ಪತ್ರಕರ್ತನ ಕೈಗೆ ನಿಂಬೆಹಣ್ಣು ಕೊಟ್ಟ ಸಿದ್ದು!

Team Udayavani, Apr 18, 2019, 3:00 AM IST

ಕಲಬುರಗಿ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಿಂಬೆಹಣ್ಣಿನ ರಾಜಕೀಯ ಹೆಚ್ಚು ಚರ್ಚಿತವಾಗುತ್ತಿರುವ ಬೆನ್ನಲ್ಲೇ ಬುಧವಾರ ನಗರಕ್ಕಾಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ನಿಂಬೆ ಹಣ್ಣು ಕಾಣಿಸಿಕೊಂಡಿತ್ತು!

ಕಲಬುರ್ಗಿ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸಲು ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿದ್ದರಾಮಯ್ಯ ಅವರಿಗೆ ಮಾಧ್ಯಮದವರು ಸುತ್ತುವರಿದರು. ಆಗ ಅವರ ಕೈಯಲ್ಲಿದ್ದ ನಿಂಬೆ ಹಣ್ಣನ್ನು ಮಾಧ್ಯಮದವರೊಬ್ಬರು ಗುರುತಿಸಿ ಕೇಳಿದರು.

ಆಗ ಸಿದ್ದರಾಮಯ್ಯನವರು, “ಇಲ್ಲಪ್ಪಾ ನನಗೆ ವಿಮಾನ ನಿಲ್ದಾಣದಲ್ಲಿ ಯಾರೋ ನಿಂಬೆಹಣ್ಣನ್ನು ನನ್ನ ಕೈಗೆ ಕೊಟ್ಟರು. ಬೇಕಾದರೆ ತಗೋ..’ ಎಂದು ಪ್ರಶ್ನಿಸಿದ ಮಾಧ್ಯಮದ ವ್ಯಕ್ತಿಯ ಕೈಗಿತ್ತರು. “ಅದು ನಿಮ್ಮ ಕೈಯಲ್ಲಿರುವ ನಿಂಬೆಹಣ್ಣು. ನೀವೇ ಇಟ್ಟುಕೊಳ್ಳಿ’ ಎಂದು ಪತ್ರಕರ್ತ ಹೇಳಿದಾಗ, “ಬೇಡಪ್ಪಾ ಈ ಕುರಿತು ನನಗೆ ನಂಬಿಕೆ ಇಲ್ಲ. ನೀವೇ ಇಟ್ಟುಕೊಳ್ಳಿ’ ಎಂದು ಹೇಳಿ ಅಲ್ಲಿಂದ ಮುಂದೆ ತೆರಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ