ನಳಿನ್‌ಗೆ ಗೆಲುವು: ಕೋಟ ಶ್ರೀನಿವಾಸ ಪೂಜಾರಿ

Team Udayavani, Apr 11, 2019, 6:00 AM IST

ಮಂಗಳೂರು: ದೇಶ ಮೊದಲು ಎನ್ನುವವರ ಪರವಾಗಿ ಮತದಾರರಿರುವುದು ಸ್ಪಷ್ಟವಾಗಿದೆ. ದ.ಕ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವುದು ನಿಚ್ಚಳ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು, ದ.ಕ. ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳು ಮತ್ತು 1,861 ಮತಗಟ್ಟೆಗಳ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಮತದಾರರ ಒಲವು ಬಿಜೆಪಿ ಕಡೆಗಿದೆ. ಕೇಂದ್ರ ಸರಕಾರ ಕೈಗೊಂಡಿರುವ ಜನ ಕಲ್ಯಾಣ ಕಾರ್ಯಕ್ರಮ, ದೇಶದ ಸುರಕ್ಷತೆ ದೃಷ್ಟಿಯಿಂದ ಮೋದಿ ಕೈಗೊಂಡ ನಿರ್ಧಾರಗಳು ಮತ್ತು 10 ವರ್ಷಗಳಲ್ಲಿ ವ್ಯಾಪಕ ಜನ ಸಂಪರ್ಕವು ನಳಿನ್‌ ಗೆಲುವಿಗೆ ಸುಗಮ ದಾರಿಯಾಗಿದೆ ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ರದ್ದುಪಡಿಸುವ ಸ್ಪಷ್ಟ ಭರವಸೆ, ಸೌಹಾರ್ದದಿಂದ ರಾಮ ಮಂದಿರ ನಿರ್ಮಿಸುವ ಆಶ್ವಾಸನೆ ನೀಡಿದೆ. ಸಮಾನ ನಾಗರಿಕ ಸಂಹಿತೆ ಜಾರಿಗೆ ಬದ್ಧವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರವು ಕೇಂದ್ರದ ಜನಪರ ಯೋಜನೆಗಳನ್ನು ಜಾರಿ ಮಾಡಲು ಮತ್ತು ಅವು ಜನರಿಗೆ ತಲುಪದಂತೆ ಮಾಡಲು ಅಡ್ಡಗಾಲು ಹಾಕುತ್ತಿದೆ. ಕಿಸಾನ್‌ ಸಮ್ಮಾನ್‌ಗೆ ರಾಜ್ಯದ 76 ಲಕ್ಷ ರೈತರು ಅರ್ಹರಿದ್ದರೂ ಕೇವಲ 16 ಲಕ್ಷ ರೈತರ ಪಟ್ಟಿ ಮಾಡುವ ಮೂಲಕ ಕೇಂದ್ರದ ಯೋಜನೆಯನ್ನು ರೈತರಿಗೆ ತಲುಪದಂತೆ ಮಾಡುತ್ತಿದೆ ಎಂದು ಆರೋಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ