“ಲೋಟಸ್‌ ವರ್ಸಸ್‌ ಲೂಟ್‌ ಅಸ್‌’: ಸಿ.ಟಿ. ರವಿ ವ್ಯಂಗ್ಯ

Team Udayavani, Apr 16, 2019, 6:49 AM IST

ಉಡುಪಿ/ಮಲ್ಪೆ: ಈ ಚುನಾವಣೆ ಭಾರತವನ್ನು ಗೆಲ್ಲಿಸುವ ಚುನಾವಣೆ. “ಲೋಟಸ್‌’ ಮತ್ತು “ಲೂಟ್‌ ಅಸ್‌’ ನಡುವೆ ನಡೆಯುತ್ತಿರುವ ಚುನಾವಣೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.

ಮಲ್ಪೆ ವಡಭಾಂಡೇಶ್ವರದಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ದೇಶವನ್ನು ಲೂಟಿ ಮಾಡಿದರು. ಪ್ರಧಾನಿ ಮೋದಿ ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ಇತ್ತೀಚೆಗೆ, “ಮೋದಿ ಮನೆ ಹಾಳಾಗ’ ಎಂದು ಟೀಕಿಸಿದ್ದಾರೆ. ಮೋದಿಗೆ ದೇಶವೇ ಮನೆ. ಮೋದಿ ಮನೆ ಹಾಳಾಗ ಅಂದರೆ ದೇಶ ಹಾಳಾಗು ತ್ತದೆ ಎಂದು ಬಣ್ಣಿಸಿದರು.

ಇದು ಚೌಕಿದಾರ್‌ ಮತ್ತು ಚೋರರ ನಡುವಿನ ಚುನಾವಣೆಯೂ ಹೌದು. ಮೋದಿ ಚೌಕಿದಾರರ ನೇತೃತ್ವ ವಹಿಸಿದ್ದರೆ, ದೇಶ ಲೂಟಿ ಮಾಡಿದ ಚೋರರ ಗುಂಪಿನ ನೇತೃತ್ವವನ್ನು ರಾಹುಲ್‌ ವಹಿಸಿದ್ದಾರೆ. ನಾವು ಚುನಾವಣೆಯಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಬೇಕಾಗಿದೆ ಎಂದರು.

ಹಾಲಿ ಸಂಸದೆ, ಭಾವೀ ಸಂಸದೆ!
ಶೋಭಾ ಕರಂದ್ಲಾಜೆಯವರನ್ನು ಸಂಬೋಧಿಸುವಾಗ ಶಾಸಕ ರಘುಪತಿ ಭಟ್‌ ಮತ್ತು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿಯವರು “ಹಾಲಿ ಸಂಸದರೂ ಭಾವೀ ಸಂಸದರೂ’ ಎಂದೇ ಉಲ್ಲೇಖೀಸಿದರು. ರ್ಯಾಲಿಯಲ್ಲಿ ಕೇಸರಿ ಪೇಟ ಧರಿಸಿದ ಚೌಕೀದಾರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...