ಕುದುರೆ ವ್ಯಾಪಾರದ ಮಾತು

Team Udayavani, Apr 30, 2019, 6:00 AM IST

“ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿ ದ್ದಂತೆ ಅವರೆಲ್ಲರೂ ಟಿಎಂಸಿಗೆ ಗುಡ್‌ಬೈ ಹೇಳಲಿದ್ದಾರೆ.’

ಲೋಕಸಭೆ ಚುನಾವಣೆ ಚಾಲ್ತಿಯಲ್ಲಿರುವಾಗಲೇ ಟಿಎಂಸಿ ಯ ಭದ್ರಕೋಟೆ ಪಶ್ಚಿಮ ಬಂಗಾಲದಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿ ಇಂಥದ್ದೊಂದು ಅಚ್ಚರಿಯ ಬಾಂಬ್‌ ಸಿಡಿಸಿದ್ದಾರೆ. ಸೋಮವಾರ ಪ.ಬಂಗಾಲದ ಶ್ರೀರಾಂಪುರದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಮೋದಿ, “ದೀದಿ ಅವರೇ ದಿಲ್ಲಿ ಬಹಳ ದೂರ ಇದೆ. ಈ ಚುನಾವಣೆಯ ಫ‌ಲಿತಾಂಶ ಬಂದಾಗ ನಿಮ್ಮ ಶಾಸಕರು ಕೂಡ ನಿಮ್ಮನ್ನು ಬಿಟ್ಟು ಹೋಗುತ್ತಾರೆ. ನಿಮ್ಮ 40 ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಒಮ್ಮೆ ಬಿಜೆಪಿ ಗೆದ್ದರೆ ಸಾಕು, ತತ್‌ಕ್ಷಣ ಅವರೆಲ್ಲ ಟಿಎಂಸಿಗೆ ರಾಜೀನಾಮೆ ಸಲ್ಲಿಸುತ್ತಾರೆ. ನಿಮ್ಮ ಕಾಲ ಕೆಳಗಿನ ರಾಜಕೀಯ ನೆಲ ಕುಸಿಯುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಮಮತಾರಿಗೆ ಸೋಲುವ ಭಯ ಕಾಡತೊಡಗಿರುವ ಕಾರಣವೇ, ಅವರು ಆಗಾಗ ಸಹನೆ ಕಳೆದುಕೊಳ್ಳುತ್ತಿ ರುವುದು. ಬೆರಳೆಣಿಕೆಯ ಸೀಟು ಗಳ ಮೂಲಕ ನೀವು ದಿಲ್ಲಿಗೆ ತಲುಪಲು ಸಾಧ್ಯವಿಲ್ಲ. ದಿಲ್ಲಿ ತುಂಬಾ ದೂರ ಇದೆ. ನೀವು ಪ್ರಧಾನಮಂತ್ರಿಯಾ ಗುವ ಕನಸನ್ನು ಕೂಡ ಕಾಣಲು ಸಾಧ್ಯವಾಗದು ಎಂದೂ ಹೇಳುವ ಮೂಲಕ ಮಮತಾರ ಕಾಲೆಳೆದಿದ್ದಾರೆ ಮೋದಿ.

ಮೋದಿಯಿಂದ ಕುದುರೆ ವ್ಯಾಪಾರ: 40 ಶಾಸಕರು ನಮ್ಮೊಂದಿಗಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಟಿಎಂಸಿ ಕೆಂಡಾಮಂಡಲ ವಾಗಿದೆ. ಮೋದಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಟಿಎಂಸಿ ನಾಯಕ ಡೆರೆಕ್‌ ಒಬ್ರಿಯಾನ್‌ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ ವಿರುದ್ಧ ಹರಿಹಾಯ್ದ ಅವರು, “ಎಕ್ಸ್‌ಪೈರಿ ಬಾಬು ಪಿಎಂ ಅವರೇ, ಈ ವಿಷಯ ನೆನಪಿಟ್ಟುಕೊಳ್ಳಿ. ನಿಮ್ಮೊಂದಿಗೆ ಯಾರೂ ಬರಲ್ಲ, ಒಬ್ಬ ಕೌನ್ಸಿಲರ್‌ ಕೂಡ ಬರುವುದಿಲ್ಲ. ನೀವೇನು ಚುನಾವಣಾ ಪ್ರಚಾರ ಮಾಡಲು ಬಂದಿದ್ದೀರಾ, ಕುದುರೆ ವ್ಯಾಪಾರಕ್ಕೆ ಬಂದಿದ್ದೀರಾ? ನಿಮ್ಮ ಎಕ್ಸ್‌ಪೈರಿ ದಿನಾಂಕ ಮುಗಿಯಿತು’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ