ಶರತ್ ಮಡಿವಾಳ ಮನೆಗೆ ಭೇಟಿ ನೀಡಿ ಹೆತ್ತವರ ಅರೋಗ್ಯ ವಿಚಾರಿಸಿದ ನಳಿನ್ ಕುಮಾರ್ ಕಟೀಲ್
Team Udayavani, Apr 8, 2019, 7:29 PM IST
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಇವರು ದುಷ್ಕರ್ಮಿಗಳಿಂದ ವರುಷಗಳ ಹಿಂದೆ ಹತರಾದ ಶರತ್ ಮಡಿವಾಳ ಅವರ ಮನೆಗೆ ಭೇಟಿ ನೀಡಿ ಅವರ ತಂದೆ ತಾಯಿಯ ಆಶೀರ್ವಾದ ಪಡೆದು ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಬಂಟ್ವಾಳ ಮಂಡಲದ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಸುಲೋಚನಾ ಭಟ್, ಹರಿಕೃಷ್ಣ ಬಂಟ್ವಾಳ್, ಗಣೇಶ್ ರೈ ಮಾಣಿ, ಸಚ್ಚಿದಾನಂದ ಶೆಟ್ಟಿ ಮುಂಬೈ ಮೊದಲಾದವರು ಉಪಸ್ಥಿತರಿದ್ದರು.