ದೀದಿ ಕೋಟೆಯಲ್ಲಿ ಮೋದಿ ಅಲೆ?

Team Udayavani, May 20, 2019, 7:06 AM IST

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಹಿಂಸಾಚಾರ, ಘರ್ಷಣೆ, ವಾಕ್ಸಮರಗಳನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ದೀದಿಯ ಭದ್ರಕೋಟೆಯನ್ನು ಒಡೆಯುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಯಶಸ್ವಿಯಾಗಲಿದೆಯೇ ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ.

ಬಂಗಾಳದಲ್ಲಿ ದೀದಿ ಪ್ರಭಾವ ಮುಂದುವರಿಯಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ಅಂದಾಜಿಸಿವೆ. ಬಂಗಾಳದಲ್ಲಿ ಟಿಎಂಸಿ ತನ್ನ ಪ್ರಾಬಲ್ಯವನ್ನು ಮುಂದುವರಿಸಲಿದೆ ಮಾತ್ರವಲ್ಲ ಈಗಿರುವುದಕ್ಕಿಂತಲೂ ಹೆಚ್ಚಿನ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಎಂದು ನ್ಯೂಸ್‌ 18ನ ಐಪಿಎಸ್‌ಒಎಸ್‌ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ. ಅದರ ಪ್ರಕಾರ, ಈಗ ಟಿಎಂಸಿ 34 ಸ್ಥಾನಗಳನ್ನು ಹೊಂದಿದ್ದು, ಈ ಸಂಖ್ಯೆ 36ರಿಂದ 38ಕ್ಕೇರಲಿದೆ ಎನ್ನಲಾಗಿದೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಇಂಡಿಯಾ ಟುಡೇ- ಮೈ ಇಂಡಿಯಾ ಎಕ್ಸಿಟ್‌ ಪೋಲ್‌, ಬಿಜೆಪಿ ಉತ್ತಮ ಸಾಧನೆ ಮಾಡುವುದಾಗಿ ತಿಳಿಸಿದೆ. ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ನಡುವೆ ಹೆಗಲೆಣೆಯ ಪೈಪೋಟಿ ನಡೆದಿದ್ದು, ಬಿಜೆಪಿ 19ರಿಂದ 22 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 19ರಿಂದ 23 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದೆ.

ಟೈಮ್ಸ್‌ ನೌ-ವಿಎಂಆರ್‌ ಸಮೀ ಕ್ಷೆಯು ಬಿಜೆಪಿ ಈ ಬಾರಿ 11 ಸೀಟು ಗಳಲ್ಲಿ ಗೆಲ್ಲಲಿದ್ದು, ಟಿಎಂಸಿ 28ರಲ್ಲಿ ಜಯ ಸಾಧಿಸಲಿದೆ ಎಂದಿದೆ. ಕಾಂಗ್ರೆಸ್‌ ಕೇವಲ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳ ಲಿದೆ ಎಂದೂ ಹೇಳಿದೆ. ಎಬಿಪಿ ಸಮೀಕ್ಷೆ ಪ್ರಕಾರ ಬಂಗಾಳದಲ್ಲಿ ಬಿಜೆಪಿ 16, ಟಿಎಂಸಿ 24 ಮತ್ತು ಕಾಂಗ್ರೆಸ್‌ 2ರಲ್ಲಿ ಗೆಲ್ಲಲಿದೆ. ಅಚ್ಚರಿ ಯೆಂದರೆ, ಎಲ್ಲ ಸಮೀಕ್ಷೆಗಳು ಕೂಡ ಎಡಪಕ್ಷಗಳು ಶೂನ್ಯ ಸಾಧನೆ ಮಾಡಲಿವೆ ಎಂದು ಹೇಳಿವೆ.

ಮತಗಟ್ಟೆ ಸಮೀಕ್ಷೆಗಳ ಈ ಫ‌ಲಿತಾಂಶವು ಮಮತಾ ಬ್ಯಾನರ್ಜಿ ಅವರನ್ನು ಕೆರಳಿಸಿದೆ. ಸಮೀಕ್ಷೆಗಳ ಭವಿಷ್ಯವನ್ನು ಅಲ್ಲಗಳೆದಿರುವ ಅವರು, ಇದನ್ನು ಯಾರೂ ನಂಬಬೇಡಿ. ಈ ರೀತಿಯ ಗಾಸಿಪ್‌ ಮೂಲಕ ಸಾವಿರಾರು ಇವಿಎಂಗಳನ್ನು ಬದಲಿಸಲು ಗೇಮ್‌ ಪ್ಲಾನ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ