ದೇಗುಲದಲ್ಲಿ ವಾದ್ರಾಗೆ ಕೇಳಿಸಿದ್ದು ‘ಮೋದಿ ಮೋದಿ’ ನಾದ

Team Udayavani, May 11, 2019, 6:32 AM IST

ದೇಗುಲ ಪ್ರವೇಶಿಸಿದಾಗ ಎಲ್ಲರಿಗೂ ಗಂಟೆಯ ನಾದ, ಓಂಕಾರಗಳು ಕೇಳಿಸಿದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೆ ಮಾತ್ರ ‘ಮೋದಿ, ಮೋದಿ’ ಎಂಬ ಘೋಷಣೆ ಕೇಳಿಸಿದೆ! ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಶುಕ್ರವಾರ ವಾದ್ರಾ ಅವರು ಮುಂಬಾ ದೇವಿ ದೇಗುಲದಲ್ಲಿ ಪೂಜೆ ಸಲ್ಲಿಸಲೆಂದು ಅಲ್ಲಿಗೆ ಭೇಟಿ ನೀಡಿದ್ದರು. ವಾದ್ರಾ ಅವರು ದೇಗುಲ ದೊಳಕ್ಕೆ ಕಾಲಿಡುತ್ತಿದ್ದಂತೆ, ಅಲ್ಲಿದ್ದ ಜನರೆಲ್ಲ ‘ಮೋದಿ, ಮೋದಿ, ಮೋದಿ…’ ಎಂದು ಘೋಷಣೆ ಕೂಗಲಾರಂಭಿಸಿದರು. ಜತೆಗೆ, ಮೋದಿ ಜಿಂದಾಬಾದ್‌, ಭಾರತ್‌ ಮಾತಾಕೀ ಜೈ ಎಂದೂ ಕೂಗಲಾರಂಭಿಸಿದರು. ಇದರಿಂದ ವಾದ್ರಾ ತೀವ್ರ ಇರುಸು ಮುರುಸಿಗೊಳಗಾದರು. ಕೊನೆಗೆ ಪೊಲೀಸರೇ ಬಂದು, ವಾದ್ರಾರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಬಳಿಕ ಮಾತನಾಡಿದ ವಾದ್ರಾ, ‘ನಾನು ಪ್ರಾರ್ಥನೆ ಸಲ್ಲಿಸಲೆಂದು ದೇವಾಲಯಕ್ಕೆ ಬಂದಿದ್ದೇನೆ. ದೇಗುಲದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದಿದ್ದಾರೆ.

ಮೋದಿ ಮಹಿಷಾಸುರನಂತೆ; ಮಮತಾ ದುರ್ಗೆಯಂತೆ!
ಈ ‘ಲೋಕ’ ಸಮರದಲ್ಲಿ ಮತ್ತೆ ಪೌರಾಣಿಕ ಪಾತ್ರವೊಂದರ ಪ್ರಸ್ತಾಪವಾಗಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಮಹಿಷಾಸುರ’ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರನ್ನು ‘ಬಂಗಾಳದ ದುರ್ಗೆ’ ಎಂದು ಬಣ್ಣಿಸಿದ್ದಾರೆ. ‘ಬಂಗಾಲದ ದುರ್ಗೆಯು ಮಹಿಷಾಸುರನನ್ನು ಸೋಲಿಸಿ, ದೇಶದಲ್ಲಿ ಶಾಂತಿ ಮೂಡಿಸುತ್ತಾಳೆ’ ಎಂದು ನಾಯ್ಡು ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಚುನಾವಣೋತ್ತರ ಮಹಾಮೈತ್ರಿ ಕುರಿತು ಕೋಲ್ಕತಾದಲ್ಲಿ ಮಮತಾ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ನಾಯ್ಡು ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ, ‘ನಾಯ್ಡು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ’ ಎಂದಿದೆ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ