ಬೇರೆ ಗುಂಡಿ ಒತ್ತಿದರೆ ವಿದ್ಯುತ್‌ ಶಾಕ್‌

Team Udayavani, Apr 18, 2019, 6:00 AM IST

ಸಾಂದರ್ಭಿಕ ಚಿತ್ರ

ನೀವು ಇವಿಎಂನಲ್ಲಿ ಕಾಂಗ್ರೆಸ್‌ ಬಿಟ್ಟು ಬೇರೆ ಗುಂಡಿ ಒತ್ತಲು ಹೋದರೆ, ವಿದ್ಯುತ್‌ ಶಾಕ್‌ ಹೊಡೆಯುತ್ತದೆ ಎಂದು ಛತ್ತೀಸ್‌ಗಡದ ಸಚಿವ ಕವಾಸಿ ಲಕ್ಮ ಮತದಾರರಿಗೆ ಬೆದರಿಸುತ್ತಿದ್ದ ವಿಡಿಯೋವೊಂದು ವೈರಲ್‌ ಆಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದ್ದು, ಆಯೋಗ ಲಕ್ಮಗೆ ನೋಟಿಸ್‌ ಜಾರಿ ಮಾಡಿದೆ. ಜೊತೆಗೆ, 3 ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದೆ.

ಪೂನಂ ಸಿನ್ಹಾ ಕಣಕ್ಕೆ: ಉತ್ತರಪ್ರದೇಶದ ಲಕ್ನೋದಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ವಿರುದ್ಧ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾರನ್ನು ಬುಧವಾರ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಕಣಕ್ಕಿಳಿಸಿದೆ. ಪೂನಂ ಅವರು ಎಸ್‌ಪಿಗೆ ಸೇರ್ಪಡೆಯಾದ ಮಾರನೇ ದಿನ ಅಖೀಲೇಶ್‌ ಈ ಕುರಿತು ಘೋಷಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ