ನಿಖಿಲ್ ಗೆ ಮಂಡ್ಯ ಸ್ಪರ್ಧೆ ಸುರಕ್ಷಿತವೋ, ಅಲ್ಲವೋ?

Team Udayavani, Mar 10, 2019, 1:17 AM IST

ಮಂಡ್ಯ: ಜೆಡಿಎಸ್‌ ಭದ್ರಕೋಟೆ, ಮಂಡ್ಯ ಕ್ಷೇತ್ರದೊಳಗೆ ಸುಮಲತಾ ಅವರ ರಾಜಕೀಯ ಪ್ರವೇಶ ಹೊಸ ಬಿರುಗಾಳಿಯನ್ನು ಎಬ್ಬಿಸಿದ್ದು, ಪಕ್ಷದ ವರಿಷ್ಠರನ್ನು ತಲ್ಲಣಗೊಳಿಸಿದೆ. ಹೀಗಾಗಿ, ಪುತ್ರನಿಗೆ ರಾಜಕೀಯ ಪಟ್ಟಾಭಿಷೇಕ ಮಾಡುವ ಕನಸು ಕಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿಲ್ಲೆಯೊಳಗಿನ ಮತದಾರರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರಸ್ತುತ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆಯಾ ಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಟೀಕೆಗಳನ್ನು ಸಹಿಸಿಕೊಳ್ಳದ ಜೆಡಿಎಸ್‌ ನಾಯಕರು, ಸುಮಲತಾ ಅವರನ್ನೇ ನೇರವಾಗಿ ಟಾರ್ಗೆಟ್‌ ಮಾಡಿಕೊಂಡು ನಡೆಸುತ್ತಿರುವ ವಾಗ್ಧಾಳಿ, ಜನಮಾನಸದೊಳಗೆ ಜೆಡಿಎಸ್‌ ವಿರೋಧಿ ಅಲೆ ಸೃಷ್ಟಿಸುತ್ತಿದೆ. ಹೀಗಾಗಿ, ಸ್ಥಳೀಯ ಪೊಲೀಸರು ಹಾಗೂಜನಪ್ರತಿನಿಧಿಗಳ ಮಾತಿನ ಮೇಲೆ ನಂಬಿಕೆ ಇಡದ ಕುಮಾರಸ್ವಾಮಿ, ರಾಜ್ಯ ಗುಪ್ತಚರ ಇಲಾಖೆಯಿಂದಲೇ ಮಂಡ್ಯ ಲೋಕಸಭಾ ಕ್ಷೇತ್ರದ ವಸ್ತುಸ್ಥಿತಿ ಅರಿಯುವ ಯತ್ನ ನಡೆಸಿದ್ದಾರೆ. ಜಿಲ್ಲೆಯ ಪ್ರತಿ ಜಿಪಂ ಕ್ಷೇತ್ರ, ಹೋಬಳಿ ವ್ಯಾಪ್ತಿಯಲ್ಲಿ ಪುತ್ರ ನಿಖೀಲ್‌ ಬಗ್ಗೆ ಜನಾಭಿಪ್ರಾಯ ಹೇಗಿದೆ?. ಕಳೆದ ವಿಧಾನಸಭಾ ಚುನಾವಣೆ ವೇಳೆ ಇದ್ದ ಜೆಡಿಎಸ್‌ ಪರ ವಾತಾವರಣ ಈಗಲೂ ಇದೆಯೇ?. ಜನಸಾಮಾನ್ಯರಲ್ಲಿ ನಿಜವಾಗಿಯೂ ಸುಮಲತಾ ಪರ ಒಲವಿದೆಯೋ ಅಥವಾ ಕೆಲವರು ಅಂಬಿ ಪರ ಅನುಕಂಪದ ಅಲೆ ಹುಟ್ಟು ಹಾಕುತ್ತಿದ್ದಾರೋ? ಎಂಬೆಲ್ಲಾ ಮಾಹಿತಿ ಸಂಗ್ರಹಿಸುವಂತೆಯೂ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ ಆಂತರಿಕ ಮನಸ್ಥಿತಿ ಹೇಗಿದೆ?: ಜಿಲ್ಲೆಯ ಜೆಡಿಎಸ್‌ನ ಆಂತರಿಕ ವಲಯದಲ್ಲಿ ಮುಖಂಡರು, ಕಾರ್ಯಕರ್ತರ ಮನಸ್ಥಿತಿ, ಕುಟುಂಬ ರಾಜಕಾರಣದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಇವರ ಪ್ರತಿಕ್ರಿಯೆ ಹೇಗಿದೆ?, ಇವರಿಂದಲೂ ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಹಾನಿ ಉಂಟಾಗುವ ಸಂಭವವಿದೆಯೇ?, ಸ್ಥಳೀಯ ಜೆಡಿಎಸ್‌ ಜನಪ್ರತಿನಿಧಿಗಳ ವಲಯದಲ್ಲಿ ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಯಾವ ಭಾವನೆ ಇದೆ. ಚುನಾವಣೆ ವೇಳೆ ಅವರಿಂದ ಒಳೇಟುಬೀಳುವ ಸಾಧ್ಯತೆಗಳಿವೆಯೇ? ಜಿಲ್ಲೆಯಲ್ಲಿ 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅಭಿವೃದಿಟಛಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಜೆಡಿಎಸ್‌ಗೆ ವರದಾನವಾಗಿ ಪರಿಣಮಿಸಿದೆಯೋ, ಇಲ್ಲವೋ ಎಂಬೆಲ್ಲಾ ಅಂಶಗಳೊಂದಿಗೆ ಗೆಲುವಿಗೆ ನೆರವಾಗುವ ಅಂಶಗಳನ್ನೂ ಅವಲೋಕನ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ಕ್ರಮ ಕೈಗೊಳ್ಳಿ: ವಾಟ್ಸಪ್‌, ಫೇಸ್‌ಬುಕ್‌ಗಳಲ್ಲಿ ಗೌಡರ ಕುಟುಂಬದ ವಿರುದಟಛಿ ಸುಖಾಸುಮ್ಮನೆ ಸುದ್ದಿ ಹರಿಬಿಡುತ್ತಿರುವವರ ವಿರುದಟಛಿವೂ ಕ್ರಮ ಕೈಗೊಳ್ಳುವಂತೆ ಸೈಬರ್‌ ಕ್ರೈಂ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಕುಟುಂಬ ರಾಜಕಾರಣದ ಬಗ್ಗೆ ನಾಲಿಗೆ ಹರಿಬಿಡುತ್ತಿರುವವನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಕುಮಾರಸ್ವಾಮಿ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಟೀಕೆಗಳು, ಚರ್ಚೆಗಳು, ವ್ಯಂಗ್ಯ, ಕುಹಕವಾಡುವುದಕ್ಕೆ ಕಡಿವಾಣ ಹಾಕುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಜೆಡಿಎಸ್‌ಗೆ ಅಳುಕು: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು ನಿಖೀಲ್‌ ಗೆಲ್ಲಿಸುವ ಬಗ್ಗೆ ವಾಗ್ಧಾನ ನೀಡಿದ್ದರೂ, ಕುಮಾರಸ್ವಾಮಿ ಅವರ ಮನಸ್ಸಿನೊಳಗಿನ ಅಳುಕು ದೂರವಾಗಿಲ್ಲ. ಮಂಡ್ಯ ಕ್ಷೇತ್ರದೊಳಗೆ ಜೆಡಿಎಸ್‌ ಹಿಡಿತ ಕೈತಪ್ಪಿ ಹೋಗದಂತೆ ಕಾಪಾಡಿಕೊಳ್ಳು ವುದರ ಜೊತೆಗೆ, ಪುತ್ರನಿಗೂ ಸುರಕ್ಷಿತವಾಗಿ ನೆಲೆ ಯನ್ನು ದೊರಕಿಸಿ ಕೊಡುವುದಕ್ಕೆ ರಣತಂತ್ರ ರೂಪಿಸುತ್ತಿದ್ದಾರೆ. ಆದರೆ, ಸುಮಲತಾ ಅವರು ಜೆಡಿಎಸ್‌ನ ಭದ್ರಕೋಟೆ ಯೊಳಗೆ ಏಕಾಂಗಿಯಾ ಗಿಯೇ ಸಂಚರಿಸುತ್ತಾ, ಸೃಷ್ಟಿಸುತ್ತಿರುವ ಅಂಬರೀಶ್‌ ಸಾವಿನ ಅನುಕಂಪದ ಕಂಪನಕ್ಕೆ ಜೆಡಿಎಸ್‌ ಬೆಚ್ಚಿ ಬೆರಗಾಗಿದೆ.

ಸುಮಲತಾ ಹಿಂದಿರುವವರು ಯಾರು?
ಮಂಡ್ಯ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷೆ ವ್ಯಕ್ತಪಡಿಸಿರುವ ಸುಮಲತಾ ಹಿಂದೆ ಯಾರ್ಯಾರು ಇದ್ದಾರೆ?. ಕಾಂಗ್ರೆಸ್‌ನ ಪರಾಜಿತ ನಾಯಕರು ದೂರದಿಂದಲೇ ಎಲ್ಲವನ್ನು ನಿಯಂತ್ರಣ ಮಾಡುತ್ತಿರುವರೇ?. ಸುಮಲತಾರನ್ನು ಭೇಟಿ ಮಾಡಿ ಬರುತ್ತಿರುವ ಮುಖಂಡರು, ಮಾನಸಿಕವಾಗಿ ಆಕೆಗೆ ಬೆಂಬಲವಾಗಿದ್ದಾರೆಯೋ? ಅಥವಾ ನಾಮ್‌ ಕೇ ವಾಸ್ತೆ ಬೆಂಬಲ ಘೋಷಿಸುತ್ತಿದ್ದಾರೋ? ಎಂಬ ಸೂಕ್ಷ್ಮಅಂಶಗಳನ್ನು ಗುಪ್ತಚರ ಮೂಲಗಳಿಂದ ಸಂಗ್ರಹಿಸಿ, ಅವೆಲ್ಲವನ್ನೂ ಅವಲೋಕನ ಮಾಡಿ ಚುನಾವಣಾ ಮಹಾಸಂಗ್ರಾಮಕ್ಕೆ Þವ ರೀತಿ ಕಾಲಿಡಬೇಕು ಎಂಬ ಬಗ್ಗೆ ಚಾಣಾಕ್ಷ ತಂತ್ರಗಾರಿಕೆ ರೂಪಿಸಲು ನ್ನದಟಛಿರಾಗುತ್ತಿದ್ದಾರೆ. ಜೊತೆಗೆ, ಮಂಡ್ಯ ಜಿಲ್ಲೆಯೊಳಗೆ ಜೆಡಿಎಸ್‌ನ ವರ್ಚಸ್ಸು ಕುಂದಿ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸ್ಥಳೀಯ ಮಟ್ಟದ ನಾಯಕರಿಗೆ ಸೂಚಿಸಿರುವ ಕುಮಾರಸ್ವಾಮಿ, ಮೈಸೂರು, ಮಂಡ್ಯ, ರಾಮನಗರದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರಿಗೆ ಈ ಕುರಿತಾದ ಜವಾಬ್ದಾರಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ ಮಂಜುನಾಥ್‌ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ