ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯಲು ನಾನು ಸಿದ್ದ : ಖರ್ಗೆ
Team Udayavani, Apr 21, 2019, 5:07 PM IST
ಕಲಬುರಗಿ : ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿಗರಿಗೆ ಸವಾಲೆಸೆದರು. ಕಲಬುರಗಿ ಮೀಸಲು ಕ್ಷೇತ್ರ ಇಲ್ಲಿಗೆ ಪ್ರಧಾನಿ ಮೋದಿ ಬರಲು ಸಾಧ್ಯವಿಲ್ಲ. ನಾನು ಇಲ್ಲಿಂದಲೆ ಸ್ಪರ್ಧಿಸಬೇಕು. ನೀವೆಲ್ಲಾ ಅನುಮತಿ ನೀಡಿದರೆ, ಪಕ್ಷ ಟಿಕೆಟ್ ನೀಡಿದರೆ ವಾರಣಾಸಿಯಿಂದ ನಾನು ಕಣಕ್ಕಿಳಿಯಲು ಸಿದ್ದನಿದ್ದೇನೆ ಎಂದರು.
ಕಲಬುರಗಿಯಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಭಾನುವಾರ ಸಂಜೆ ತೆರೆ ಬೀಳಲಿದ್ದು, ಭಾರೀ ರಣತಂತ್ರಗಳನ್ನು ಹಣೆಯಲಾಗುತ್ತಿದ್ದು, ರಾಜಕೀಯ ನಾಯಕರ ನಡುವೆ ತೀವ್ರ ಆರೋಪ – ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ.
ಮೈತ್ರಿ ಅಭ್ಯರ್ಥಿ ಖರ್ಗೆ ಮತ್ತು ಬಿಜೆಪಿಯ ಡಾ.ಉಮೇಶ್ ಜಾಧವ್ ಅವರ ನಡುವೆ ತೀವ್ರ ಹಣಾಹಣಿ ಇರುವ ಕಲಬುರಗಿ ಲೋಕಸಭಾ ಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲೊಂದು ಎನಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಷ್ಟಗಿ: ಕೃತಿಕಾ ಮಳೆಗೆ ಭರ್ತಿಯಾದ ರಾಯನಕೆರೆ; ಜನರಲ್ಲಿ ಸಂತಸ
ಕೆಸರು ತುಂಬಿ ಅವ್ಯವಸ್ಥೆಯ ಆಗರವಾದ ಕಲ್ಲಡ್ಕ ಪೇಟೆ
ದತ್ತಪೀಠದಲ್ಲಿ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ; ವಿಡಿಯೋ ವೈರಲ್
ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?