ಈ ವಾರವೇ ಅಂಬರೀಶ್‌ “ಲಕ್ಕಿ’ ಮನೆಗೆ ಸುಮಲತಾ

Team Udayavani, Mar 14, 2019, 2:08 AM IST

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗೆ ಆಸಕ್ತಿ ತೋರಿರುವ ಸುಮಲತಾ ಅವರು ಮನೆ ಬಾಡಿಗೆ ಪಡೆಯಲು ಮಾಲೀಕರೊಂದಿಗೆ ಚರ್ಚೆ ನಡೆಸಿದ್ದಾರೆ. ಇಲ್ಲಿನ ಚಾಮುಂಡೇಶ್ವರಿ ನಗರದ ಮೂರನೇ ತಿರುವಿನಲ್ಲಿರುವ ಹರೀಶ್‌ಕುಮಾರ್‌ ಮಾಲೀಕತ್ವದ ಮನೆಗೆ ಮಂಗಳವಾರ ರಾತ್ರಿ ಸುಮಲತಾ ಅಂಬರೀಶ್‌ ಹಾಗೂ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮನೆಯನ್ನು ಬಾಡಿಗೆ ಪಡೆಯುವ  ಕುರಿತು ಮಾಲೀಕರೊಂದಿಗೆ ಚರ್ಚೆನಡೆಸಿದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್‌ ಬಾಡಿಗೆ ಪಡೆದಿದ್ದ ಮನೆಯಲ್ಲೇ ವಾಸವಿರಲು ಸುಮಲತಾ ನಿರ್ಧರಿಸಿದ್ದಾರೆ. ಈ ವಾರದೊಳಗೆ ಮನೆಯನ್ನು ಬಾಡಿಗೆ ಪಡೆದು, ಗೃಹಪ್ರವೇಶ ಮಾಡುವ ಕುರಿತು ಮನೆ ಮಾಲೀಕ ಹರೀಶ್‌ ಕುಮಾರ್‌ ಜೊತೆ ಮಾತುಕತೆ ನಡೆಸಿದ್ದಾರೆ. ಅಂಬರೀಶ್‌ಗೆ ಸತತ ಎರಡು ಸೋಲಿನ ಬಳಿಕ ಗೆಲುವು ತಂದುಕೊಟ್ಟಿದ್ದ ಲಕ್ಕಿ ಮನೆಗೆ ಸುಮಲತಾ ಕಾಲಿಡಲಿದ್ದು, ಅವರೂ ಸಹ ಗೆಲುವಿನ ಉತ್ಸಾಹದಲ್ಲಿದ್ದಾರೆ.

ಜನರ ಪ್ರತಿಕ್ರಿಯೆ ಅದ್ಭುತವಾಗಿದೆ
ಮಳವಳ್ಳಿ: ತಮ್ಮ ಸ್ಪರ್ಧೆಗೆ ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸುಮಲತಾ ಪ್ರತಿಪಾದಿಸಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ಪ್ರಚಾರ ಸಭೆ ನಡೆಸಿದ ಅವರು, “ನನ್ನ ಸ್ಪರ್ಧೆಗೆ ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರುಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ. ಅಭಿಷೇಕ್‌ ಇಂದಿನಿಂದ ಪ್ರಚಾರಕ್ಕೆ ಬಂದಿದ್ದಾನೆ.ನನ್ನ ಮಾವ ಹುಚ್ಚೇಗೌಡರ ಊರು ಮಳವಳ್ಳಿ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ