ನೂರು ಶಿವಕುಮಾರರು ಬಂದರೂ ಏನೂ ಮಾಡಲಾಗಲ್ಲ: ಆಯನೂರು

Team Udayavani, Apr 2, 2019, 6:09 AM IST

ಶಿವಮೊಗ್ಗ: ನೂರು ಶಿವಕುಮಾರರು ಬಂದರೂ ಶಿವಮೊಗ್ಗದಲ್ಲಿ ಏನು ಮಾಡಲಾಗಲ್ಲ ಎಂದಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಮೇ.23ರ ಫಲಿತಾಂಶ ನನ್ನ ಮಾತಿಗೆ ಪುಷ್ಠಿ ನೀಡಲಿದೆ ಎಂದು ಎಂಎಲ್ಸಿ ಆಯನೂರು ಮಂಜುನಾಥ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ನಿಮ್ಮ ಪಕ್ಷಕ್ಕೆ ಕ್ಯಾಂಡಿಡೇಟ್‌ ಇಲ್ಲ. ಎರವಲು ಸೇವೆ ಪಡೆದಿದ್ದೀರಿ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಸರ್ವನಾಶ ಆಗಿದೆ. ಮಂಡ್ಯದಲ್ಲಿ ಓರ್ವ ಮಹಿಳೆ ವಿರುದ್ಧ ಎಲ್ಲರೂ ಸೇರಿ ಅರ್ಭಟಿಸುತ್ತಿದ್ದೀರಿ. ನೀವೆಲ್ಲ ತಂತ್ರ-ಕುತಂತ್ರ ಮಾಡುವುದಲ್ಲದೇ, ನಟರಿಗೆ ಬೆದರಿಕೆ ಹಾಕಿಸುತ್ತೀರಿ. ಓರ್ವ ಮಹಿಳೆ ವಿರುದ್ಧ ಗೆಲ್ಲಲು ಕಾಂಗ್ರೆಸ್‌-ಜೆಡಿಎಸ್‌ ತಿಣುಕಾಡ್ತಾ ಇದೆ. ಅಂತಹುದರಲ್ಲಿ ಶಿವಮೊಗ್ಗಕ್ಕೆ ಬಂದು ಮಾಡೋಕೆ ಏನ್‌ ಕೆಲಸ ಇದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರಿಗೆ ರೆಸ್ಟ್‌ ಬೇಕು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಜೀವನಪೂರ್ತಿ ದೇವೇಗೌಡರ ಮಕ್ಕಳ ವಿರುದ್ಧ ದೇÌಷ ಸಾ ಧಿಸಿಕೊಂಡು ಬಂದಿದ್ದರು. ಆದರೆ, ಈಗ ಒಲ್ಲದ ಮನಸ್ಸಿನಿಂದ ಮೂರನೇ ವ್ಯಕ್ತಿಯಿಂದ ಬಲವಂತವಾಗಿ ಜೊತೆಗಿದ್ದಾರೆ. ಬಿಎಸ್‌ವೈ ಹೆಸರು ತೆಗೆದುಕೊಂಡು ದೇವೇಗೌಡರನ್ನು ಟೀಕಿಸಿದ್ದಾರೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ