ಇಂದು ತಪ್ಪದೇ ಓಟ್‌ ಹಾಕಿ

ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ

Team Udayavani, Apr 18, 2019, 9:48 AM IST

ಬೆಂಗಳೂರು: ದೇಶದ ಪ್ರಜಾ ಪ್ರಭುತ್ವದ ಬಹುದೊಡ್ಡ ಹಬ್ಬ “ಮತ ಸಂಭ್ರಮ’ ಬಂದಾಯಿತು. ಏನೇ ಕೆಲಸವಿರಲಿ, ಅದನ್ನು ಒತ್ತಟ್ಟಿಗಿಟ್ಟು ಮತಗಟ್ಟೆಗೆ ಹೋಗಿ ಅಮೂಲ್ಯ ವಾದ ನಿಮ್ಮ ಓಟ್‌ ಹಾಕಿ ಬನ್ನಿ… ನಿಮ್ಮ ಜತೆಗೆ ನಿಮ್ಮ ಮನೆಯವ ರನ್ನೂ ಕರೆದುಕೊಂಡು ಹೋಗಿ… ನೆರೆ ಹೊರೆಯವರಿಗೂ ಓಟ್‌ ಹಾಕುವಂತೆ ಪ್ರೇರೇಪಿಸಿ…

ರಾಜ್ಯದಲ್ಲಿ ಎ.18 (ಗುರುವಾರ) ಮೊದಲ ಹಂತದ 14 ಕ್ಷೇತ್ರಗಳಿಗೆ ಮತದಾನ. ಇದರಲ್ಲಿ ಬೆಂಗಳೂರಿನ ನಾಲ್ಕು, ಹಳೇ ಮೈಸೂರು ಭಾಗದ ನಾಲ್ಕು, ಕರಾವಳಿ- ಅರೆ ಮಲೆನಾಡಿನ ಎರಡು, ಬಯಲು ಸೀಮೆಯ ನಾಲ್ಕು ಕ್ಷೇತ್ರಗಳು ಮತದಾನಕ್ಕೆ ಸಜ್ಜಾಗಿವೆ.

ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳು ತೆರೆದು ಮತದಾನವೂ ಆರಂಭವಾಗುತ್ತದೆ. ಸಂಜೆ 6ರ ವರೆಗೆ ಮತದಾನ ನಡೆಯುತ್ತದೆ. ಆದರೆ ನಿಮ್ಮ ಮನೆಯ ಸುತ್ತಲಿನ ಹವಾಮಾನ ಗಮನಿಸಿಕೊಳ್ಳಿ, ಬುಧವಾರ ಅಪರಾಹ್ನ ರಾಜ್ಯದ ಅಲ್ಲಲ್ಲಿ ಭರ್ಜರಿ ಮಳೆಯಾಗಿದೆ. ಗುರುವಾರವೂ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ಹೀಗಾಗಿ ಬೆಳಗ್ಗೆಯೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ.

ಆಯ್ಕೆ ಮಾಡಲಿರುವ ಪ್ರಮುಖರಿವರು
ಗುರುವಾರ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ 241 ಮಂದಿ ಅಭ್ಯರ್ಥಿಗಳಿದ್ದಾರೆ. ಕಣದಲ್ಲಿರುವ ಘಟಾನುಘಟಿಗಳೆಂದರೆ ಮಾಜಿ ಪ್ರಧಾನಿ ದೇವೇ ಗೌಡ, ಡಿ.ವಿ. ಸದಾನಂದಗೌಡ, ವೀರಪ್ಪ ಮೊಲಿ ಮತ್ತು ವಿ. ಶ್ರೀನಿವಾಸ ಪ್ರಸಾದ್‌.

ಹೊಸ ಮುಖಗಳು
ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ದಕ್ಷಿಣ ಕನ್ನಡ ದಲ್ಲಿ ಮಿಥುನ್‌ ರೈ, ಮಂಡ್ಯದಲ್ಲಿ ನಿಖೀಲ್‌ ಕುಮಾರಸ್ವಾಮಿ, ಕೋಲಾರದಲ್ಲಿ ಎಸ್‌.ಮುನಿಸ್ವಾಮಿ ಮೊದಲ ಹಂತದಲ್ಲಿರುವ
ಹೊಸ ಮುಖಗಳು.

ಹೈವೋಲ್ಟೇಜ್ ಕ್ಷೇತ್ರ
ಸದ್ಯಕ್ಕೆ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮಂಡ್ಯ ಕ್ಷೇತ್ರವೇ ಹೈ ವೋಲ್ಟೇಜ್ಜ್ ಪಡೆದು ಕೊಂಡಿದೆ. ಇಡೀ ದೇಶದ ಎಲ್ಲ ಸುದ್ದಿವಾಹಿನಿ ಗಳು ಮತ್ತು ಪತ್ರಿಕೆಗಳು ಹಾಗೂ ಜನ ಈ ಕ್ಷೇತ್ರದತ್ತಲೇ ದೃಷ್ಟಿ ನೆಟ್ಟಿ ದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿ ಗಳಿದ್ದರೂ ಸ್ಪರ್ಧೆ ಮಾತ್ರ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ನಡುವೆ. ಇದನ್ನು ಬಿಟ್ಟರೆ ದೇವೇ ಗೌಡ ಸ್ಪರ್ಧಿಸಿರುವ ತುಮಕೂರು ಮತ್ತು ವೀರಪ್ಪ ಮೊಲಿ ಸ್ಪರ್ಧಿ ಸಿರುವ ಚಿಕ್ಕಬಳ್ಳಾಪುರವನ್ನೂ ಹೈವೋಲ್ಟೆàಜ್‌ ಕ್ಷೇತ್ರದ ಪಟ್ಟಿಗೆ ಸೇರಿಸಿಕೊಳ್ಳಬಹುದು.

ಉತ್ತರದತ್ತ ನಾಯಕರು
ಬೆಂಗಳೂರು: ಮೊದಲ ಹಂತದ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೇ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಪ್ರಚಾರಕ್ಕಾಗಿ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿ ಪ್ರಮುಖ ನಾಯಕರು ಆ ಭಾಗದಲ್ಲಿ ಎ.21ರ ವರೆಗೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಗುರುವಾರ ಬಿಜಾಪುರ, ಬಾಗಲಕೋಟೆ, ಹಾವೇರಿ ಭಾಗದಲ್ಲಿ ಮೂರು ದಿನ ಸತತ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸಿದ್ದರಾಮಯ್ಯ ದಾವಣಗೆರೆ, ಬಾಗಲಕೋಟೆಯಲ್ಲಿ ಪ್ರಚಾರ ನಡೆಸುವರು.

ಚುನಾವಣೆಗೆ ಕರಾವಳಿ ಸರ್ವ ಸನ್ನದ್ಧ
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ಚುನಾವಣೆಯ ಕಾವು ಕೂಡ ಏರಿದ್ದು, ಗುರುವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ದ.ಕ., ಉಡುಪಿ ಜಿಲ್ಲೆ ಸನ್ನದ್ಧವಾಗಿದೆ.

ಬುಧವಾರ ಮಸ್ಟರಿಂಗ್‌ ಕಾರ್ಯ ನಡೆದಿದ್ದು, ಚುನಾವಣೆ ನಿರ್ವಹಿಸುವ ಎಲ್ಲ ಸಿಬಂದಿ ಪರಿಕರಗಳೊಂದಿಗೆ ಸಂಜೆ ಯೊಳಗೆ ಮತಗಟ್ಟೆಗಳಿಗೆ ತಲುಪಿದ್ದಾರೆ.
ದಕ್ಷಿಣ ಕನ್ನಡ ಕ್ಷೇತ್ರವ್ಯಾಪ್ತಿಯಲ್ಲಿ 17,24,460 ಮತದಾರರಿದ್ದು, ಇವರಲ್ಲಿ 8,45,308 ಮಂದಿ ಪುರುಷರು ಮತ್ತು 8,79,050 ಮಂದಿ ಮಹಿಳೆಯ ರಿದ್ದಾರೆ. 1,861 ಮತಗಟ್ಟೆಗಳಲ್ಲಿ ಮತ ದಾನ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಮತ್ತು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಿಥುನ್‌ ರೈ ಸಹಿತ 13 ಮಂದಿ ಕಣದಲ್ಲಿದ್ದಾರೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 15,13,940 ಮತದಾರರಿದ್ದು, 7,38,691 ಪುರುಷ ಮತ್ತು 7,75,102 ಮಹಿಳಾ ಮತ ದಾರ ರಿದ್ದಾರೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಸಹಿತ 12 ಮಂದಿ ಕಣದಲ್ಲಿದ್ದಾರೆ. ಎರಡೂ ಕಡೆ ಬಿರುಸಿನ ಮತ ಪ್ರಚಾರ ನಡೆದ ಬಳಿಕ ಬುಧವಾರ ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷದ ನಾಯಕರು ತೊಡಗಿಕೊಂಡರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಖಾತೆ ಹಂಚಿಕೆಗಾಗಿ ಹಗ್ಗಜಗ್ಗಾಟ...

  • ಬೆಂಗಳೂರು: ಕಾರು ಪಲ್ಟಿಯಾಗಿ ನಾಲ್ವರು ದುರ್ಮರಣಗೊಂಡು ಐವರು ಗಾಯಗೊಂಡ ಘಟನೆ ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿಯಲ್ಲಿ ನಡೆದಿದೆ. ನಂದಿ ಬೆಟ್ಟಕ್ಕೆ ತೆರಳುತ್ತಿದ್ದ...

  • ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಜಗಳ ವಿಕೋಪಕ್ಕೆ ತಿರುಗಿದ್ದು, ಗುರು ದೇವೇಗೌಡರ ವಿರುದ್ಧ ಶಿಷ್ಯ ಸಿದ್ದರಾಮಯ್ಯ ಪಾಯಿಂಟ್‌ ಟು ಪಾಯಿಂಟ್‌...

  • ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗುವುದಾಗಿ ಹೇಳಿ ಗುರುವಾರ ರಾತ್ರಿ ದಿಢೀರ್‌...

  • ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಾಡೆಲ್‌ವೊಬ್ಬರನ್ನು...

ಹೊಸ ಸೇರ್ಪಡೆ