ಮೋದಿ ಟೀಕಿಸುವ ಕಾಂಗ್ರೆಸ್‌ಗೆ ಜನ ಪಾಠ ಕಲಿಸ್ತಾರೆ

Team Udayavani, Apr 21, 2019, 3:00 AM IST

ತೀರ್ಥಹಳ್ಳಿ: “ಕೇಂದ್ರದಲ್ಲಿ 5 ವರ್ಷಗಳ ಯಶಸ್ವಿ ಆಡಳಿತ ನೀಡಿದ ನರೇಂದ್ರ ಮೋದಿ ಸಾಧನೆ ಮೆಚ್ಚಿ ನಾವು ಇಂದು ಮೋದಿ ಮೋದಿ ಎಂದು ಹೇಳುತ್ತಿದ್ದೇವೆ. ಆದರೆ 10 ವರ್ಷಗಳ ಕಾಲ ಕಾಂಗ್ರೆಸ್‌ನ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರು.

ಕಾಂಗ್ರೆಸ್‌ನವರೇಕೆ ಮನಮೋಹನ್‌ ಸಿಂಗ್‌ ಹೆಸರು ಹೇಳುತ್ತಿಲ್ಲ. ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ವಿಪಕ್ಷಗಳ ವಿರುದ್ಧ ಈ ರೀತಿ ಹರಿಹಾಯ್ದರು:

* ಭಾರತದ ಆರ್ಥಿಕ ಸುಧಾರಣೆಯ ಬಗ್ಗೆ, ಮೋದಿಯ ಸಾಧನೆಗಳ ಬಗ್ಗೆ ವಿಶ್ವವೇ ಇಂದು ಮಾತನಾಡುತ್ತಿದೆ. ಆದರೆ ವಿರೋಧ ಪಕ್ಷಗಳು ವ್ಯರ್ಥವಾಗಿ ಟೀಕೆ ಮಾಡುತ್ತಿವೆ.

* ಮುಖ್ಯಮಂತ್ರಿ ಕುಮಾರಸ್ವಾಮಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಸಂಯಮ ಕಳೆದುಕೊಂಡು ಅಸಂಬದ್ಧವಾಗಿ ಮಾತನಾಡಿರುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿಗಳ ಪರ ಪ್ರಚಾರ ನಡೆಸಿದವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಲಿದ್ದಾರೆ.

* ಗೌಪ್ಯತೆ ಕಾಪಾಡುವಂತೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ತೆಗೆದುಕೊಂಡ ಪ್ರಮಾಣವಚನದ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗಿದೆ. ಮುಖ್ಯಮಂತ್ರಿಗಳ ವರ್ತನೆ, ಸಂಯಮ ಕಳೆದುಕೊಂಡು ಮಾತನಾಡುತ್ತಿರುವುದು ತಮ್ಮ ಪಕ್ಷದ ಸೋಲಿನ ಭಯದಿಂದಾಗಿ. ಜೊತೆಗೆ ಈ ದೇಶದ ಸೈನಿಕರ ಬಗ್ಗೆಯೂ ಅವಮಾನ ಮಾಡಿ ಮಾತನಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ