ಕಲಬುರಗಿಯಲ್ಲಿ ಜಾತಿ ಸಮೀಕರಣ ಜೋರು


Team Udayavani, Mar 23, 2019, 2:11 AM IST

umesh-jadhav.jpg

ಕಲಬುರಗಿ: ಹೈ ವೊಲ್ಟೆàಜ್‌ ಕ್ಷೇತ್ರವಾಗಿ ಮಾರ್ಪಟ್ಟಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲೀಗ ಜಾತಿವಾರು ಮತ ಸೆಳೆಯುವುದು ಹೇಗೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇದೇ ಕಾರಣಕ್ಕೆ ಆಯಾ ಸಮಾಜದ ಮುಖಂಡರನ್ನು ಪಕ್ಷದತ್ತ ಸೆಳೆಯುವ ಹಾಗೂ ಅವರ ಮನೆಗೆ ತೆರೆಮರೆಯಲ್ಲಿ ಹೋಗಿ ಹಿಂದಿನಿಂದ ಬೆಂಬಲಿಸುವಂತೆ ಕೋರಿ ಬರುತ್ತಿರುವ ಸಾಮಾನ್ಯ ಸಂಗತಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ಇತರ ನಾಯಕರು ಈ ಸಲ ಹೇಗಾದರೂ ಮಾಡಿ ಕಲಬುರಗಿ ಕ್ಷೇತ್ರದಲ್ಲಿ ಪಕ್ಷ ಗೆಲ್ಲಬೇಕು. ಜತೆಗೆ ಸೋಲಿಲ್ಲದ ಸರದಾರ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೇಬೇಕೆಂಬ ನಿಟ್ಟಿನಲ್ಲಿ ಭರ್ಜರಿಯಾಗಿಯೇ ಕಾರ್ಯತಂತ್ರ ರೂಪಿಸುತ್ತಿರುವುದರಿಂದ ಕ್ಷೇತ್ರ ದಿನೇ ದಿನೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಬಂಜಾರ ಸಮಾಜದ ಡಾ| ಉಮೇಶ ಜಾಧವ್‌, ಕೋಲಿ ಸಮಾಜದ ಬಾಬುರಾವ್‌ ಚಿಂಚನಸೂರ, ಹಿಂದುಳಿದ ವರ್ಗದ ಮಾಲೀಕಯ್ಯ ಗುತ್ತೇದಾರ ಅವರನ್ನು ಸೆಳೆದಿರುವ ಬಿಜೆಪಿ, ವೀರಶೈವ-ಲಿಂಗಾಯತ ಸಮಾಜದ ಡಾ| ಎ.ಬಿ. ಮಾಲಕರೆಡ್ಡಿ ಅವರನ್ನೂ ಈಗಾಗಲೇ ಸೆಳೆದಿದೆ. ಇದನ್ನೆಲ್ಲ ನೋಡಿದರೆ ಜಾತಿವಾರು ಮತಗಳನ್ನು ಸೆಳೆಯಲು ಬಹಳ ದಿನಗಳಿಂದ ತಂತ್ರಗಾರಿಕೆ ನಡೆದಿದ್ದು ಸಾಬೀತುಪಡಿಸುತ್ತದೆ.

2009ರಂತೆ ಕಠಿಣ ಪರಿಸ್ಥಿತಿ
2009ರ ಚುನಾವಣೆಯಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಕೇವಲ 13,404 ಮತಗಳ ಅಂತರಿಂದ ಚುನಾಯಿತರಾಗಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಮುಖ್ಯವಾಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ವೇಳೆಯಲ್ಲಿ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಐದು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್‌ ಹೊಂದಿತ್ತು. ಆದರೆ 2014ರ ಚುನಾವಣೆಯಲ್ಲಿ ಮೋದಿ ಹವಾ ನಡುವೆ ಅತ್ಯಧಿಕ 74 ಸಾವಿರ ಮತಗಳಿಂದ ಖರ್ಗೆ ಪುನರಾಯ್ಕೆಯಾದರು. ಅಭಿವೃದಿಟಛಿ ಕಾರ್ಯಗಳ ಮೇಲೆ ಮತಯಾಚಿಸಿದ್ದರಿಂದ ಹಾಗೂ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರು ಬಿಟ್ಟರೆ ಉಳಿದ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. ಆದರೆ ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂವರು ಬಿಜೆಪಿ ಶಾಸಕರಿದ್ದರೆ, ನಾಲ್ಕರಲ್ಲಿ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಇದೆನ್ನೆಲ್ಲ ಲೆಕ್ಕಚಾರ ಹಾಕಿದರೆ 2009ರಂತೆ ಕಾಂಗ್ರೆಸ್‌ ಪಕ್ಷಕ್ಕೆ ಸಂಕಷ್ಟ ಎದುರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿದ್ದ ಡಾ| ಎ.ಬಿ.ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು ಕಾಂಗ್ರೆಸ್‌ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಹಾಗೂ ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾಗಿದ್ದ ಡಾ| ಉಮೇಶ ಜಾಧವ್‌ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿರುವುದು ನಿಜಕ್ಕೂ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ ಎದುರಾದಂತಾಗಿದೆ.

ಏ.19ರಂದು ಮತ್ತೆ ಮೋದಿ?
ಮಾ.6ರಂದು ಚುನಾವಣೆ ಘೋಷಣೆ ಮುಂಚೆ ಕಲಬುರಗಿಗೆ ಬಂದು ಪಕ್ಷದ ರ್ಯಾಲಿ ಮುಖಾಂತರ ಚುನಾವಣಾ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಕಲಬುರಗಿಗೆ ಬಂದು ಪಕ್ಷದ ಪರ ಚುನಾವಣಾ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಏ.19ರಂದು ಕಲಬುರಗಿಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೋದಿ ಬಂದರೆ ವರ್ಷದಲ್ಲೇ ಪ್ರಧಾನಿಯಾಗಿ ಮೂರು ಸಲ ಕಲಬುರಗಿಗೆ ಬಂದಂತಾಗುತ್ತದೆ.

ಹೇಗಿದೆ ಜಾತಿ ಲೆಕ್ಕಾಚಾರ?
ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರ್ಣಾಯಕರು ಇವರಾದರೂ ಮತ ವಿಭಜನೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಬಿಜೆಪಿ ಲಿಂಗಾಯತ ಹಾಗೂ ಬಂಜಾರ ಸಮುದಾಯವನ್ನು ನೆಚ್ಚಿಕೊಂಡರೆ, ಕಾಂಗ್ರೆಸ್‌ ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ
ವರ್ಗದವರನ್ನು ನೆಚ್ಚಿಕೊಂಡಿದೆ. ಲೋಕಸಭೆ ಕ್ಷೇತ್ರದಲ್ಲಿ ಒಟ್ಟಾರೆ 19.20 ಲಕ್ಷ ಮತದಾರರಿದ್ದಾರೆ.
ಲಿಂಗಾಯತರು, ಕುರುಬರು ಹಾಗೂ ಕಬ್ಬಲಿಗರ ಮತಗಳೇ ನಿರ್ಣಾಯಕವಾಗಲಿದ್ದು, ಇವರು
ಯಾರ ಕಡೆ ಹೆಚ್ಚಿಗೆ ವಾಲುತ್ತಾರೆಯೋ ಅವರಿಗೆ ಲಾಭವಾಗುವ ನಿರೀಕ್ಷೆಯಿದೆ. ಲಿಂಗಾಯತರು
5.20 ಲಕ್ಷ, ಕುರುಬರು 2 ಲಕ್ಷ, ಪರಿಶಿಷ್ಟ ಜಾತಿ 4 ಲಕ್ಷವಿದ್ದರೆ ಇದರಲ್ಲಿ ಬಂಜಾರ ಸಮುದಾಯದವರು
1.65 ಲಕ್ಷ ಇದ್ದಾರೆ. ಅದೇ ರೀತಿ ಮುಸ್ಲಿಂ 3 ಲಕ್ಷ ಹಾಗೂ ಕಬ್ಬಲಿಗರು (ಕೋಲಿ ಸಮಾಜ) 2.20 ಲಕ್ಷ
ಎಂಬುದಾಗಿ ಅಂದಾಜಿಸಲಾಗಿದೆ. ಹೀಗಾಗಿ ಯಾವ ಸಮಾಜದ ಮತಗಳನ್ನು ಯಾವ ನಿಟ್ಟಿನಲ್ಲಿ
ಸೆಳೆದುಕೊಳ್ಳಬಹುದು ಎಂಬುದನ್ನು ಎರಡೂ ಪಕ್ಷಗಳು ಲೆಕ್ಕಾಚಾರದಲ್ಲಿ ಮುಳುಗಿವೆ.

ಟಾಪ್ ನ್ಯೂಸ್

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

14

UV Fusion: ಅವನೊಂದಿಗೆ ನಡೆವಾಸೆ

13-fusion

UV Fusion: ಏರಿಯಾ 51

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.