವರ್‌ ಕುಶ್ವಾಹ ಹೇಳುವ ಪ್ರಕಾರ ಪ್ರತಿ ಬಾರಿಯೂ ನಾವು ಅವರಿಗೆ ಮತ ಹಾಕಿ ಆಯ್ಕೆ ಮಾಡುತ್ತಿದ್ದೆವು.

ನವದೆಹಲಿಯಲ್ಲಿರುವ ಅವರ ಕಚೇರಿಗೆ ತೆರಳಿದ್ದಾಗ ಯಾವ ರೀತಿಯಾಗಿ ಸಿಬ್ಬಂದಿ ಕ್ಷೇತ್ರದ ಜತೆಗೆ ನಡೆದುಕೊಳ್ಳುತ್ತಿದ್ದರು ಮತ್ತು ಯಾವ ರೀತಿಯ ಸಮಸ್ಯೆ, ಪರಿಹಾರ ಬೇಕಾದರೂ ಸ್ಪಂದಿಸುತ್ತಿದ್ದರು ಎನ್ನುವುದನ್ನು ಹತ್ತಿರದ ಬಂಧುಗಳು ಹೇಳುವುದನ್ನು ಕೇಳಿದ್ದೆ ಎಂದು ಹೇಳಿದ್ದಾರೆ. ಸದ್ಯ 72 ವರ್ಷ ವಯಸ್ಸಿನ ಅವರು ಕಾಂಗ್ರೆಸ್‌ ವಿರೋಧಿಸಿ ರಾಜಕೀಯ ಜೀವನ ಶುರು ಮಾಡಿದ್ದರೂ, ನಂತರದ ವರ್ಷಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಮತ್ತು ಬಿಜೆಪಿ ಮೈತ್ರಿಕೂಟದ ಜತೆಗೆ ಕೆಲಸ ಮಾಡಿದ್ದಾರೆ.

ಈ ಬಾರಿ ಕಣದಲ್ಲಿ
– ಪಶುಪತಿ ಕುಮಾರ್‌ ಪರಸ್‌ (ಎಲ್‌ಜೆಪಿ)
– ಶಿವಚಂದ್ರ ರಾಮ್‌ (ಆರ್‌ಜೆಡಿ)

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರು ಸಮಬಲರೇ ಆಗಿರುವ  ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು ಇವು ಅಮೇಠಿ (ಉತ್ತರ ಪ್ರದೇಶ) ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಸ್ಮತಿ...

  • ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ...

  • ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ...

  • ಹಝಾರಿಭಾಗ್‌ ಜಾರ್ಖಂಡ್‌ನ‌ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರ. ಸದ್ಯ ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮೂರು ಬಾರಿ ಪ್ರತಿನಿಧಿಸಿದ್ದ...

  • ಉತ್ತರ ಪ್ರದೇಶದ ಎಂಭತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಮುಖ ಕ್ಷೇತ್ರವೆಂದರೆ ಕಾನ್ಪುರ. 2014ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಡಾ.ಮುರಳೀ ಮನೋಹರ...

ಹೊಸ ಸೇರ್ಪಡೆ

  • ಅಮೆರಿಕ ವಿಶ್ವದ ಶ್ರೀಮಂತ, ಬಲಿಷ್ಠ, ಭವ್ಯ ರಾಷ್ಟ್ರ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ. 24 ಮತ್ತು 25 ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ....

  • ಕುಂಬಳೆ: ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಹೊಸಗದ್ದೆ ಮನೆಯ ದೀಲಿಪ್‌ ಕುಮಾರ್‌ ವತ್ಸಲಾ ದಂಪತಿ ಪುತ್ರ ಹೃದಯ್‌ ಹುಟ್ಟಿನಿಂದಲೇ ತೀವ್ರತರವಾದ...

  • ಮಂಗಳೂರು/ಉಡುಪಿ: ರಾಜ್ಯಾದ್ಯಂತ ಎ. 26ರಂದು ನಡೆಯಲಿರುವ "ಸಪ್ತಪದಿ' ಸಾಮೂಹಿಕ ಸರಳ ವಿವಾಹ ಯೋಜನೆಯನ್ನು ಬಡವರಿಗಾಗಿ ರೂಪಿಸಿದ್ದರೂ ಶ್ರೀಮಂತರು ಕೂಡ ಇಲ್ಲಿ ಸರಳ ವಿವಾಹವಾಗುವ...

  • ಜಮ್ಮು: ಕರ್ನಾಟಕ ತಂಡ ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತಲ್ಲದೆ ಅನನುಭವಿ ತಂಡವೊಂದರ ವಿರುದ್ಧ ಹಿನ್ನಡೆ...

  • ಜಾಗತಿಕ ತಾಪಮಾನ ಏರಿಕೆ 2050ರ ವೇಳೆಗೆ ಭಾರತದ ಜಿಡಿಪಿ ಬೆಳವಣಿ ಗೆಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎಂದು ಮೆಕಿನ್ಸೆ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌...