ನಾವು ಗೆದ್ದರೆ,ಗ್ರಾಮೀಣ ಯುವಕರಿಗೆ ಉದ್ಯೋಗ
Team Udayavani, Mar 31, 2019, 6:00 AM IST
ನವದೆಹಲಿ: ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರಕ್ಕೇರಿದರೆ, ಗ್ರಾಮೀಣ ಪ್ರದೇಶದ ಲಕ್ಷಾಂತರ ಯುವಕರಿಗೆ ಗ್ರಾಮ ಸಭೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಶ್ವಾಸನೆ ನೀಡಿದ್ದಾರೆ.
ಶನಿವಾರ ಈ ಕುರಿತು ಟ್ವೀಟ್ ಮಾಡಿದ ಅವರು, “ದೇಶವು ತನ್ನ ಜಲಮೂಲ ಗಳನ್ನು ಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆ. ಜತೆಗೆ ಅರಣ್ಯೀಕರಣವನ್ನು ಹೆಚ್ಚಿಸಬೇಕಿದೆ.
ಪರಿಸರ ಸಂರಕ್ಷಣೆ ಹಾಗೂ ಸುಧಾರಣೆ ನಿಟ್ಟಿನಲ್ಲಿ ನಾವು ಗ್ರಾಮಸಭಾಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸುವ ಚಿಂತನೆ ನಡೆಸಿದ್ದೇವೆ. ಸದ್ಯದಲ್ಲೇ ಬಿಡುಗಡೆ ಯಾಗಲಿರುವ ಪಕ್ಷದ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಗೆ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಿದ್ದೇವೆ. ಜತೆಗೆ, ಕೃಷಿ ಸಮಸ್ಯೆ ಪರಿಹರಿಸುವ, ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲೂ ಮಾರ್ಗಸೂಚಿಗಳನ್ನು ಹೊರತರಲಿದ್ದೇವೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್
ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆ
ಭಾರತದಲ್ಲಿ 24ಗಂಟೆಯಲ್ಲಿ 1,675 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಅಲ್ಪ ಏರಿಕೆ
ಕುತುಬ್ ಮಿನಾರ್ ಉತ್ಖನನಕ್ಕೆ ಅವಕಾಶ ನೀಡಲ್ಲ: ಕೋರ್ಟ್ ಗೆ ಎಎಸ್ಐ ಲಿಖಿತ ಉತ್ತರ
ದೆಹಲಿ: ಏಳನೇ ಮಹಡಿಯಿಂದ ಜಿಗಿದು ಐಟಿ ಸಚಿವಾಲಯದ ವಿಜ್ಞಾನಿ ಆತ್ಮಹತ್ಯೆ