ಮತ ಹಾಕಿದ 111ರ ಅಜ್ಜ!

Team Udayavani, May 13, 2019, 6:00 AM IST

ರವಿವಾರ ನಡೆದ 6ನೇ ಹಂತದ ಮತದಾನದ ವೇಳೆ, ದಿಲ್ಲಿಯಲ್ಲಿ ಅತಿ ಹಿರಿಯ ಮತದಾರರೊಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬಚ್ಚನ್‌ ಸಿಂಗ್‌ ಹೆಸರಿನ ಇವರ ವಯಸ್ಸು 111. 2015ರ ದಿಲ್ಲಿ ವಿಧಾನಸಭಾ ಚುನಾವಣೆಯವರೆಗೂ ಪ್ರತಿ ಚುನಾವಣೆಯಲ್ಲೂ ಇವರು ಸೈಕಲ್‌ ತುಳಿದುಕೊಂಡೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದರು. ಆದರೆ, ಮೂರು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರಿಂದ ಈ ಬಾರಿ ಅವರನ್ನು ಚುನಾವಣಾಧಿಕಾರಿಗಳೇ ಕಾರಿನಲ್ಲಿ ಮತಗಟ್ಟೆಗೆ ಕರೆದು ತಂದು ಮತ ಹಾಕಲು ಸಹಾಯ ಮಾಡಿದ್ದು ವಿಶೇಷವಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ