ಇಂಥ ಕಳಪೆ ಸರಕಾರ ಕಂಡಿರಲಿಲ್ಲ

Team Udayavani, Apr 21, 2019, 6:00 AM IST

ಕೇರಳದ ಕಣ್ಣೂರಿನಲ್ಲಿ ಶನಿವಾರ ಚುನಾವಣಾ ಪ್ರಚಾರದ ವೇಳೆ ಬಾಲಕನೊಂದಿಗೆ ಕುಶಲೋಪರಿ ವಿಚಾರಿಸಿದ ಪ್ರಿಯಾಂಕಾ ವಾದ್ರಾ.

“”ಇಲ್ಲಿಯವರೆಗೂ ಈ ದೇಶ ಇಂಥ ಕಳಪೆ ಪ್ರಧಾನಿಯನ್ನಾಗಲೀ, ಕಳಪೆ ಸರಕಾರವನ್ನಾಗಲೀ ಕಂಡಿರಲಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. ಕೇರಳದ ವಯನಾಡ್‌ನ‌ಲ್ಲಿ ಸಹೋದರ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪರ ಪ್ರಚಾರ ನಡೆಸಿದ ಅವರು, ಪುಲ್ಪಲ್ಲೆಯಲ್ಲಿ ನಡೆದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದರು.

“”ಸರಕಾರದ ಆಡಳಿತ ಲೋಪಗಳನ್ನು ಖಂಡಿಸಿದ ವರನ್ನು ರಾಷ್ಟ್ರದ್ರೋಹಿಗಳೆಂದು ಕರೆಯ ಲಾ  ಗುತ್ತಿದೆ. ಸಂವಿಧಾನಾತ್ಮಕ ಸಂಸ್ಥೆಗಳ ಶಕ್ತಿ ಕುಂದಿ ಸ ಲಾಗುತ್ತಿದೆ. ತಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ಬರಿಗಾಲದಲ್ಲಿ ನಡೆದು ಬಂದ ಸಾವಿ ರಾರು ರೈತರ ಮನವಿಯನ್ನು ಕೇಳುವ ಸೌಜನ್ಯ ಈ ಸರಕಾರಕ್ಕಿಲ್ಲ” ಎಂದು ಆರೋಪಿಸಿದರು.

ಇದೇ ವೇಳೆ, “”ಇಂಥ ಸರಕಾರವನ್ನು ಎದುರಿಸುತ್ತಿ ರುವ ರಾಹುಲ್‌ ಗಾಂಧಿ, ತಮ್ಮ ತಂದೆ (ರಾಜೀವ್‌ ಗಾಂಧಿ), ತಾಯಿ (ಸೋನಿಯಾ ಗಾಂಧಿ)ಯವರನ್ನು ಕಳ್ಳರು ಎಂದು ಕರೆದ ಪಕ್ಷದ ನಾಯಕರನ್ನು ಆಲಂಗಿಸಿ ಔದಾರ್ಯ ಮೆರೆದಿದ್ದಾರೆ” ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ರಿಗೆ ಅವಮಾನ ಮಾಡಿದವರ ಪರ ಬಿಎಸ್ಪಿ ನಾಯಕಿ ಮಾಯಾವತಿ ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂಬುದಕ್ಕೆ ಇದು ಸಾಕ್ಷಿ.
ಯೋಗಿ ಆದಿತ್ಯನಾಥ್‌,ಉ.ಪ್ರ.ಸಿಎಂ

ಬಹಿರಂಗವಾಗಿಯೇ “ಹಿಂದೂ ಭಯೋತ್ಪಾದನೆ’ ಎಂಬ ಪದ ಬಳಕೆ ಮಾಡಿದ್ದ ಆರ್‌.ಕೆ.ಸಿಂಗ್‌ ಅವರಿಗೆ ಬಿಜೆಪಿ ಲೋಕಸಭಾ ಟಿಕೆಟ್‌ ನೀಡಿದ್ದಲ್ಲದೆ, ಕೇಂದ್ರ ಸಚಿವ ಸ್ಥಾನವನ್ನೂ ನೀಡಲಿಲ್ಲವೇ? ಇದಕ್ಕೇನಂತೀರಿ?
ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ನಾಯಕ

ನನ್ನ ಕೈ ಹಿಡಿದುಕೊಂಡೇ ರಾಜಕೀಯಕ್ಕೆ ಬಂದೆ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ, ಈಗ ಪ್ರಧಾನಿ ಮೋದಿ ಅವರು ನನಗೆ ಏನು ಮಾಡುತ್ತಾರೋ ಎಂಬ ಭಯ ನನ್ನನ್ನು ಕಾಡುತ್ತಿದೆ.
ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

ಪ್ರಧಾನಿ ಮೋದಿ ಸರಕಾರ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳ ಹಿತಕ್ಕಾಗಿ ಬಲಿಕೊಡುತ್ತಾ ನಿಜವಾದ ರಾಷ್ಟ್ರದ್ರೋಹಿ ಆಗಿದ್ದಾರೆ. ಮತ ಪಡೆಯಲು ಹುಸಿ ರಾಷ್ಟ್ರ ವಾದದ ಬಗ್ಗೆ ಮಾತನಾಡುವುದನ್ನು ಬಿಟ್ಟು ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ.
ನವಜೋತ್‌ ಸಿಧು, ಕಾಂಗ್ರೆಸ್‌ ನಾಯಕ

ಯುವಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪುನರಾಯ್ಕೆ ಆಗುವುದು ಬೇಕಿದೆ. ದೇಶವನ್ನು ಸದೃಢಗೊಳಿಸುವ ಕೆಲಸ ಮೋದಿಯಿಂದ ಮಾತ್ರ ಸಾಧ್ಯ ಎಂದು ಅವರಿಗೆ ತಿಳಿದಿದೆ.
ತ್ರಿವೇಂದ್ರ ಸಿಂಗ್‌ ರಾವತ್‌, ಉತ್ತರಾಖಂಡ ಮುಖ್ಯಮಂತ್ರಿ


ಈ ವಿಭಾಗದಿಂದ ಇನ್ನಷ್ಟು

 • ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸುದ್ದಿವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿವೆ. 13 ಸಮೀಕ್ಷೆಗಳ ಪೈಕಿ ಆರರಲ್ಲಿ...

 • ಲೋಕಸಭೆ ಚುನಾವಣೆಯ ಜೊತೆಗೆ ಈ ಬಾರಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ...

 • ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಹಿಂಸಾಚಾರ, ಘರ್ಷಣೆ, ವಾಕ್ಸಮರಗಳನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ದೀದಿಯ ಭದ್ರಕೋಟೆಯನ್ನು ಒಡೆಯುವಲ್ಲಿ ಪ್ರಧಾನಿ...

 • ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ನಿರೀಕ್ಷೆಯಂತೆಯೇ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಊಹಿಸಿವೆ....

 • ಮತಗಟ್ಟೆಗೆ ಮುಸುಕು (ಪರ್ದಾ) ಹಾಕಿಕೊಂಡು ಬರುವ ಮಹಿಳೆಯರು, ಮುಸುಕು ತೆಗೆದು ಮತದಾನ ಮಾಡಬೇಕು ಎಂದು ಕೇರಳದ ಸಿಪಿಎಂ ನಾಯಕ ಎಂ.ವಿ. ಜಯರಾಜನ್‌ ನೀಡಿರುವ ಹೇಳಿಕೆಯೊಂದು...

ಹೊಸ ಸೇರ್ಪಡೆ

 • ಗದಗ: ವಿಕಲಚೇತನರ ಪಾಲಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಓಡಿಸುವುದಕ್ಕಿಂತ ನಿಲ್ಲಿಸಿದಾಗ ತಿರುಗಿಸುವುದೇ ದೊಡ್ಡ ಸವಾಲು. ದಿವ್ಯಾಂಗರ ಈ ಸಮಸ್ಯೆಗೆ...

 • ಯಾದಗಿರಿ: ನಗರ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ ಮಲದ ಗುಂಡಿಗಿಳಿದು ಕಾರ್ಮಿಕನೊಬ್ಬ ಪೈಪ್‌ಲೈನ್‌ ಸ್ವಚ್ಛಗೊಳಿಸಿರುವ ಅಮಾನವೀಯ ವರದಿಯನ್ನು ಮಾರ್ಚ್‌ 27ರಂದು...

 • ಕೋಲಾರ: ವಿದ್ಯಾರ್ಥಿಗಳಿಗೆ ಉದ್ಯೋಗದ ಜೊತೆಗೆ ಸಾಧನೆ ಮಾಡಲು ಆತ್ಮವಿಶ್ವಾಸ ಬಹಳ ಮುಖ್ಯವಾಗಿದೆ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ...

 • ಶಿರಹಟ್ಟಿ: ಸಮಾಜದ ಸ್ವಾಸ್ಥ್ಯ ಕಾಪಾಡಲು ಧರ್ಮ ಮತ್ತು ಮಠಮಾನ್ಯಗಳೇ ಕಾರಣವಾಗಿದ್ದು, ಸಮಾಜದ ಜನತೆ ಇದನ್ನೇ ನಂಬಿ ಮಠಗಳಿಗೆ ಗೌರವ ನೀಡುತ್ತಿವೆ. ಮಠಾಧಿಧೀಶರು...

 • ಕೋಲಾರ: ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದ್ದು, ಇವೆರಡೂ ಇಲಾಖೆ ಸರಿಪಡಿಸಿದರೆ ಮಾತ್ರ ಭ್ರಷ್ಟಾಚಾರ ಎನ್ನುವುದು ಶೇ.5 ಹತೋಟಿಗೆ ಬಂದು ಜನಸಾಮಾನ್ಯರು...

 • ಏಟು ತಿಂದ ಬೋರ್‌ವೆಲ್‌ಮೇಲ್ವಿಚಾರಕ ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಬೋರ್‌ವೆಲ್‌ ಕಾಮಗಾರಿಯ ಮೇಲ್ವಿಚಾರಣೆ...