ಇಲ್ಲಿ ಪುತ್ರಿಯರ ನಡುವೆ ಸಮರ

Team Udayavani, Apr 29, 2019, 6:30 AM IST

ಮುಂಬೈನ ನಾರ್ತ್‌ ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಇಬ್ಬರು ಪ್ರಭಾವಶಾಲಿ ನೇತರಾರಾಗಿದ್ದವರ ಪುತ್ರಿಯರ ನಡುವೆ ಹೋರಾಟ ಎಂದು ಹೇಳಲಾಗುತ್ತದೆ. ಹಾಲಿ ಸಂಸದೆ,

ಬಿಜೆಪಿ ನಾಯಕಿ ಪೂನಂ ಮಹಾಜನ್‌ ದಿ.ಪ್ರಮೋದ್‌ ಮಹಾಜನ್‌ ಪುತ್ರಿ. ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪ್ರಿಯಾದತ್‌, ಮಾಜಿ ಸಚಿವ ಸುನೀಲ್‌ ದತ್‌ ಪುತ್ರಿ. 2009ರ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಸದಸ್ಯರಾಗಿದ್ದರು. ಹಾಲಿ ಸಂಸದೆ ಸತತ 2ನೇ ಬಾರಿಗೆ ಆಯ್ಕೆ ಬಯಸುತ್ತಿದ್ದಾರೆ.

ಪ್ರಿಯಾ ದತ್‌ ಪ್ರಚಾರ ನಡೆಸುವ ವೇಳೆ ಸಂವಿಧಾನವನ್ನು ರಕ್ಷಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರೆ, ಪೂನಂ ಮಹಾಜನ್‌ ದೇಶಕ್ಕೆ ನರೇಂದ್ರ ಮೋದಿಯವರೇ ಆಯ್ಕೆ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಅಂಶಗಳನ್ನೇ ಪ್ರಧಾನ ವಿಚಾರಗಳನ್ನಾಗಿರಿಸಿಕೊಂಡು ದೈನಂದಿನ ಪ್ರಚಾರ ನಡೆಯುತ್ತಿದೆ.

ಪ್ರಿಯಾ ದತ್‌ ಪ್ರಚಾರ ಮಾಡುವ ಸಂದರ್ಭದಲ್ಲಿ ಹಾಲಿ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಮತದಾರರು ಪ್ರಶ್ನೆ ಮಾಡಿದ್ದುಂಟು. ಅದಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಈ ಬಾರಿ ಬದಲಾವಣೆಯಾಗಲಿದೆ ಎಂದೂ ಹೇಳಿದ್ದರು. ಪೂನಂ ಮಹಾಜನ್‌ ಪ್ರತ್ಯುತ್ತರವಾಗಿ ರಜೆ, ವೀಕೆಂಡ್‌ ಎಂದು ಮತ ಚಲಾಯಿಸುವ ಕೆಲಸದಿಂದ ದೂರ ಹೋಗಬೇಡಿ.

2009 ಮತ್ತು 2014ನೇ ಸಾಲಿಗಿಂತ 2019ರ ಚುನಾವಣೆ ಹೆಚ್ಚಿನ ಮಹತ್ವದ್ದು ಎಂದು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಮುಕ್ತಾಯವಾಗುತ್ತಿದ್ದಂತೆ ಅಲ್ಲಲ್ಲಿ, ಸ್ಥಳೀಯ ನಿವಾಸಿಗಳು ಅವರ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದರು.

ಮುಸ್ಲಿಂ ಮತ ಪ್ರಾಮುಖ್ಯ: ಈ ಕ್ಷೇತ್ರದ ಒಟ್ಟು 16.45 ಲಕ್ಷ ನೋಂದಾಯಿತ ಮತದಾರರ ಪೈಕಿ ಶೇ.25 ಮಂದಿ (4.14 ಲಕ್ಷ) ಮುಸ್ಲಿಂ ಮತದಾರರೇ ಇದ್ದಾರೆ. ಹೀಗಾಗಿ, ಯಾವುದೇ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಿದರೂ, ಅವರು ಹಕ್ಕು ಚಲಾಯಿಸುವುದು ಪ್ರಾಮುಖ್ಯವೇ ಆಗುತ್ತದೆ. ಇನ್ನು ಮರಾಠಿ ಸಮುದಾಯ
5.59 ಲಕ್ಷ (ಶೇ.34), 77 ಸಾವಿರ ಕ್ರಿಶ್ಚಿಯನ್‌ ಸಮುದಾಯ (ಶೇ.5), 2.73 ಲಕ್ಷ ಉತ್ತರ ಭಾರತೀಯರು (ಶೇ.17), ರಾಜಸ್ಥಾನ ಮತ್ತು ಗುಜರಾತ್‌ನ ಮತದಾರರ ಸಂಖ್ಯೆ 1.80 ಲಕ್ಷ (ಶೇ.11), 1.05 ಲಕ್ಷ ಮಂದಿ ದಕ್ಷಿಣ ಭಾರತೀಯರು (ಶೇ.6) ಯಾವುದೇ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ.

ಪೂರ್ವ ಮತ್ತು ಪಶ್ಚಿಮ ಬಾಂದ್ರಾ, ಚಂಡಿವಲಿಯಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚು. ಜತೆಗೆ ಕುರ್ಲಾದಲ್ಲಿ ಸಮುದಾಯದ ಜನಸಂಖ್ಯೆ ಗಣನೀಯವಾಗಿಯೇ ಇದೆ. 2014ರಲ್ಲಿ ಮೋದಿ ಅಲೆ ಇದ್ದ ಕಾರಣ ತಾವು ಸೋಲಬೇಕಾಯಿತು. ಈ ಬಾರಿ ಅಂಥ ವಾತಾವರಣ ಇಲ್ಲ ಎನ್ನುತ್ತಾರೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾದತ್‌.

ಆರು ಕ್ಷೇತ್ರಗಳು: ವಿಲೇ ಪಾರ್ಲೆ (ಬಿಜೆಪಿ), ಚಂಡಿವಲಿ (ಕಾಂಗ್ರೆಸ್‌), ಕುರ್ಲಾ (ಶಿವಸೇನೆ), ಕಾಲಿನಾ (ಶಿವಸೇನೆ), ವಂಡ್ರೆ ಈಸ್ಟ್‌ (ಶಿವಸೇನೆ), ವಂಡ್ರೆ ವೆಸ್ಟ್‌ (ಬಿಜೆಪಿ). ಆರು ಕ್ಷೇತ್ರಗಳಲ್ಲಿ ಐದರಲ್ಲಿ ಬಿಜೆಪಿ-ಶಿವಸೇನೆ ಇರುವುದರಿಂದ ಪೂನಂ ಮಹಾಜನ್‌ಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೆ, ಮತದಾರನ ಅಂತರಂಗ ಬಲ್ಲವರಾರು?

2014ರ ಚುನಾವಣೆ‌

– ಪೂನಂ ಮಹಾಜನ್‌ (ಬಿಜೆಪಿ): 4,78, 535

– ಪ್ರಿಯಾ ದತ್‌ (ಕಾಂಗ್ರೆಸ್‌) : 2,91, 764


ಈ ವಿಭಾಗದಿಂದ ಇನ್ನಷ್ಟು

  • ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರು ಸಮಬಲರೇ ಆಗಿರುವ  ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು ಇವು ಅಮೇಠಿ (ಉತ್ತರ ಪ್ರದೇಶ) ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಸ್ಮತಿ...

  • ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ...

  • ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ...

  • ಹಝಾರಿಭಾಗ್‌ ಜಾರ್ಖಂಡ್‌ನ‌ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರ. ಸದ್ಯ ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮೂರು ಬಾರಿ ಪ್ರತಿನಿಧಿಸಿದ್ದ...

  • ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರತಿನಿಧಿಸುವ ಕ್ಷೇತ್ರವೇ ಹಾಜಿಪುರ. ಈ ಕ್ಷೇತ್ರದಿಂದ ಪ್ರಸಕ್ತ ಸಾಲಿನಲ್ಲಿ...

ಹೊಸ ಸೇರ್ಪಡೆ